More

    ಮಡಿಕೇರಿಯಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ

    ಮಡಿಕೇರಿ:

    ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಶಿಕ್ಷಣ ಪಡೆಯುವುದರ ಜೊತೆಗೆ ತಂಬಾಕು ಮುಕ್ತ ವಾತಾವರಣವನ್ನಾಗಿಸಲು ಶ್ರಮಿಸಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಸಾದ್ ಹೇಳಿದರು. “ನಮಗೆ ಆಹಾರ ಬೇಕು, ತಂಬಾಕು ಅಲ್ಲ” ಎಂಬ ಧ್ಯೇಯ ವಾಕ್ಯದೊಂದಿಗೆ ಬುಧವಾರ ಇಲ್ಲಿನ ಸರ್ಕಾರಿ ಪ್ರೌಢ ಶಾಲಾ ಸಭಾಂಗಣದಲ್ಲಿ ನಡೆದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಆರೋಗ್ಯ, ಶಿಕ್ಷಣ, ಸಂಸ್ಕೃತಿ ಈ ಎಲ್ಲವೂ ಪ್ರಾರಂಭವಾಗುವುದು ಶಾಲಾ ದಿನಗಳಲ್ಲಿ. ವಿದ್ಯಾರ್ಥಿಗಳ ಜೀವನ ಪ್ರಾರಂಭವಾಗುವುದೇ ಶಾಲಾ ದಿನಗಳಲ್ಲಿ, ಆದ್ದರಿಂದ ಯಾವುದೇ ರೀತಿಯ ದುಶ್ಚಟಗಳಿಗೆ ಬಲಿಯಾಗದೆ ತಮ್ಮನ್ನು ತಾವು ರಕ್ಷಿಸಿಕೊಂಡು ಕುಟುಂಬವನ್ನು ರಕ್ಷಿಸುವುದರ ಜತೆಗೆ ಸಮಾಜವನ್ನು ರಕ್ಷಿಸಬೇಕು. ಇಂತಹ ದುಶ್ಚಟಗಳನ್ನು ಸಮಾಜದಿಂದ ಹೋಗಲಾಡಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಬೇರೆ ಬೇರೆ ಸಂಘ ಸಂಸ್ಥೆಗಳ ಜೊತೆಗೆ ಎಲ್ಲರೂ ಕೈ ಜೋಡಿಸಿದರೆ ಮಾತ್ರ ಸಾಧ್ಯ ಎಂದರು.

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಕುಮಾರ್ ಮಾತನಾಡಿ ೮ ರಿಂದ ೯ ನೇ ತರಗತಿಯ ವಯಸ್ಸಿನ ಮಕ್ಕಳು ಅತಿ ಹೆಚ್ಚು ತಂಬಾಕು ವ್ಯಸನಕ್ಕೆ ಒಳಗಾಗುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಎಂದರೆ ತಂಬಾಕು ಸೇವನೆ ಮಾಡಿದರೆ ಏನಾಗುತ್ತದೆ ಎಂಬ ಕುತೂಹಲ ಅವರಲ್ಲಿರುತ್ತದೆ. ಈ ಕುತೂಹಲ ಶಿಕ್ಷಣ, ಸಂಸ್ಕೃತಿಯಲ್ಲಿರಬೇಕೇ ಹೊರತು ದುಶ್ಚಟಗಳಿಗಲ್ಲ ಎಂದು ಹೇಳಿದರು.

    ಜಿಲ್ಲಾ ಕಾರ್ಮಿಕ ಅಧಿಕಾರಿ ಹ?ರ್ವರ್ಧನ್ ಮಾತನಾಡಿ ತಂಬಾಕು ಸೇವನೆ ಅತಿ ಹೆಚ್ಚಾಗಿ ಸಿಗರೇಟ್ ಮುಖಾಂತರ ಆಗುತ್ತಿದೆ. ಅಕ್ಕಪಕ್ಕದ ಜನರು ತಂಬಾಕು ಸೇವನೆ, ಧೂಮಪಾನ ಮಾಡುವಂತಹ ಸಂದರ್ಭದಲ್ಲಿ ಅವರು ಬಿಡುವಂತಹ ಹೊಗೆಯಿಂದಲು ಸಹ ದು?್ಪರಿಣಾಮಗಳು ಉಂಟಾಗುತ್ತಿದೆ. ಪ್ರತಿ ವ?ರ್ ತಂಬಾಕು ಹೊಗೆ ಸೇವನೆಯಿಂದ ಸುಮಾರು ೧೨ ಲಕ್ಷಕ್ಕೂ ಅಧಿಕ ಮಂದಿ ಜನರು ಸಾವನ್ನಪ್ಪುತ್ತಿದ್ದಾರೆ. ಎಂದರು.

    ಜಿಲ್ಲಾ ದಂತ ನೋಡೆಲ್ ಅಧಿಕಾರಿ ಡಾ.ರೇವಣ್ಣ ಮಾತನಾಡಿದರು. ಇದೇ ಸಂದರ್ಭ ಸರ್ಕಾರಿ ಪ್ರೌಡಶಾಲೆಗೆ ಹೊಸದಾಗಿ ಪ್ರವೇಶ ಪಡೆದ ೧೫ ವಿದ್ಯಾರ್ಥಿಗಳನ್ನು ಹೂ ಗುಚ್ಛ ನೀಡಿ ಶಿಕ್ಷಕರು ಬರಮಾಡಿಕೊಂಡರು. .
    ಆರ್‌ಸಿಎಚ್ ಅಧಿಕಾರಿ ಡಾ.ಗೋಫಿನಾಥ್, ನೌಕರರ ಸಂಘದ ಅಧ್ಯಕ್ಷರಾದ ಶ್ರೀನಿವಾಸ್, ಎಸ್‌ಡಿಎಂಸಿ ಅಧ್ಯಕ್ಷ ಚಂದ್ರಶೇಖರ್, ತಂಬಾಕು ನಿಯಂತ್ರಣಾಧಿಕಾರಿ ಶ್ರೀನಿವಾಸ್ ಬಿ.ಎಲ್., ಉಪ ಪ್ರಾಂಶುಪಾಲರು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts