More

    ಜಿರಳೆ ಕಾಟದಿಂದ ಬೇಕಾ ಮುಕ್ತಿ? ನಿಮ್ಮ ಅಡುಗೆ ಮನೆಯಲ್ಲಿಯೇ ಇದೆ ಇದಕ್ಕೆ ಪರಿಹಾರ! ಈ ರೀತಿ ಮಾಡಿ…

    ನಮ್ಮ ದೈನಂದಿನದ ಬಹುತೇಕ ಸಮಸ್ಯೆಗಳಿಗೆ ನಮ್ಮ ಮನೆಯಲ್ಲಿಯೇ ಪರಿಹಾರ ಇರುವುದು ಅನೇಕರಿಗೆ ಇಂದಿಗೂ ತಿಳಿಯದ ಸಂಗತಿ. ಅದು ದೇಹದ ಆರೋಗ್ಯವೇ ಆಗಿರಬಹುದು, ಮನೆಯ ಇತರೆ ಸಮಸ್ಯೆಗಳೇ ಇರಬಹುದು. ಒಟ್ಟಿನಲ್ಲಿ ಇದೆಕ್ಕೆಲ್ಲಾ ಅಡುಗೆ ಮನೆಯೊಳಗೆ ಇರುವ ಹಲವು ಸಾಮಾಗ್ರಿ ಹಾಗೂ ಪದಾರ್ಥಗಳೇ ರಾಮಬಾಣ.

    ಇದನ್ನೂ ಓದಿ: ಕೋವಿಡ್​ ಲಸಿಕೆ​ ಬಗ್ಗೆ ಅಪಪ್ರಚಾರ ಮಾಡಿದ ಕಾಂಗ್ರೆಸ್​ ಗೆ ಜೋಶಿ ಟಾಂಗ್​

    ಎಲ್ಲರ ಮನೆಯಲ್ಲಿ ಕೇಳಿಬರುವ ಸಾಮಾನ್ಯ ಸಮಸ್ಯೆ ಎಂದರೆ ಇಲಿ, ಜಿರಳೆ ಮತ್ತು ಇರುವೆ ಕಾಟ. ಹೆಚ್ಚಾಗಿ ಜಿರಳೆ ಮತ್ತು ಇರುವೆ ತೊಂದರೆ. ಇವುಗಳ ಆರ್ಭಟ ಮನೆಯಲ್ಲಿ ಬಲು ಜೋರಾಗಿಯೇ ಇರುತ್ತದೆ. ಕಾರಣ, ತಿನ್ನಲು ಸಿಗುವ ಐಟಂಗಳು. ಅಡುಗೆ ತಯಾರಿಸಲು ತರುವ ಸಕ್ಕರೆ, ಗೋದಿ, ಮೈದಾ, ತರಕಾರಿ ಅಥವಾ ಹಣ್ಣು-ಹಂಪಲು ಹೀಗೆ ಹಲವಾರು ಪದಾರ್ಥಗಳನ್ನು ಹುಡುಕಿಕೊಂಡು ಬರುವ ಜಿರಳೆಗಳು ಇಡೀ ಮನೆಯನ್ನೇ ಆವರಿಸಿಕೊಳ್ಳುತ್ತದೆ.

    ಇವು ಕೇವಲ ಅಡುಗೆ ಮನೆಗೆ ಮಾತ್ರ ಸೀಮಿತವಲ್ಲ. ಶೌಚಾಲಯ, ಮಲಗುವ ಕೋಣೆ, ಟಿವಿ ಸ್ಟ್ಯಾಂಡ್​, ರಂಧ್ರಗಳು ಹೀಗೆ ಅನೇಕ ಸ್ಥಳಗಳಲ್ಲಿ ಅಡಗಿ ಕುಳಿತಿರುತ್ತವೆ. ಜಿರಳೆಗಳ ಓಡಾಟದಿಂದ ಮನೆಯಲ್ಲಿ ನಾನಾ ತೊಂದರೆಗಳು ಉದ್ಬವಿಸುತ್ತವೆ. ಜಿರಳೆ ಹಾಗೂ ಇರುವೆ ಕಾಟದಿಂದ ಮುಕ್ತಿ ಹೊಂದಬೇಕೆಂದರೆ ನಿಮ್ಮ ಮನೆಯಲ್ಲಿಯೇ ಸಿಗುವ ಈ ಪದಾರ್ಥಗಳನ್ನು ಬಳಸಿ ಈ ರೀತಿ ಮಾಡಿ ನೋಡಿ.

    ಇದನ್ನೂ ಓದಿ: ಸಕಾರಾತ್ಮಕ ಮನೋಭಾವವಿರಲಿ: ಪರೀಕ್ಷೆ ಫಲಿತಾಂಶದ ಬಗ್ಗೆ ಅನಗತ್ಯ ಆತಂಕ ಬೇಡ

    ಪಲಾವ್ ಎಲೆ ಮತ್ತು ಒಂಚೂರು ಉಪ್ಪನ್ನು ನೀರಿನಲ್ಲಿ ಬೆರೆಸಿ ಕೆಲವು ನಿಮಿಷ ಕುದಿಸಿ. ತದನಂತರ ಅದನ್ನು ಎಲ್ಲಿ ಇರುವೆ ಮತ್ತು ಜಿರಳೆ ಹೆಚ್ಚಾಗಿದೆಯೋ ಆ ಜಾಗದಲ್ಲಿ ಸಿಂಪಡಿಸಿ ನೋಡಿ. ಮತ್ತೆ ಜಿರಳೆ ಹಿಂತಿರುಗುವುದಿಲ್ಲ.

    50 ರೂ. ನೋಟ್ನಲ್ಲಿ ಅಡಗಿತ್ತು ಅಳಿಯನ ಕಣ್ಣೀರು! ದೇವರ ಹುಂಡಿಗೆ ಹಾಕುವ ಮುನ್ನ ಆತ ಬರೆದಿದ್ದಿಷ್ಟು…

    ಐಪಿಎಲ್​ 10 ತಂಡಕ್ಕೂ ರೋಹಿತ್​ ಶರ್ಮಾನೇ ಕ್ಯಾಪ್ಟನ್​; ಸುರೇಶ್​ ರೈನಾ ಹೇಳಿಕೆಯ ಹಿಂದಿದೆ ಈ ಕಾರಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts