More

    ನವೀಕೃತ ವೀಸಾದೊಂದಿಗೆ ಭಾರತಕ್ಕೆ ಬರಲು ವಿದೇಶಿ ವ್ಯಾಪಾರಿಗಳಿಗೆ ಷರತ್ತುಬದ್ಧ ಅನುಮತಿ

    ನವದೆಹಲಿ: ಗೃಹ ಸಚಿವಾಲಯ ಬುಧವಾರ ವಿದೇಶಿ ವ್ಯಾಪಾರಿಗಳು, ಎಂಜಿನಿಯರ್‌ಗಳು ಮತ್ತು ಆರೋಗ್ಯ ವೃತ್ತಿಪರರು ತಮ್ಮ ವೀಸಾಗಳನ್ನು ನವೀಕರಿಸಿ ವಿಶೇಷ ವಿಮಾನಗಳಲ್ಲಿ ದೇಶಕ್ಕೆ ಆಗಮಿಸಬಹುದೆಂಬ ಷರತ್ತುಬದ್ಧ ಅನುಮತಿ ನೀಡಿದೆ.
    ಗೃಹ ಸಚಿವಾಲಯದ ಈ ಆದೇಶವು ವಿದೇಶಿಯರಿಗೆ ದೇಶಕ್ಕೆ ಪ್ರವೇಶಿಸಲು ಅವಕಾಶ ನೀಡುವ ಮೊದಲ, ಎಚ್ಚರಿಕೆಯ ಹೆಜ್ಜೆಯಾಗಿದ್ದು, ವಿಶೇಷವಾಗಿ ಆರ್ಥಿಕತೆಯನ್ನು ಪುನರಾರಂಭಿಸಲು ಸರ್ಕಾರದ ಪ್ರಯತ್ನಗಳ ಪ್ರಮುಖ ಅಂಶವಾಗಿ ಕಂಡುಬರುತ್ತದೆ.

    ಇದನ್ನೂ ಓದಿ:VIDEO ] ಕ್ವಾರಂಟೈನಿಗರ ಸ್ಫೂರ್ತಿದಾಯಕ ಕೋವಿಡಾನ್ಸಿಂಗ್ ಹೇಗಿದೆ ನೋಡಿ…!

    ಕರೋನವೈರಸ್ ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ಮಾರ್ಚ್‌ನಲ್ಲಿ ವಿದೇಶಿಯರಿಗೆ ಪ್ರವೇಶ ನಿಷೇಧಿಸಿದ್ದ ಸರ್ಕಾರ, ಈಗ ನವೀಕೃತ ವ್ಯಾಪಾರ ವೀಸಾ ಅಥವಾ ಹೊಸ ವೀಸಾ ಮೂಲಕ ವಿದೇಶಿ ಉದ್ಯಮಿಗಳು ದೇಶಕ್ಕೆ ಆಗಮಿಸಲು ಅನುಮತಿಸಿದೆ.
    ಅಂಗೀಕೃತ ಆರೋಗ್ಯ ಸೇವಾ ಕೇಂದ್ರದಿಂದ ಕರೆಯಲ್ಪಟ್ಟ ಆರೋಗ್ಯ ವೃತ್ತಿಪರರು ಮತ್ತು ತಾಂತ್ರಿಕ ಪರಿಣತರು ಮತ್ತು ಯಂತ್ರಗಳ ಸ್ಥಾಪನೆ, ದುರಸ್ತಿ ಹಾಗೂ ನಿರ್ವಹಣೆಗಾಗಿ ಸಂಚರಿಸುವ ವಿದೇಶಿ ಮೂಲದ ಮಷಿನರಿ ಕಂಪನಿಗಳ ಇಂಜಿನಿಯರ್​​ಗಳು ಮತ್ತು ಭಾರತದಲ್ಲಿ ಇರುವ ವಿದೇಶಿ ಉದ್ಯಮ ಸಂಸ್ಥೆಗಳ ಪರವಾಗಿ ಅಗತ್ಯವಿದ್ದಲ್ಲಿ ಸಂಚರಿಸುವ ಪರಿಣತರು-ಈ ವರ್ಗದವರಿಗೆ ಭಾರತದಲ್ಲಿ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಭಾರತೀಯ ರಾಯಭಾರ ಕಚೇರಿಗಳು ನೀಡುವ ದೀರ್ಘಾವಧಿಯ ವ್ಯಾಪಾರ ವೀಸಾವನ್ನು ಹೊಂದಿರುವ ವಿದೇಶಿ ಪ್ರಜೆಗಳು ನವೀಕರಿಸಬೇಕಾಗುತ್ತದೆ.

    ಶಿಕ್ಷಕರೆ, ಕ್ವಾರಂಟೈನ್​ನಲ್ಲಿ ಮನರಂಜಿಸಲು ಹೋಗಿ ಎಂದ ರಾಜಸ್ಥಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts