More

    ಬ್ಯಾಂಕ್​ ಅಧಿಕಾರಿಗಳ ಕಿರುಕುಳ ತಪ್ಪಿಸಲು ಪಟ್ಟು

    ಕೋಲಾರ: ಬರಗಾಲದಲ್ಲಿ ಸಾಲ ಮರುಪಾವತಿ ಮಾಡುವಂತೆ ರೈತರನ್ನು ಒತ್ತಾಯಿಸುತ್ತಿರುವ ಬ್ಯಾಂಕ್​ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಕಾರ್ಯಕರ್ತರು ಇಲ್ಲಿನ ಲೀಡ್​ ಬ್ಯಾಂಕ್​ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

    ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಬ್ಯಾಂಕ್​ ಅಧಿಕಾರಿಗಳು ರೈತರಿಗೆ ನೋಟಿಸ್​ ನೀಡಿ ತೊಂದರೆ ಕೊಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಪ್ರೊ.ನಂಜುಂಡಸ್ವಾಮಿ ಅವರ ಆದೇಶದಂತೆ ಹಳ್ಳಿಗಳಲ್ಲಿ ಬ್ಯಾಂಕ್​ ಅಧಿಕಾರಿಗಳು ರೈತರ ಅನುಮತಿಯಿಲ್ಲದೆ ಪ್ರವೇಶ ಇಲ್ಲ ಎಂಬ ಚಳವಳಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
    ಲಕ್ಷ ಕೋಟಿ ಲೆಕ್ಕದಲ್ಲಿ ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ ಸಾಲ ಪಡೆದು ವಿದೇಶಕ್ಕೆ ಹೊಗಿರುವ ದೊಡ್ಡ ದೊಡ್ಡ ವ್ಯಕ್ತಿಗಳ ಸಾಲ ವಸೂಲಾತಿಯ ಬಗ್ಗೆ ಧ್ವನಿ ಎತ್ತಲು ಅಧಿಕಾರಿಗಳ ಶಕ್ತಿಯಿಲ್ಲ. ರೈತರು ಬೆವರು ಸುರಿಸಿ ದುಡಿದು ಬೆಳೆದ ಅನ್ನವನ್ನು ತಿನ್ನುತ್ತಿರುವ ಅಧಿಕಾರಿಗಳಿಗೆ ರೈತರ ಬಗ್ಗೆ ಕಾಳಜಿಯಿಲ್ಲವೆ ಎಂದು ಪ್ರಶ್ನಿಸಿದರು.
    ರೈತ ಮಂಗಸಂದ್ರ ವೆಂಕಟೇಶಪ್ಪ ಮಾತನಾಡಿ, ನಾವೇನು ಮೋಜು ಮಸ್ತಿಗೆ ಸಾಲ ಪಡೆದಿಲ್ಲ. ಭೂಮಿ ತಾಯಿಯನ್ನು ನಂಬಿ ಬೆಳೆ ಹಾಕಿದ್ದೇವೆ. ಬೆಳೆ ಕೈಕೊಟ್ಟಿದೆ ಮತ್ತೆ ಬೆಳೆ ಮಾಡುತ್ತೇವೆ. ಲಾಭ ಬಂದೆ ಬರುತ್ತೆ ಅಧಿಕಾರಿಗಳು ಅಲ್ಲಿಯವರೆಗೂ ಕಾಯಬೇಕು ಎಂದು ಒತ್ತಾಯಿಸಿದರು.
    ಮನವಿ ಸ್ವೀಕರಿಸಿ ಮಾತನಾಡಿದ ಲೀಡ್​ ಬ್ಯಾಂಕ್​ ವ್ಯವಸ್ಥಾಪಕ ಶ್ರೀರಾಮ್​, ಎಲ್ಲ ಸಹಕಾರಿ, ಖಾಸಗಿ ರಾಷ್ಟ್ರೀಕೃತ ಬ್ಯಾಂಕ್​ಗಳ ವ್ಯವಸ್ಥಾಪಕರನ್ನು ಸಭೆ ಕರೆದು ಬರ ಹಾಗೂ ಬೆಳೆ ನಷ್ಟದಿಂದ ತತ್ತರಿಸಿರುವ ರೈತರಿಂದ ಬಲವಂತದ ಸಾಲ ವಸೂಲಿ ಮಾಡದಂತೆ ಎಚ್ಚರಿಕೆ ನೀಡಲಾಗುವುದು ಭರವಸೆ ನೀಡಿದರು.
    ಜಿಲ್ಲಾಧ್ಯಕ್ಷ ಈಕಂಬಳಿ ಮಂಜುನಾಥ್​, ವಕ್ಕಲೇರಿ ಹನುಮಯ್ಯ, ಚಂದ್ರಪ್ಪ, ಗಿರೀಶ್​, ಸುಪ್ರೀಂಚಲ, ಾರೂಕ್​ಪಾಷಾ, ಮಂಜು, ರಾಜೇಶ್​, ಕುವಣ್ಣ, ಗೋವಿಂದಪ್ಪ, ಭಾಸ್ಕರ್​ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts