More

    ಅಂತರ್ಜಾತಿ ದಂಪತಿ ಅಪಹರಿಸಿ ಹಲ್ಲೆ: ತಪ್ಪಿಸಿಕೊಂಡ ವಿವಾಹಿತನಿಂದ ಪತ್ನಿ ನಾಪತ್ತೆ ದೂರು

    ಚೆನ್ನೈ: ಹೊಸದಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿ ಅಂತರ್ಜಾತಿ ದಂಪತಿಯನ್ನು ಅಪಹರಣ ಮಾಡಿದ ಆರೋಪದ ಮೇಲೆ ತಮಿಳುನಾಡಿನ ಸೇಲಂ ಪೊಲೀಸರು ಮಂಗಳವಾರ ಸಂಜೆ 18 ಆರೋಪಿಗಳನ್ನು ಬಂಧಿಸಿದ್ದಾರೆ.

    ಅಪಹರಣದ ವೇಳೆ ನವವಿವಾಹಿತ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ವಿವಾಹಿತೆ ನಾಪತ್ತೆಯಾಗಿದ್ದಾಳೆ. ವಿವಾಹಿತ ನೀಡಿದ ದೂರಿನ ಆಧಾರದ ಮೇಲೆ ಕೊಳತೂರು ಪೊಲೀಸರು ವಿವಾಹಿತೆಯ ತಂದೆ ಹಾಗೂ ಸಂಬಂಧಿಕರು ಸೇರಿದಂತೆ 18 ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಸದ್ಯ ನ್ಯಾಯಾಂಗ ಬಂಧನದಲ್ಲಿ ಇಡಲಾಗಿದೆ.

    ನವದಂಪತಿ ಪಿ. ಸೆಲ್ವನ್​(25) ಮತ್ತು ಜೆ. ಎಲಮತಿ(23) ಈರೋಡ್​ ಜಿಲ್ಲೆಯ ಭವಾನಿ ಬಳಿಯ ಗ್ರಾಮದವರು. ಪರಸ್ಪರ ಪ್ರೀತಿಸುತ್ತಿದ್ದ ಇವರು ಸೇಲಂ ಜಿಲ್ಲೆಯ ಕೊಳತೂರು ಬ್ಲಾಕ್​ನ ಕವಲಂದಿಯೂರ್​ ಎಂಬಲ್ಲಿ ಸೋಮವಾರ ಸಪ್ತಪದಿ ತುಳಿದಿದ್ದರು.

    ಡ್ರಾವಿಡರ್​ ವಿದುಥಲೈ ಕಜಗಂ(ಡಿವಿಕೆ) ಸಂಘಟನೆಯ ಸದಸ್ಯ ಕವೈ ಈಶ್ವರನ್ ಮುಂದೆ ನಿಂತು ವಿವಾಹ ಕಾರ್ಯ ಮಾಡಿಸಿದ್ದರು. ವಿವಾಹಿತೆಯು ವಣ್ಣಿಯಾರ್​ ಜಾತಿಗೆ ಸೇರಿದರೆ, ವಿವಾಹಿತ ದಲಿತ ಸಮುದಾಯಕ್ಕೆ ಸೇರಿದವನಾಗಿದ್ದ. ಮಗಳ ಅಂತರ್ಜಾತಿ ವಿವಾಹದ ಬಗ್ಗೆ ತಿಳಿದ ತಂದೆ ಸೋಮವಾರ ರಾತ್ರಿ ಸುಮಾರು 50 ಮಂದಿಯೊಂದಿಗೆ ಶಸ್ತ್ರಾಸ್ತ್ರಗಳೊಂದಿಗೆ ಬಲವಂತವಾಗಿ ಕವೈ ಈಶ್ವರನ್​ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದರು. ​

    ಬಳಿಕ ನವದಂಪತಿ ತಂಗಿದ್ದ ಸ್ಥಳಕ್ಕೆ ತೆರಳಿ ಈಶ್ವರನ್​ ಸಮೇತ ಮೂವರನ್ನು ಜನನಿಬಿಡ ಪ್ರದೇಶಕ್ಕೆ ಹೊತ್ತೊಯ್ದಿದ್ದರು. ಈ ವೇಳೆ ಈಶ್ವರನ್​ ಮತ್ತು ವಿವಾಹಿತ ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ, ವಿವಾಹಿತೆ ನಾಪತ್ತೆಯಾಗಿದ್ದಾಳೆ.

    ಈ ಬಗ್ಗೆ ಮಾತನಾಡಿರುವ ಕೊಳತೂರು ಪೊಲೀಸ್​ ಠಾಣೆಯ ಅಧಿಕಾರಿಗಳು, ಈ ಸಂಬಂಧ ದೂರು ದಾಖಲಾಗಿದೆ. ವಿವಾಹಿತೆಯ ಮನೆಯವರೇ ಆಕೆಯನ್ನು ಸಂಬಂಧಿಕರ ಮನೆಯಲ್ಲಿ ಅವಿತಿಟ್ಟಿದ್ದಾರೆ ಎಂದು ನಂಬಲಾಗಿದೆ. ವಿವಾಹಿತ ಸೆಲ್ವನ್​ ಪೊಲೀಸ್​ ರಕ್ಷಣೆ ಕೊರಿದರೆ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

    VIDEO| ಕಾರು ಡಿಕ್ಕಿಗೆ ಹಾರಿಹೋದ ಮೂವರು ವಿದ್ಯಾರ್ಥಿನಿಯರು: ಭೀಕರ ರಸ್ತೆ ಅಪಘಾತ ಸಿಸಿಟಿವಿಯಲ್ಲಿ ಸೆರೆ!

    ನಿವೃತ್ತ ಪೊಲೀಸ್​ ಅಧಿಕಾರಿಯನ್ನು ಕೊಂದು ಮೃತದೇಹದ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡ ಆರೋಪಿ

    ರೌಡಿಶೀಟರ್​ ಬಗಲಗುಂಟೆ ಸಿದ್ದನ ಮೇಲೆ ಪೊಲೀಸರಿಂದ ಗುಂಡಿನ ದಾಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts