More

    ಬಿಬಿಎಂಪಿ ವಾರ್ ರೂಮ್‌ಗೆಹೊಸ ಕಾಯಕಲ್ಪ ನೀಡಲು ಕ್ರಮ

    ಬೆಂಗಳೂರು:
    ಬೆಂಗಳೂರಿಗೆ ಹೊಸ ರೂಪ ನೀಡಬೇಕು ಎನ್ನುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿಬಿಎಂಪಿ ವಾರ್ ರೂಮ್‌ಗೂ ಹೊಸ ರೂಪ ನೀಡಲು ಮುಂದಾಗಿದ್ದಾರೆ.
    ಅಂತಾರಾಷ್ಟ್ರೀಯ ವಿನ್ಯಾಸಕರ ಸಲಹೆ ಸಹಕಾರ ಮೂಲಕ ಬೆಂಗಳೂರಿನ ಸೌಂದರ್ಯಿಕರಣ ಮಾಡಲು ಈಗಾಗಲೇ ಯೋಜನೆ ರೂಪಿಸಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಅದಕ್ಕೆ ತಕ್ಕ ಹಾಗೆ ಬೆಂಗಳೂರಿನ ಬಿಬಿಎಂಪಿಯಲ್ಲಿ ಮಹತ್ವದ ಬದಲಾವಣೆ ಮಾಡಲು ಡಿಸಿಎಂ ಯೋಜಿಸಿದ್ದಾರೆ.
    ಬೆಂಗಳೂರಿನಲ್ಲಿ ಆಗಿಂದಾಗ್ಗೆ ನಡೆಯುವ ಘಟನೆಗಳು ದೇಶ, ವಿದೇಶದಲ್ಲಿಯೂ ಸುದ್ದಿಯಾಗಿ ಗಮನ ಸೆಳೆಯುತ್ತಿವೆ. ಮಳೆ ತಂದೊಡ್ಡುವ ಅನಾವುತದಿಂದ ಹಿಡಿದು ಟ್ರಾಫಿಕ್ ಸಮಸ್ಯೆ ತನಕ ಹತ್ತಾರು ಸಮಸ್ಯೆಗಳು ಎದುರಾಗುತ್ತಲೇ ಇರುತ್ತವೆ. ಇದು ಒಂದು ದಿನದ ಸಮಸ್ಯೆ ಅಲ್ಲ. ವರ್ಷ ಪೂರ್ತಿ ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆ, ಸವಾಲು ಎದುರಾಗುತ್ತಿವೆ. ಆದ್ದರಿಂದ ಅದಕ್ಕೆ ತಕ್ಕಂತೆ ವಾರ್ ರೂಮ್ ಕೂಡ ಸಿದ್ದಗೊಳ್ಳಬೇಕು ಎನ್ನುವುದು ಡಿಕೆಶಿ ನಿರೀಕ್ಷೆಯಾಗಿದೆ.
    ಯಾವುದೇ ಘಟನೆಯಾದರೆ ಕೂಡಲೆ ಅದು ವಾರ್ ರೂಂಗೆ ಮಾಹಿತಿ ಬರಬೇಕು. ತಕ್ಷಣವೇ ಅದಕ್ಕೆ ಪರಿಹಾರೋಪಾಯ ಕ್ರಮಗಳು ಆಗಬೇಕು. ಆದ್ದರಿಂದ ವಾರ್ ರೂಮ್ ಕೇವಲ ನೆಪ ಮಾತ್ರಕ್ಕೆ ಕಾರ್ಯ ನಿರ್ವಹಣೆ ಮಾಡುವಂತೆ ಆಗಬಾರದು ಎಂದು ಡಿಸಿಎಂ ಸೂಚಿಸಿದ್ದಾರೆ.
    ವಾರ್ ರೂಂಗೆ ಅಗತ್ಯವಿರುವ ಉಪಕರಣ, ಸಲಕರಣೆಗಳನ್ನು ವ್ಯವಸ್ಥೆ ಮಾಡುವಂತೆಯೂ ಸೂಚನೆಗಳನ್ನು ಡಿಸಿಎಂ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟಾರೆಯಾಗಿ ವಾರ್ ರೂಮ್ ಕ್ಷಣ ಕ್ಷಣದ ಮಾಹಿತಿ ನೀಡಲು ಕ್ರೀಯಾಶೀಲವಾಗಿ ರೂಪಿಸಿ, ಬೆಂಗಳೂರು ಅಭಿವೃದ್ಧಿಗೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ.
    ಕೋವಿಡ್ ಸಂದರ್ಭದಲ್ಲಿ ಸ್ಥಾಪಿಸಲಾಗಿದ್ದ ವಾರ್ ರೂಂ ಕೂಡ ಕ್ರೀಯಾಶೀಲವಾಗಿ ಕೆಲಸ ಮಾಡಿತ್ತು. ಹೊಸ ತಂತ್ರಜ್ಞಾನ ಬಳಸಿಕೊಂಡು ವಾರ್ ರೂಮ್ ಉನ್ನತ್ತೀಕರಣಗೊಳಿಸಬೇಕು ಎನ್ನುವುದು ಡಿಸಿಎಂ ಆಲೋಚನೆಯಾಗಿದ್ದು, ಈ ನಿಟ್ಟಿನಲ್ಲಿ ಅವರು ಕಾರ್ಯೋನ್ಮುಖರಾಗಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts