More

    ಬೆಳಗಾವಿಯ ಅಲ್ಲಾಡಿಸಲೂ ಆಗದು – ಡಾ. ಸಿದ್ಧರಾಮೇಶ್ವರ ಸ್ವಾಮೀಜಿ

    ಬೆಳಗಾವಿ: ಬೆಳಗಾವಿಯು ದ್ರಾವಿಡ-ಆರ್ಯ ಸಂಸ್ಕೃತಿಯ ಸಂಗಮವಾಗಿದೆ. ಇಲ್ಲಿ ಡಾ. ಪ್ರಭಾಕರ ಕೋರೆ ಅವರಂತಹ ಮೇರು ರಾಜಕಾರಣಿಗಳಿರುವಾಗ ಬೆಳಗಾವಿ ಅಲುಗಾಡಿಸಲು ಮಹಾರಾಷ್ಟ್ರಕ್ಕೆ ಸಾಧ್ಯವೇ ಇಲ್ಲ. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುತ್ತದೆ ಎನ್ನುವುದು ಹಾಸ್ಯಾಸ್ಪದ ಎಂದು ಗದಗ ತೋಂಟದಾರ್ಯ ಮಠದ ಡಾ. ಸಿದ್ಧರಾಮೇಶ್ವರ ಸ್ವಾಮೀಜಿ ಮಹಾ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಗುಡುಗಿದರು.

    ನಗರದ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸೋಮವಾರ ಆಯೋಜಿಸಿದ್ದ ಡಾ.ಪ್ರಭಾಕರ ಕೋರೆ ಅವರಿಗೆ ‘ಕೆಂಗಲ್ ಹನುಮಂತಯ್ಯ ಸಂಸ್ಕೃತಿ ದತ್ತಿ ಪ್ರಶಸ್ತಿ’ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿ ಇಂತಹ ಭ್ರಮೆಯಲ್ಲಿರುವ ಮಹಾರಾಷ್ಟ್ರ ಸರ್ಕಾರ ಹಾಗೂ ನಾಡವಿರೋಧಿ ಸಂಘಟನೆಗಳು ಹಗಲುಗನಸು ಕಾಣುವುದನ್ನು ಬಿಡಬೇಕು. ಅದು ಏಳೇಳು
    ಜನ್ಮದಲ್ಲೂ ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

    ಕೆಂಗಲ್ ಹನುಮಂತಯ್ಯ ಅವರು ತಮ್ಮ ಕಾರ್ಯಗಳ ಮೂಲಕ ಸಮಸ್ತ ಕನ್ನಡಿಗರ ಮನೆಮಾತಾಗಿದ್ದರು. ಅಂತಹ ವ್ಯಕ್ತಿ ಹೆಸರಿನಲ್ಲಿರುವ ಪ್ರಶಸ್ತಿಯನ್ನು ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರಿಗೆ ನೀಡುತ್ತಿರುವುದು ಅಭಿನಂದನೀಯ. ಅವರಿಗೆ ಈ ಪ್ರಶಸ್ತಿ ನೀಡುವ ಮೂಲಕ ಪ್ರಶಸ್ತಿಯ ಗೌರವವನ್ನೂ ಹೆಚ್ಚಿಸಿದ್ದಾರೆ ಎಂದರು.

    ನಾಯಕತ್ವ ವಹಿಸಿಕೊಳ್ಳಿ: ಹಿರಿಯ ಸಾಹಿತಿ ಡಾ.ಸರಜೂ ಕಾಟ್ಕರ್ ಅಭಿನಂದನಾ ನುಡಿಗಳನ್ನಾಡಿ, ಅಭಿವೃದ್ಧಿ ವಿಷಯದಲ್ಲಿ ಬೆಳಗಾವಿ ತಾತ್ಸಾರಕ್ಕೊಳಗಾಗಲು ಇಲ್ಲಿನ ರಾಜಕಾರಣಿಗಳಲ್ಲಿರುವ ಒಡಕು ಮತ್ತು ಗಟ್ಟಿ ನಾಯಕತ್ವದ ಕೊರತೆ ಕಾರಣವಾಗಿದೆ. ಅಭಿವೃದ್ಧಿ ಮತ್ತು ನಾಡಿನ ಹಿತಕ್ಕಾಗಿ ಇಲ್ಲಿನ ಎಲ್ಲ ರಾಜಕಾರಣಿಗಳು ಒಂದಾಗಬೇಕಿದೆ. ಬೆಳಗಾವಿ ಜನರ ದನಿಗೆ ಶಕ್ತಿ ಕೊಡಲು ಸರ್ವಪಕ್ಷಗಳ ನಾಯಕನ ಅಗತ್ಯವಿದೆ. ಪಕ್ಷಭೇದ ಮರೆತು ಬೆಳಗಾವಿ ಅಭಿವೃದ್ಧಿಗೆ ಡಾ.ಪ್ರಭಾಕರ ಕೋರೆ ಅವರು ನಾಯಕತ್ವ ವಹಿಸಬೇಕು ಎಂದು ಒತ್ತಾಯಿಸಿದರು.

    ಡಾ. ಕೋರೆ ಕೊಡುಗೆ ಅಪಾರ: ಡಾ.ಪ್ರಭಾಕರ ಕೋರೆ ಅವರು ಬೆಳಗಾವಿ ಮತ್ತು ರಾಜ್ಯದ ಗಡಿಭಾಗಗಳಲ್ಲಿ ಕನ್ನಡ-ಮರಾಠಿ ಭಾಷೆ ಸಂಸ್ಕೃತಿಯ ಕೊಂಡಿಯಾಗಿ ಬೆಳೆದವರು. ಗಡಿನಾಡು ಬೆಳಗಾವಿಯಲ್ಲಿ ಕನ್ನಡ ಅಸ್ಮಿತೆ, ಅಸ್ತಿತ್ವ ಉಳಿಯಲು ಡಾ. ಕೋರೆ ಅವರೂ ಕಾರಣರಾಗಿದ್ದಾರೆ. ಬೆಳಗಾವಿಯಲ್ಲಿ ಅಧಿವೇಶನ ನಡೆಯಲು, ರಾಣಿ ಚನ್ನಮ್ಮ ವಿವಿ ಪ್ರಾರಂಭವಾಗಲು ಅವರ ಪ್ರಯತ್ನ ಅಗಾಧ.

    ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಬೆಳಗಾವಿಯಲ್ಲಿ ರಚನೆಯಾಗಲೂ ಅಪಾರ ಕೊಡುಗೆ ನೀಡಿದ್ದಾರೆ ಎಂದು ಡಾ. ಕಾಟ್ಕರ್ ಶ್ಲಾಸಿದರು.
    ರಾಜ್ಯ ಒಡೆಯದಿರಿ: ಕಸಾಪ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ ಮಾತನಾಡಿ, ಅಭಿವೃದ್ಧಿಗಾಗಿ ಪ್ರತಿಭಟನೆಗಳು ಎಷ್ಟೇ ನಡೆಯಲಿ. ಆದರೆ, ರಾಜ್ಯದ ಒಡಕಿನ ಮಾತುಗಳು ಎಂದೂ ಯಾವ ಭಾಗದಿಂದಲೂ ಕೇಳಿಬರಬಾರದು. ಏಕೆಂದರೆ, ಕರ್ನಾಟಕದ ಏಕೀಕರಣಕ್ಕೆ ಹಲವು ಮಹನೀಯರ ಶ್ರಮವಿದೆ ಎಂದು ಹೇಳಿದರು.

    ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಖಿಲ ಭಾರತ ವೀರಶೈವ ಮಹಾಸಭೆಯ ಜಿಲ್ಲಾಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಜ್ಯೋತಿ ಬಾದಾಮಿ, ಪ್ರೊ. ಎ.ಬಿ. ಕೊರಬು, ಕೆಎಲ್‌ಇ ಸಂಯೋಜಕ ಡಾ. ಎಂ.ಟಿ. ಕುರಣಿ, ಸಂಸ್ಥೆಯ ಆಜೀವ ಸದಸ್ಯರಾದ ಡಾ. ಪ್ರಕಾಶ ಕಡಕೋಳ, ಮಹಾದೇವ ಬಳಿಗಾರ, ಡಾ.ಸತೀಶ ಪಾಟೀಲ, ಪ್ರೊ. ಎಸ್.ಜಿ. ನಂಜಪ್ಪನವರ, ಲಿಂಗರಾಜ ಕಾಲೇಜು ಪ್ರಾಚಾರ್ಯ ಡಾ. ಆರ್.ಎಂ. ಪಾಟೀಲ, ಆರ್.ಎಲ್.ವಿಜ್ಞಾನ ಕಾಲೇಜ್‌ನ ಪ್ರಾಚಾರ್ಯ ಡಾ. ಜ್ಯೋತಿ ಕವಳೇಕರ ಇತರರು ಉಪಸ್ಥಿತರಿದ್ದರು.ಡಾ. ಮಹೇಶ ಗುರನಗೌಡರ, ಮಹಾಂತೇಶ ಮೆಣಸಿನಕಾಯಿ ನಿರೂಪಿಸಿದರು. ಡಾ. ಎಚ್.ಎಂ. ಚನ್ನಪ್ಪಗೋಳ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts