More

    IPL 2024| ಗುಜರಾತ್​ ಬಿಟ್ಟು ಮುಂಬೈಗೆ ಬರಲಿಲ್ಲ ಹಾರ್ದಿಕ್​! ರೋಹಿತ್​-ರಿತಿಕಾ ವಿರುದ್ಧ ನೆಟ್ಟಿಗರ ಆಕ್ರೋಶ

    ನವದೆಹಲಿ: ಡಿಸೆಂಬರ್​ 19ರಂದು ದುಬೈನಲ್ಲಿ ನಡೆಯಲಿರುವ 2024ನೇ ಸಾಲಿನ ಐಪಿಎಲ್​ ಹರಾಜಿಗೂ ಮುನ್ನ ಎಲ್ಲ 10 ಫ್ರಾಂಚೈಸಿಗಳು ರಿಟೇನ್​ ಮತ್ತು ರಿಲೀಸ್​ ಮಾಡಿದ ಆಟಗಾರರನ್ನು ಇಂದು ಘೋಷಣೆ ಮಾಡಿದೆ. ಇದಕ್ಕೂ ಮುನ್ನ ಹಾರ್ದಿಕ್​ ಪಾಂಡ್ಯ ವಿಚಾರದಲ್ಲಿ ಸಾಕಷ್ಟು ಊಹಾಪೋಹಗಳು ಹರಿದಾಡಿತ್ತು. ಗುಜರಾತ್​ ಟೈಟಾನ್ಸ್​ ಬಿಟ್ಟು ಮುಂಬೈಗೆ ಮರಳಲಿದ್ದಾರೆ ಎಂದು ಸುದ್ದಿಯಾಗಿತ್ತು. ಅದರಲ್ಲೂ ಬಹುತೇಕ ಖಚಿತವೆಂದೇ ಹೇಳಲಾಗಿತ್ತು. ಆದರೆ, ಅದೆಲ್ಲ ಸುಳ್ಳು ಎಂಬುದು ಇದೀಗ ಸಾಬೀತಾಗಿದೆ.

    ಗುಜರಾತ್​ ಟೈಟಾನ್ಸ್​ ಫ್ರಾಂಚೈಸಿ ಹಾರ್ದಿಕ್​ ಪಾಂಡ್ಯರನ್ನು ರಿಟೇನ್​ ಮಾಡಿಕೊಂಡಿದೆ. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಬಿಸಿಸಿಐ ಮತ್ತು ಟೀಮ್​ ಇಂಡಿಯಾ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಏಕದಿನ ವಿಶ್ವಕಪ್​ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಆತಿಥೇಯ ಭಾರತ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲನ್ನು ಅನುಭವಿಸಿತು. ಇದರ ಮೇಲಿನ ಜನರ ಗಮನವನ್ನು ಬೇರೆಡೆ ತಿರುಗಿಸಲು ಹಾರ್ದಿಕ್​ ಪಾಂಡ್ಯರ ಕುರಿತು ಊಹಾಪೋಹಗಳನ್ನು ಹರಿಬಿಡಲಾಗಿದೆ ಎಂದು ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಈ ಊಹಾಪೋಹಗಳ ಹಿಂದೆ ರೋಹಿತ್​ ಶರ್ಮ, ಪತ್ನಿ ರಿತಿಕಾ ಮತ್ತು ಬಿಸಿಸಿಐ ಕೈವಾಡ ಇದೆ ಎನ್ನುವ ಅರ್ಥದಲ್ಲಿ ನೆಟ್ಟಿಗರು ಆರೋಪಗಳ ಸುರಿಮಳೆಗೈದಿದ್ದಾರೆ.

    ಎಲ್ಲ ವರದಿಗಾರರು ಮತ್ತು ಪಿಆರ್​ ಏಜೆನ್ಸಿಗಳು ನಿಮ್ಮ ಎಲ್ಲ ಕಾರ್ಯಗಳಲ್ಲಿ ಯಶಸ್ವಿಯಾಗಿದ್ದೀರಿ. ನೀವೆಲ್ಲರೂ ವಿಶ್ವಕಪ್‌ನಿಂದ ಐಪಿಎಲ್ ವಹಿವಾಟಿನತ್ತ ನಮ್ಮ ಗಮನವನ್ನು ಎಷ್ಟು ಸುಲಭವಾಗಿ ಬದಲಾಯಿಸಿದ್ದೀರಿ. ಇದು ನಿಜಕ್ಕೂ ಚೆನ್ನಾಗಿದೆ ಮತ್ತು ಹೇಳಲು ಕರುಣಾಜನಕವಾಗಿದೆ. ಹಾರ್ದಿಕ್​ ಹೋಗುತ್ತಾರೆ ಎಂದು ಎಲ್ಲರು ಭಾವಿಸಿದ್ದೇವು, ಆದರೆ ಅವರು ಉಳಿದುಕೊಂಡಿದ್ದಾರೆ ಎಂದು ನೆಟ್ಟಿಗರೊಬ್ಬರು ಎಕ್ಸ್​ ಖಾತೆಯಲ್ಲಿ ಟೀಕಿಸಿದ್ದಾರೆ.

    ವಿಶ್ವಕಪ್​ ಸೋತ ಬಳಿಕ ರೋಹಿತ್​ ಶರ್ಮ ಅವರ ಪಿಆರ್​ ತಂಡ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದೆ. ಇದೀಗ ಎಲ್ಲರ ಕಣ್ಣು ಐಪಿಎಲ್​ ಮೇಲಿದ್ದು, ವಿಶ್ವಕಪ್​ ಸೋಲನ್ನು ಬಹುಬೇಗನೆ ಮರೆತಿದ್ದಾರೆ. ಇದೀಗ ಯಾರೋಬ್ಬರು ವಿಶ್ವಕಪ್​ ಸೋಲನ್ನು ಪ್ರಶ್ನಿಸುವುದಿಲ್ಲ ಎಂದು ಮತ್ತೊಬ್ಬ ನೆಟ್ಟಿಗ ಹೇಳಿದ್ದಾರೆ.

    ಮೊದಲು ಹಾರ್ದಿಕ್​ ಪಾಂಡ್ಯ ಕುರಿತು ಊಹಾಪೋಹಗಳನ್ನು ಮಾಡಲಾಯಿತು. ಇದಾದ ಬಳಿಕ ರೋಹಿತ್​ ಅವರ ಮುಂಬೈ ಇಂಡಿಯನ್ಸ್​ ನಾಯಕತ್ವದ ಬಗ್ಗೆ ವದಂತಿಗಳನ್ನು ಹಬ್ಬಿಸಲಾಯಿತು. ಈ ಮೂಲಕ ವಿಶ್ವಕಪ್​ ಸೋಲಿನ ಗಮನವನ್ನು ಸುಲಭವಾಗಿ ಬೇರೆಡೆಗೆ ತಿರುಗಿಸಿದ್ದಾರೆ. ನಾವು ಪಿರಿತಿಕಾ (PRitika)ರನ್ನು ಸೋಲಿಸಲು ಸಾಧ್ಯವಿಲ್ಲ ಎಂದು ಮಗದೊಬ್ಬ ನೆಟ್ಟಿಗ ರೋಹಿತ್​ ಶರ್ಮ ಪತ್ನಿಯನ್ನು ಎಳೆದುತಂದಿದ್ದಾರೆ. PRitika ಅಂದರೆ, ರೋಹಿತ್​ ಪತ್ನಿ ರಿತಿಕಾ ಅವರ ಪಿಆರ್​ ತಂಡ ಎಂಬರ್ಥದಲ್ಲಿ ನೆಟ್ಟಿಗರು ಹೇಳಿದ್ದಾರೆ.

    ವಿಶ್ವಕಪ್​ ಸೋಲು ಮತ್ತು ರೋಹಿತ್​ ಶರ್ಮ ಕಳಪೆ ನಾಯಕತ್ವದ ಮೇಲಿನ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಹಾರ್ದಿಕ್​ ಪಾಂಡ್ಯ ವರ್ಗಾವಣೆ ನಾಟಕವನ್ನು ಬಿಸಿಸಿಐ ಚೆನ್ನಾಗಿ ಎಣೆದಿದೆ. ಇಡೀ ಡ್ರಾಮಾದಲ್ಲಿ ಬಿಸಿಸಿಐ ಯಶಸ್ವಿಯಾಗಿದೆ. ಇದೀಗ ಬಹುತೇಕ ಮಂದಿ ವಿಶ್ವಕಪ್​ ಮರೆತಿದ್ದಾರೆ. ಇದೀಗ ಎಲ್ಲರ ಕಣ್ಣು ಐಪಿಎಲ್​ ಮೇಲಿದೆ ಎಂದು ಸಾಕಷ್ಟು ನೆಟ್ಟಿಗರು ಬಿಸಿಸಿಐ, ರೋಹಿತ್​ ಶರ್ಮ ವಿರುದ್ಧ ಟೀಕಾ ಪ್ರಹಾರ ನಡೆಸುತ್ತಿದ್ದಾರೆ.

    ವಿಶ್ವಕಪ್​ ಸೋಲು
    ನ. 19ರಂದು ಗುಜರಾತಿನ ಅಹಮಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್​ ಟೂರ್ನಿಯ ಮಹತ್ವದ ಫೈನಲ್​ ಪಂದ್ಯದಲ್ಲಿ ಭಾರತ ನೀಡಿದ 241 ರನ್​ಗಳ ಸಾಧಾರಣ ಗುರಿ ಬೆನ್ನತ್ತಿದ ಆಸಿಸ್ ಕೇವಲ​ 43 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 241 ರನ್​ ಗಳಿಸುವ ಮೂಲಕ ಸುಲಭವಾಗಿ ಗುರಿ ಮುಟ್ಟಿತು. ಕೇವಲ 47 ರನ್​ಗಳಿಗೆ ಪ್ರಮುಖ 3 ವಿಕೆಟ್​ ಕಳೆದುಕೊಂಡ ಸಂಕಷ್ಟಕ್ಕೆ ಸಿಲುಕಿದ ಆಸಿಸ್​​ಗೆ ಟ್ರಾವಿಸ್​ ಹೆಡ್ ಆಪತ್ಭಾಂದವರಾದರು. ನಿರ್ಣಾಯಕ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ ಹೆಡ್ ( 137 ರನ್​ 120 ಎಸೆತ 15 ಬೌಂಡರಿ, 4ಸಿಕ್ಸರ್​) ​, ಆಸಿಸ್​ಗೆ ಸುಲಭ ಗೆಲುವು ತಂದುಕೊಟ್ಟರು. ಹೆಡ್​ ಜತೆಗೆ ಮಾರ್ನಸ್​ ಲಬುಶೇನ್​ ಉತ್ತಮ ಸಾಥ್​ ನೀಡಿದರು. ಈ ಜೋಡಿ ನಿರ್ಣಾಯಕ ಪಂದ್ಯದಲ್ಲಿ 192 ರನ್​ಗಳ ಅಮೋಘ ಜತೆಯಾಟವಾಡಿದರು. ತಾಳ್ಮೆಯ ಆಟವಾಡಿದ ಲಬುಶೇನ್ 110​ ಎಸೆತಗಳಲ್ಲಿ 4 ಬೌಂಡರಿಯೊಂದಿಗೆ 58 ರನ್​ಗಳ ಅರ್ಧಶತಕ ಸಿಡಿಸಿ ಮಿಂಚಿದರು. ಈ ಮೂಲಕ ಆಸೀಸ್​ ಪಡೆ 6ನೇ ಬಾರಿಗೆ ವಿಶ್ವಕಪ್​ ಟ್ರೋಫಿಯನ್ನು ಜಯಿಸಿ ಕ್ರಿಕೆಟ್​ ಜಗತ್ತಿನ ಅಧಿಪತಿ ಎನಿಸಿಕೊಂಡಿದೆ. (ಏಜೆನ್ಸೀಸ್​)

    IPL 2024| ಗುಜರಾತ್​ನಲ್ಲೇ​ ಉಳಿದ ಹಾರ್ದಿಕ್​: ಇಲ್ಲಿದೆ ರಿಟೇನ್​, ರಿಲೀಸ್​ ಆಟಗಾರರ ಸಂಪೂರ್ಣ ಪಟ್ಟಿ…

    ಬೆಟ್ಟದಿಂದ ಕೆಳಗೆ ಉರುಳಿದ ಕಾರು: ಸಾವಿನ ದವಡೆಯಲ್ಲಿದ್ದ ವ್ಯಕ್ತಿಯ ಜೀವ ಉಳಿಸಿದ ಶಮಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts