More

    ತಿರುಪತಿ ದೇವಾಲಯಕ್ಕೆ 400 ಕೋಟಿ ರೂ. ನಷ್ಟ!

    ತಿರುಪತಿ: ತಿರುಮಲದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ತಾನದ ಉಸ್ತುವಾರಿ ನೋಡಿಕೊಳ್ಳುತ್ತಿರುವ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಟ್ರಸ್ಟ್​ಗೆ ಲಾಕ್​ಡೌನ್​ನಿಂದಾಗಿ ಸುಮಾರು 400 ಕೋಟಿ ರೂ. ಆದಾಯ ನಷ್ವಾಗಿದೆ. ವಿಶ್ವದ ಶ್ರೀಮಂತ ದೇವಾಲಯ ಟ್ರಸ್ಟ್ ಎನಿಸಿಕೊಂಡಿರುವ ಟಿಟಿಡಿ ತನ್ನ ಸಿಬ್ಬಂದಿ ವೇತನ ಪಾವತಿಸಲು ಮತ್ತು ದೈನಂದಿನ ವೆಚ್ಚ ಸರಿದೂಗಿಸಲು ಹಣದ ಕೊರತೆ ಎದುರಿಸುತ್ತಿದೆ.

    ಇದನ್ನೂ ಓದಿ ಅರೆ ಹೊಟ್ಟೆ, ಬಗಲಲ್ಲಿ ಪುಟ್ಟ ಮಕ್ಕಳು… 1,100 ಕಿ.ಮೀ ನಡೆದ ದಂಪತಿ… ಮುಂದೆ?

    ರುಮಲ ಶ್ರೀನಿವಾಸ ಸ್ವಾಮಿ ಸನ್ನಿಧಾನಕ್ಕೆ ಪ್ರತಿದಿನ 80 ಸಾವಿರದಿಂದ ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡುತ್ತಿದ್ದರು. ವಿಶೇಷ ದಿನಗಳಂದು ಈ ಭಕ್ತರ ಸಂಖ್ಯೆ ದುಪ್ಪಟ್ಟಾಗುತ್ತಿತ್ತು. ಮಾಸಿಕ ಆದಾಯ 200-240 ಕೋಟಿ ರೂ. ಬರುತಿತ್ತು. ಈಗ ಇದೆಲ್ಲಕ್ಕೂ ಕೋವಿಡ್​-19ನಿಂದಾಗಿ ಬ್ರೇಕ್​ ಬಿದ್ದಿದೆ. ಕರೊನಾ ಭೀತಿಯಲ್ಲಿ ದೇವಾಲಯಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ಪರಿಣಾಮ 50 ದಿನಗಳ ಲಾಕ್​ಡೌನ್​ ಅವಧಿಯಲ್ಲಿ ತಿರುಪತಿ ಹುಂಡಿಗೆ 400 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಟಿಟಿಡಿ ಚೇರ್ಮನ್​ ವೈ.ವಿ. ಸುಬ್ಬಾರೆಡ್ಡಿ ತಿಳಿಸಿದ್ದಾರೆ.

    ಇದನ್ನೂ ಓದಿ ರವಿ ಚನ್ನಣ್ಣನವರ್​​ ತಮ್ಮ ತಾಯಿಯ ಫೋಟೋ ಹಾಕಿ ಏನು ಹೇಳಿದ್ರು…?

    ಕಳೆದ ಲಾಕ್​ಡೌನ್​ ಅವಧಿಯಲ್ಲಿ ಸಿಬ್ಬಂದಿ ವೇತನ, ಪಿಂಚಣಿ, ನಿರ್ವಹಣಾ ವೆಚ್ಚಕ್ಕಾಗಿ ಈಗಾಗಲೇ 300 ಕೋಟಿ ರೂ. ಅನ್ನು ಟಿಟಿಡಿ ಭರಿಸಿದೆ. ತನ್ನ ಬಳಿ ಇರುವ 8 ಟನ್ ಚಿನ್ನ ಮತ್ತು 14,000 ಕೋಟಿ ರೂ. ಸ್ಥಿರ ಠೇವಣಿ ಮುಟ್ಟದೆ ಈ ಆರ್ಥಿಕ ಬಿಕ್ಕಟ್ಟು ಪರಿಹರಿಸುವ ಮಾರ್ಗಗಳ ಬಗ್ಗೆ ಚರ್ಚಿಸಲಾಗುತ್ತಿದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.

    ತಿರುಪತಿ ದೇವಾಲಯಕ್ಕೆ 400 ಕೋಟಿ ರೂ. ನಷ್ಟ!ಟಿಟಿಡಿ 2020-21ರ ವಾರ್ಷಿಕ ಬಜೆಟ್​ನ ಗಾತ್ರ 3,309.89 ಕೋಟಿ ರೂಪಾಯಿ. ಆದರೆ ಮಾರ್ಚ್ 20ರಿಂದ ಹುಂಡಿಯಲ್ಲಿ 150-170 ಕೋಟಿ ರೂ. ಅಂದಾಜು ನಷ್ಟವಾಗಿದೆ. ಕಾಣಿಕೆ ಹುಂಡಿ, ದರ್ಶನ ಟಿಕೆಟ್​, ಅರ್ಜಿತ ಸೇವಾ, ಪ್ರಸಾದ, ವಸತಿ ಸೌಲಭ್ಯ ಮತ್ತು ದೇಣಿಗೆ ಎಲ್ಲವೂ ಸೇರಿ ಸುಮಾರು 400 ಕೋಟಿ ರೂ. ಆದಾಯಕ್ಕೆ ಕತ್ತರಿ ಬಿದ್ದಿದೆ. ಪ್ರಸಕ್ತ ವರ್ಷಕ್ಕೆ ಸಿಬ್ಬಂದಿ ವೇತನ ಸೇರಿ ಇತರ ಖರ್ಚು ಎಂದು 1,385.09 ರೂ. ಅಂದಾಜಿದ್ದು, ಪ್ರತಿ ತಿಂಗಳು 120 ಕೋಟಿ ರೂ. ಮೇಲ್ಪಟ್ಟು ಖರ್ಚು ಬರುತ್ತಿದೆ. ಟಿಟಿಡಿ ನಡೆಸುತ್ತಿರುವ ಎಸ್​ವಿಐಎಂಎಸ್​, ಬಿಐಆರ್​ಆರ್​ಡಿ ಮತ್ತು ಇತರ ಆರೋಗ್ಯ ಸಂಸ್ಥೆಗಳಿಗೂ 400 ಕೋಟಿ ರೂ. ಅನುದಾನ ನೀಡಬೇಕಿದೆ.

    ಇದನ್ನೂ ಓದಿ ರೇಷ್ಮೆ ಬೆಳೆಗಾರರು ಕಾದರೂ ಬಾರದ ಡಿಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts