More

    ಕೊವಿಡ್​-19 ಸೋಂಕಿನಿಂದ ಮೃತಪಟ್ಟ ಶಾಸಕ: ಕಂಬನಿ ಮಿಡಿದ ಸಿಎಂ ಮಮತಾ ಬ್ಯಾನರ್ಜಿ

    ಕೋಲ್ಕತ್ತ: ಮಹಾಮಾರಿ ಕರೊನಾ ಸೋಂಕಿಗೆ ಇನ್ನೋರ್ವ ಜನಪ್ರತಿನಿಧಿ ಬಲಿಯಾಗಿದ್ದಾರೆ. ಪಶ್ಚಿಮಬಂಗಾಳದ ತೃಣಮೂಲಕ ಕಾಂಗ್ರೆಸ್​ ಶಾಸಕ ತಮೋನಾಶ್ ಘೋಷ್ (60) ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.
    ಘೋಷ್​ ಅವರಲ್ಲಿ ಕಳೆದ ತಿಂಗಳು ಕರೊನಾ ಇರುವುದು ದೃಢಪಟ್ಟಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಫಲಕಾರಿಯಾಗಲಿಲ್ಲ.

    ತಮೋನಾಶ್​ ಘೋಷ್​ ಸಾವಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಂತಾಪ ಸೂಚಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, ಫಾಲ್ಟಾದಿಂದ ಮೂರು ಬಾರಿ ಶಾಸಕರಾಗಿದ್ದ ತಮೋನಾಶ್​ ಘೋಷ್​ ಅವರು 1998ರಿಂದಲೂ ಪಕ್ಷದ ಖಜಾಂಚಿಯಾಗಿದ್ದರು. 35 ವರ್ಷಗಳಿಂದ ನಮ್ಮ ಜತೆ ಇದ್ದ ಅವರೀಗ ಎಲ್ಲರನ್ನೂ ಅಗಲಿದ್ದಾರೆ. ಪಕ್ಷ ಮತ್ತು ಜನರ ಒಳಿತಿಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದರು. ಸಾಮಾಜಿಕ ಕಾರ್ಯಗಳ ಮೂಲಕ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಅವರ ಸ್ಥಾನವನ್ನು ಯಾರಿಂದಲೂ ತುಂಬಲಾಗದು. ಅವರ ಪತ್ನಿ, ಮಕ್ಕಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಬರೆದಿದ್ದಾರೆ. ಇದನ್ನೂ ಓದಿ : ಆನ್​ಲೈನ್​ ಕ್ಲಾಸ್​ ಗುಮ್ಮ ತಂದ ಒತ್ತಡ; ಜೀವವನ್ನೇ ಕಳೆದುಕೊಂಡ 12 ವರ್ಷದ ಬಾಲಕಿ

    ತಮೋನಾಶ್ ಘೋಷ್​ ಅವರಲ್ಲಿ ಮೇ 23ರಂದು ಸೋಂಕು ಕಾಣಿಸಿಕೊಂಡಿತ್ತು. ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸತತ ಒಂದು ತಿಂಗಳಿಂದಲೂ ಚಿಕಿತ್ಸೆ ಪಡೆಯುತ್ತಿದ್ದ ಘೋಷ್​ ಅವರ ಆರೋಗ್ಯ ಕೆಲವು ದಿನಗಳಿಂದ ತೀವ್ರ ಹದಗೆಟ್ಟಿತ್ತು. ಕೊವಿಡ್​-19ನಿಂದ ಪಶ್ಚಿಮ ಬಂಗಾಳದಲ್ಲಿ ಮೃತಪಟ್ಟ ಮೊದಲ ಜನಪ್ರತಿನಿಧಿ ಇವರು. ಘೋಷ್​ ನಿಧನಕ್ಕೆ ಪಕ್ಷದ ಎಲ್ಲ ನಾಯಕರು ಸಂತಾಪ ಸೂಚಿಸಿತ್ತಿದ್ದಾರೆ. (ಏಜೆನ್ಸೀಸ್​)

    ದೇಶದಲ್ಲಿ ಲಕ್ಷ ಜನರಿಗೆ ಓರ್ವ ಸೋಂಕಿತ ಮರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts