More

    ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಲು ಪ್ರಮುಖ ಹೆಜ್ಜೆ ಇಡಲಾಗಿದೆ: ಪ್ರಧಾನಿ ಮೋದಿ

    ನವದೆಹಲಿ: ಇಂಧನ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡಲು, ಇಂದು ಪ್ರಮುಖ ಹೆಜ್ಜೆ ಇಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು

    ದೇಶದ ಕಲ್ಲಿದ್ದಲು ಗಣಿಗಳ ಹರಾಜು ಪ್ರಕ್ರಿಯೆ ಉದ್ಘಾಟಿಸಿ ನಂತರ ಮಾತನಾಡಿದ ಅವರು ದಶಕಗಳವರೆಗೆ ಭಾರತದ ಕಲ್ಲಿದ್ದಲು ವಲಯ ಮೂಲೆಗುಂಪಾಗಿತ್ತು. ಇದನ್ನು ಸ್ಪರ್ಧೆಯಿಂದ ಆಚೆಗೆ ಇಡಲಾಗಿತ್ತು. ಇದರಲ್ಲಿ ಪಾರದರ್ಶಕತೆಯೇ ಒಂದು ದೊಡ್ಡ ಸವಾಲಾಗಿತ್ತು. 2014ರ ನಂತರ ಪರಿಸ್ಥಿತಿಯನ್ನು ಸುಧಾರಿಸಲು ಅನೇಕ ಹೆಜ್ಜೆಗಳನ್ನು ಇಡಲಾಗಿದೆ. ಸದ್ಯ ಕೈಗೊಂಡ ಕ್ರಮಗಳಿಂದಾಗಿ ಕಲ್ಲಿದ್ದಲು ಕ್ಷೇತ್ರ ಬಲಗೊಂಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಜೆಪಿ ಕಚೇರಿಯಲ್ಲಿ ಆರ್.ಶಂಕರ್​ ಗಳಗಳನೇ ಅತ್ತಿದ್ದೇಕೆ?

    ಭಾರತ ಕರೊನಾ ವಿರುದ್ಧ ಹೋರಾಡುತ್ತಿದೆ. ಕೋವಿಡ್​-19 ಅನ್ನು ಭಾರತ ಅವಕಾಶವಾಗಿ ಬದಲಾಯಿಸಲಿದೆ. ಆಮದುಗಳು ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಲಿದೆ ಎಂದು ಚೀನಾಗೆ ಪರೋಕ್ಷ ತಿರುಗೇಟು ನೀಡಿದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts