More

    ವಾರ್ಡ್‌ಗೆ ಸಮರ್ಪಕವಾಗಿ ನೀರು ಪೂರೈಸಿ

    ಕಂಪ್ಲಿ: ತಾಲೂಕಿನ ದೇವಲಾಪುರ ಗ್ರಾಮದ 4ನೇವಾರ್ಡ್ ಬನ್ನಿಮಹಾಂಕಾಳಿ ದೇವಸ್ಥಾನ ಪ್ರದೇಶದಲ್ಲಿ ನೀರಿನ ತೊಂದರೆಯಾಗಿದೆ ಎಂದು ಅಲ್ಲಿನ ನಿವಾಸಿಗಳು ಖಾಲಿ ಕೊಡ ಹಿಡಿದು ಬುಧವಾರ ಗ್ರಾಪಂಗೆ ಧಾವಿಸಿ ಸಮರ್ಪಕ ನೀರಿಗಾಗಿ ಒತ್ತಾಯಿಸಿದರು.

    ಇದನ್ನು ಓದಿ: ದಾಹದಿಂದ ದಣಿದಿದ್ದ ಮಂಗಗಳಿಗೆ ಬಿಸ್ಕೆಟ್​, ನೀರು ಕೊಟ್ಟ ಗೌರಿ ಶ್ರುತಿ!

    ಗ್ರಾಮದ ನಿವಾಸಿ ಕೆ.ಮಹೇಶ್ ಮಾತನಾಡಿ, ದೇವಲಾಪುರ ಗ್ರಾಮದ ಸೀನಪ್ಪನ ಅಂಗಡಿ ಓಣಿ, ಕುರೇಕುಪ್ಪ ಮಹೇಶ ಓಣಿ ಹಾಗೂ ಅಂಗನವಾಡಿ ಶಾಲೆ ಓಣಿಗಳ ಸುಮಾರು 60ಮನೆಗಳಿಗೆ ಕಳೆದ ಕೆಲ ದಿನಗಳಿಂದ ಸಮರ್ಪಕ ನೀರು ಪೂರೈಕೆಯಾಗುತ್ತಿಲ್ಲ. ನೀರಿಗಾಗಿ ಬೇರೆ ಓಣಿಗಳಿಗೆ ತೆರಳಿದರೆ ಅಲ್ಲಿನ ಜನತೆ ಆಕ್ಷೇಪಿಸುತ್ತಾರೆ.

    ಸಮರ್ಪಕ ನೀರು ಪೂರೈಕೆಗೆ ಒತ್ತಾಯಿಸಿ ಗ್ರಾಮ ಆಡಳಿತವನ್ನು ಅನೇಕ ಬಾರಿ ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ. ಸಮರ್ಪಕ ನೀರು ಪೂರೈಸಲು ಗ್ರಾಮಾಡಳಿತ ಮುಂದಾಗಬೇಕು ಎಂದು ಆಗ್ರಹಿಸಿದರು. ನಿವಾಸಿಗಳಾದ ಎಸ್.ನಾಗಮ್ಮ, ಸಿ.ಡಿ.ದುರುಗಮ್ಮ, ಕೆ.ಸಾವಿತ್ರಮ್ಮ, ಶಿವಮ್ಮ, ಎನ್.ಹಂಪಮ್ಮ, ಪಿ.ಮಾರೆಮ್ಮ ಸಿ.ಡಿ.ಮಾರೆಣ್ಣ, ಕೆ.ಚಂದ್ರಪ್ಪ ಸೇರಿ ಇತರರಿದ್ದರು.

    ಅಂತರ್ಜಲ ಕುಸಿತಗೊಂಡಿದ್ದರಿಂದ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಿತ್ತು. ಖಾಸಗಿ ಬೋರ್‌ವೆಲ್‌ನಿಂದ ನೀರು ಒದಗಿಸಲು ಕ್ರಮ ಕೈಗೊಂಡಿದೆ. ಗ್ರಾಮಸ್ಥರು ನೀರು ಹಿಡಿಯಲು ವಿದ್ಯುತ್ ಮೋಟರ್ ಬಳಸಿದಲ್ಲಿ ವಿದ್ಯುತ್ ಮೋಟರ್‌ಗಳನ್ನು ಗ್ರಾಮಾಡಳಿತದಿಂದ ಜಪ್ತಿ ಮಾಡಲಾಗುವುದು. ನೀರನ್ನು ಪೋಲು ಮಾಡಬಾರದು. ಮನೆ ನಿರ್ಮಾಣ, ಹೋಟೆಲ್ ವ್ಯಾಪಾರಸ್ಥರು ಮತ್ತಿತರರು ಹೆಚ್ಚಿನ ಪ್ರಮಾಣದ ನೀರು ಬಳಸಬಾರದು.

    ಕೆ.ಎಚ್.ಶಶಿಕಾಂತ್
    ಪಿಡಿಒ, ದೇವಲಾಪುರ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts