More

    ಮೀಸಲು ಪ್ರಮಾಣ ಶೇ.7.5ಕ್ಕೆ ಹೆಚ್ಚಿಸಲು ವಾಲ್ಮೀಕಿ ಮಹಾಸಭಾ ಸದಸ್ಯರ ಆಗ್ರಹ

    ಗಂಗಾವತಿ: ವಾಲ್ಮೀಕಿ ಸಮುದಾಯಕ್ಕೆ ಮೀಸಲು ಪ್ರಮಾಣ ಶೇ.7.5ಕ್ಕೆ ಹೆಚ್ಚಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ಮಹಾಸಭಾದ ಸದಸ್ಯರು ನಗರದ ಮಿನಿವಿಧಾನಸೌಧದ ಮುಂದೆ ಬುಧವಾರ ಪ್ರತಿಭಟನೆ ನಡೆಸಿ, ಉಪತಹಸೀಲ್ದಾರ್ ಮಂಜುನಾಥ ನಂದನ್‌ಗೆ ಮನವಿ ಸಲ್ಲಿಸಿದರು.

    ಮಹಾಸಭಾ ತಾಲೂಕು ಅಧ್ಯಕ್ಷ ವಿ.ವೀರಭದ್ರಪ್ಪ ನಾಯಕ ಮಾತನಾಡಿ, ರಾಜ್ಯದಲ್ಲಿ ವಾಲ್ಮೀಕಿ ಸಮುದಾಯದವರು 70ಲಕ್ಷಕ್ಕೂ ಹೆಚ್ಚಿದ್ದು, ಜನಸಂಖ್ಯೆ ಅನುಗುಣ ಮೀಸಲು ದೊರೆಯುತ್ತಿಲ್ಲ. ಎಸ್ಟಿ ಪ್ರವರ್ಗಕ್ಕೆ ಶೇ.3 ಮೀಸಲು ನೀಡುವುದರಿಂದ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯವಾಗಿದೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ವರದಿ ಜಾರಿಗೊಳಿಸಬೇಕಿದೆ. ಅಧಿವೇಶನದಲ್ಲಿ ಮೀಸಲು ಪ್ರಮಾಣ ಹೆಚ್ಚಿಸದಿದ್ದರೆ ಸಮುದಾಯದ ಎಲ್ಲ ಜನಪ್ರತಿನಿಧಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದರು.

    ನಗರಸಭೆ ಸದಸ್ಯ ರಮೇಶ ಚೌಡ್ಕಿ, ಪದಾಧಿಕಾರಿಗಳಾದ ಜೋಗದ ನಾರಾಯಣಪ್ಪ ನಾಯಕ,ಬಿ. ಕೃಷ್ಣಪ್ಪ ನಾಯಕ, ಎ.ಜೆ.ರಂಗನಾಥ, ಜೋಗದ ಹನುಮಂತಪ್ಪ ನಾಯಕ, ಬಿ.ಬಸಪ್ಪ ನಾಯಕ, ಪಂಪಣ್ಣನಾಯಕ, ಚಂದ್ರಪ್ಪ ನಾಯಕ, ಕೆ.ರಂಗಸ್ವಾಮಿ ನಾಯಕ, ಜೋಗಿನ ರಮೇಶನಾಯಕ, ದುರುಗಪ್ಪ ನಾಯಕ, ಯಂಕಪ್ಪ ತಳವಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts