More

    500ಕೋಟಿ ರೂ.ವೆಚ್ಚದಲ್ಲಿ ತಿರುಪತಿ ರೈಲು ನಿಲ್ದಾಣ ಅಭಿವೃದ್ಧಿ: ನಿರ್ಮಾಣಕ್ಕಿದೆ ದ್ರಾವಿಡ ವಾಸ್ತು ಶೈಲಿ

    ತಿರುಪತಿ: ವಿಶ್ವವಿಖ್ಯಾತ ಧಾರ್ಮಿಕ ಯಾತ್ರಾಸ್ಥಳ ತಿರುಪತಿಯ ರೈಲು ನಿಲ್ದಾಣ ವಿಶ್ವದರ್ಜೆಯ ಆಧುನಿಕ ಮೂಲಸೌಲಭ್ಯಗಳೊಂದಿಗೆ ಮೇಲ್ದರ್ಜೆಗೇರಲಿದೆ. ತಿರುಮಲೆಯ ತಿಮ್ಮಪ್ಪನ ವೈಭವವನ್ನು ಸಾರಿ ಹೇಳುವಂತೆ ಪ್ರತ್ಯೇಕ ಮತ್ತು ಸಾಂಪ್ರದಾಯಿಕತೆಗೆ ದಕ್ಕೆ ಬಾರದಂತೆ ವಿವಿಧ ಡಿಸೈನ್​ಗಳೊಂದಿಗೆ ನಿರ್ಮಿಸಲಿರುವುದು ವಿಶೇಷ.

    ಇದನ್ನೂ ಓದಿ: ಈ ಮಾರ್ಗಗಳಲ್ಲಿ ವಂದೇ ಭಾರತ್ ರೈಲುಗಳ ಬೇಡಿಕೆ ಹೆಚ್ಚಿದ ನಂತರ ವಿಮಾನ ಟಿಕೆಟ್‌ ದರ ಶೇ.30ರಷ್ಟು ಅಗ್ಗ
    ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಶರವೇಗದಲ್ಲಿ ಪೂರ್ಣಗೊಳಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ. ಇದರ ಭಾಗವಾಗಿ ಈಗಾಗಲೇ ನಿಲ್ದಾಣದ ದಕ್ಷಿಣದಲ್ಲಿ ನೂತನ ಭವನಗಳು, 1ರಿಂದ 6ನೇ ಪ್ಲಾಟ್​ಫಾರಂ ವರೆಗೆ ಏರ್​ ಕಾನ್​ಕೋರ್ಸ್​ ನಿರ್ಮಾಣಕ್ಕಾಗಿ ಬೇಸ್​ಮೆಂಟ್​ ಕಾಸ್ಟಿಂಗ್​ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

    ತಿರುಪತಿ ರೈಲು ನಿಲ್ದಾಣಕ್ಕೆ ಈಗಾಗಲೇ ಪ್ರತ್ಯೇಕತೆ ಇದೆ. 500ಕೋಟಿ ರೂ.ವೆಚ್ಚದಲ್ಲಿ ಈ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಯೋಜನೆ ಇದಾಗಿದೆ, ಸುಮಾರು 30 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ಮೂಲ ಸೌಕರ್ಯಗಳೊಂದಿಗೆ ನೂತನ ನಿಲ್ದಾಣ ತಲೆ ಎತ್ತಲಿದೆ. ಪ್ರಯಾಣಿಕರಿಗೆ ಮೂಲಸೌಕರ್ಯ ಒದಗಿಸುವುದರ ಜತೆಗೆ ನಿಲ್ದಾಣದ ವಾಣಿಜ್ಯ ಸಂಕೀರ್ಣವನ್ನು ಅತ್ಯಾಧುನಿಕವಾಗಿ ಅಭಿವೃದ್ಧಿ ಪಡಿಸಲಾಗುತ್ತದೆ.

    ಪ್ರಮುಖ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ಜವಾಬ್ದಾರಿಯನ್ನು 2017 ರಲ್ಲಿ ಕೇಂದ್ರ ಸರ್ಕಾರ ಎನ್​ಬಿಸಿಸಿಗೆ ನೀಡಿತು. ಈ ಕಾರ್ಯಕ್ರಮದ ಅಡಿಯಲ್ಲಿ ತಿರುಪತಿಯಲ್ಲಿರುವ ನಿಲ್ದಾಣದ ಕಟ್ಟಡವು ಸಾಂಪ್ರದಾಯಿಕ ರಚನೆ, ದಟ್ಟಣೆ-ಮುಕ್ತ, ಸಂಘರ್ಷವಿಲ್ಲದ ಪ್ರವೇಶ ಮತ್ತು ನಿಲ್ದಾಣದ ಆವರಣಕ್ಕೆ ಅಡೆತಡೆಯಿಲ್ಲದೆ ಆಗಮನ-ನಿರ್ಗಮನಕ್ಕೆ ಕ್ರಮಕೈಗೊಳ್ಳಲಾಗುತ್ತದೆ. ವಾಣಿಜ್ಯ ಮಳಿಗೆಗಳು, ಫುಡ್ ಕೋರ್ಟ್‌ಗಳು, ವಾಷ್​ ರೂಂ, ಶೌಚಗೃಹಗಳು, ಅಂಗವಿಕಲರ ಸ್ನೇಹಿ ಸೌಲಭ್ಯಗಳು, ಎಟಿಎಂಗಳು, ಫಾರ್ಮಸಿ, ಪಾರ್ಕಿಂಗ್​ ಸ್ಥಳ ಸೇರಿ ಹಲವು ಸೌಲಭ್ಯಗಳು ಸಂಕೀರ್ಣದಲ್ಲಿ ಹೊಂದಿರುತ್ತದೆ.

    ದ್ರಾವಿಡ ವಾಸ್ತುಶಿಲ್ಪದ ಛಾಯೆ ನೂತನ ನಿಲ್ದಾಣದ ಮೇಲೆ ಇರಲಿದೆ. ನೂತನ ಸಂಕೀರ್ಣಕ್ಕಾಗಿ ಒಂದೆರಡು ದಿನದಿಂದ ಈಗಿನ ನಿಲ್ದಾಣದ ಉತ್ತರದಲ್ಲಿ ಹಳೆಯ ಒಂದೆರಡು ದೊಡ್ಡ ಭವನಗಳನ್ನು ಕೆಡವಲಾಗಿದ್ದು, ಎಲ್ಲ ದಿಕ್ಕುಗಳಲ್ಲೂ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. ಪ್ರಯಾಣಿಕರಿಗೆ ತೊಂದರೆಯಾಗದಂತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

    ತಿರುಪತಿ ರೈಲು ನಿಲ್ದಾಣ ಅಭಿವೃದ್ಧಿಗೆ ಆಸಕ್ತಿವಹಿಸಿದ್ದೇವೆ. ರೈಲ್ವೇ ಸಚಿವರೂ ಸೇರಿದಂತೆ ಅಧಿಕಾರಿಗಳ ಜತೆ ಕಾಲಕಾಲಕ್ಕೆ ಸಂಪರ್ಕಿಸಿ ಚರ್ಚಿಸಲಾಗಿದೆ. ನೂತನ ಭವನಗಳು, ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಾಗ ಜನರಿಗೆ ನೋಡಿದಾ ಕ್ಷಣ ಭಕ್ತಿ ಭಾವನೆ ಮೂಡುವಂತೆ ಮಾಡಲಾಗುತ್ತದೆ.
    -ಗುರುಮೂರ್ತಿ, ತಿರುಪತಿ ಸಂಸದ.

    ರ‍್ಯಾಪಿಡ್ ಎಕ್ಸ್ ರೈಲಿನ ಸೌಲಭ್ಯ, ವೇಗವನ್ನು ಮೆಚ್ಚಿದ ಪ್ರಯಾಣಿಕರು; ರೈಲಿನ ವಿಶೇಷತೆಗಳೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts