More

    ಪೌರಕಾರ್ಮಿಕರಿಂದ ಅನಿರ್ದಿಷ್ಟಾವಧಿ ಮುಷ್ಕರ, ಎಲ್ಲೆಂದರಲ್ಲಿ ಕಸದ ರಾಶಿ: ಎಲ್ಲಿ, ಯಾಕೆ?

    ತಮಿಳುನಾಡು: ಯಾವುದೇ ಪ್ರದೇಶದಲ್ಲಿ ಪೌರಕಾರ್ಮಿಕರು ಮುಷ್ಕರ ನಡೆಸಿದರೆ ಪರಿಸ್ಥಿತಿ ಭಯಂಕರವಾಗಿರುತ್ತದೆ. ಅಂಥದ್ದೇ ಒಂದು ಸಂಕಷ್ಟದ ಪರಿಸ್ಥಿತಿ ತಮಿಳುನಾಡಿನ ಪ್ರದೇಶವೊಂದರಲ್ಲಿ ಉಂಟಾಗಿದ್ದು, ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದೆ.

    ಕೊಯಮುತ್ತೂರು ಮಹಾನಗರ ಪಾಲಿಕೆ (ಸಿಸಿಎಂಸಿ) ವ್ಯಾಪ್ತಿಯ ಪೌರಕಾರ್ಮಿಕರು ಅನಿರ್ದಿಷ್ಟಾವಧಿಗೆ ಮುಷ್ಕರ ಆರಂಭಿಸಿದ್ದು, ಕಸ ವಿಲೇವಾರಿಗೆ ಜನರು ಇಲ್ಲದಂತಾಗಿದೆ.

    ಸಿಸಿಎಂಸಿಯ 2,750 ಕಾಯಂ ನೌಕರರು ಸೇರಿದಂತೆ 7 ಸಾವಿರಕ್ಕೂ ಅಧಿಕ ಪೌರಕಾರ್ಮಿಕರು ತಮ್ಮ ವೇತನ ಪರಿಷ್ಕರಣೆ ನಡೆಸಿ ಹೆಚ್ಚಿಸುವಂತೆ ಒತ್ತಾಯಿಸಿ ಈ ಪ್ರತಿಭಟನೆ ನಡೆಸುತ್ತಿದ್ದಾರೆ. ಪರಿಣಾಮವಾಗಿ ರಸ್ತೆಬದಿಗಳಲ್ಲಿ ಎಲ್ಲೆಂದರಲ್ಲಿ ಕಸದ ಮೂಟೆಗಳು, ರಾಶಿಗಳು ಕಾಣಿಸಲಾರಂಭಿಸಿವೆ.

    ಎಲ್ಲೆಂದರಲ್ಲಿ ಕಂಡುಬಂದಿರುವ ಕಸದ ರಾಶಿ ನಗರದ ಸೌಂದರ್ಯಕ್ಕೆ ಮಾತ್ರವಲ್ಲದೆ, ಸಾರ್ವಜನಿಕರ ಆರೋಗ್ಯಕ್ಕೂ ಧಕ್ಕೆ ಉಂಟು ಮಾಡುವಂಥದ್ದಾಗಿದೆ. ಹೀಗಾಗಿ ಸರ್ಕಾರ ಇದೀಗ ಇವರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಾದ ಅನಿವಾರ್ಯತೆ ಉಂಟಾಗಿದೆ.

    ವಾಟ್ಸ್​ಆ್ಯಪ್​ಗೆ ಗ್ರಹಣ: ಮೆಸೇಜ್​ ಕಳಿಸಲಾಗದೆ ಪರದಾಡಿದ ಬಳಕೆದಾರರು..

    ‘ಕಾಂತಾರ’ಕ್ಕೀಗ ಕಾನೂನುಕ್ರಮದ ‘ಕಿರಿಕ್​’: ಯಶಸ್ಸಿನ ಓಟಕ್ಕೆ ಬ್ರೇಕ್​ ಹಾಕುವ ಯತ್ನವೋ?

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts