More

    ಟಿಕೆಎಂ ಕಾರ್ವಿುಕರಿಂದ ಛತ್ರಿ ಚಳವಳಿ: ಲಾಕೌಟ್ ವಿರೋಧಿಸಿ ಸತತ 33 ದಿನ ಹೋರಾಟ

    ಬಿಡದಿ: ಟೊಯೋಟಾ ಕಿಲೋಸ್ಕರ್ ಮೋಟಾರ್ (ಟಿಕೆಎಂ) ಕಂಪನಿ ಅಡಳಿತ ಮಂಡಳಿ ಮತ್ತು ಕಾರ್ವಿುಕ ಸಂಘಟನೆ ನಡುವಿನ ತಿಕ್ಕಾಟ ತಾರಕಕ್ಕೇರಿದ್ದು, ಕಾರ್ವಿುಕರ ಪ್ರತಿಭಟನೆ ಮುಂದುವರಿದಿದ್ದು, 33ನೇ ದಿನವಾದ ಶುಕ್ರವಾರದಂದು ಕಾರ್ವಿುಕರು ಛತ್ರಿ ಹಿಡಿದು ವಿನೂತನವಾಗಿ ಪ್ರತಿಭಟಿಸಿದರು.

    ಏಷ್ಯಾದ ಅತಿ ದೊಡ್ಡ ಕಾರು ತಯಾರಿಕಾ ಕಾರ್ಖಾನೆ ಕಾರ್ವಿುಕರು ಆಡಳಿತ ಮಂಡಳಿ ಧೋರಣೆ ಮತ್ತು ಲಾಕೌಟ್ ಘೋಷಿಸಿರುವುದನ್ನು ವಿರೋಧಿಸಿ ಕಾರ್ಖಾನೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಗಾಗಿ ಟೆಂಟ್ ಹಾಕಲಾಗಿತ್ತು. ಆದರೆ ಜಾಗ ಕೆಐಎಡಿಬಿಗೆ ಸೇರಿದ್ದು, ಕಾರ್ಖಾನೆ ಆಡಳಿತ ಮಂಡಳಿಯವರು ಕೆಐಎಡಿಬಿ ಮೂಲಕ ಒತ್ತಡ ಹೇರಿಸಿ, ನೋಟಿಸ್ ಕೊಡಿಸಿ ಟೆಂಟ್ ಖಾಲಿ ಮಾಡಿಸಿದ್ದಾರೆ. ಇದು ಕಾರ್ವಿುಕರ ಹೋರಾಟವನ್ನು ಹತ್ತಿ್ತ್ಕಲು ಕಾರ್ಖಾನೆ ಆಡಳಿತ ಮಂಡಳಿ ಹಾಗೂ ಪೊಲೀಸರ ಸಂಚಾಗಿದೆ ಎಂದು ಕಾಮಿಕರು ಆಕ್ರೋಶ ವ್ಯಕ್ತಪಡಿಸಿದರು.

    ಯಕ್ಷಪ್ರಶ್ನೆ

    ಕಾರ್ವಿುಕರು ಮತ್ತು ಆಡಳಿತ ಮಂಡಳಿ ನಡುವಿನ ಸಮಸ್ಯೆ ಬಗೆಹರಿಸಲು ಸಿಎಂ ಬಿ.ಎಸ್. ಯಡಿಯೂರಪ್ಪ, ಡಿಸಿಎಂ ಡಾ. ಸಿ.ಎನ್. ಅಶ್ವತ್ಥನಾರಾಯಣ, ಶಾಸಕ ಎ. ಮಂಜುನಾಥ್ ಸೇರಿದಂತೆ ಕಾರ್ವಿುಕ ಸಚಿವರು ಸಭೆ ನಡೆಸಿದರೂ ಪ್ರಯೋಜನವಾಗಿಲ್ಲ. ಇದರಿಂದ ಸುಮಾರು 3,500 ಸಾವಿರ ನೌಕರರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಉತ್ಪಾದನೆ ಸಹ ಸ್ಥಗಿತವಾಗಿದೆ. ಸಮಸ್ಯೆ ಬಗೆಹರಿಸಿ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವವರು ಯಾರು ಎಂಬುದೇ ಯಕ್ಷಪ್ರಶ್ನೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts