More

    ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ : ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕಿವಿಮಾತು

    ಧಾರವಾಡ : ಕರೊನಾ ಪರಿಸರದ ನಡುವೆಯೇ ಜುಲೈ 19 ಮತ್ತು 22 ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ರಾಜ್ಯದ ವಿದ್ಯಾರ್ಥಿಗಳು ತಯಾರಾಗುತ್ತಿದ್ದಾರೆ. ಈ ಸಂದರ್ಭದಲ್ಲಿ, “ಯಾವುದೇ ಕಾರಣಕ್ಕೂ ಆತಂಕಕ್ಕೊಳಗಾಗದೆ, ಧೈರ್ಯವಾಗಿ ಪರೀಕ್ಷೆಗಳನ್ನು ಎದುರಿಸಿ, ಅತ್ಯುತ್ತಮ ಅಂಕಗಳನ್ನು ಗಳಿಸಿ” ಎಂದು ಧಾರವಾಡದ ಜೆಎಸ್ಎಸ್ ಐಟಿಐ ಕಾಲೇಜಿನ ಪ್ರಾಂಶುಪಾಲರಾದ ಮಹಾವೀರ ಉಪಾಧ್ಯೆ ಶುಭ ಹಾರೈಸಿದ್ದಾರೆ.

    “ಈ ಬಾರಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳನ್ನೂ ತೇರ್ಗಡೆ ಮಾಡುವುದಾಗಿ ಶಿಕ್ಷಣ ಇಲಾಖೆ ಘೋಷಿಸಿದೆ. ಹಾಗಂತ ಅಸಡ್ಡೆ ತೋರಬೇಡಿ. ಹೆಚ್ಚಿನ ಅಂಕಗಳನ್ನು ಗಳಿಸುವ ಪ್ರಯತ್ನ ಮಾಡಿ” ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ. ಮತ್ತೊಂದೆಡೆ, ಅಂಕ ಗಳಿಕೆ ಧಾವಂತದಲ್ಲಿ ಆತ್ಮಸ್ಥೈರ್ಯ ಕಳೆದುಕೊಳ್ಳುವುದೂ ಬೇಡ ಎಂದಿರುವ ಅವರು, “ಅಂಕ ಕಡಿಮೆ ಆಗುವ ಆತಂಕ ಬೇಡ, ಏಕೆಂದರೆ ಅಂಕಗಳೇ ಅಂತಿಮವಲ್ಲ. ಜೀವನದ ಎಷ್ಟೋ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಸಿದ್ಧರಾಗಬೇಕು. ಈ ನಿಟ್ಟಿನಲ್ಲಿ ಪಾಲಕರೂ ವಿದ್ಯಾರ್ಥಿಗಳ ಮೇಲೆ ಒತ್ತಡ ಹಾಕಬೇಡಿ” ಎಂದಿದ್ದಾರೆ.

    ಇದನ್ನೂ ಓದಿ: ಮಕ್ಕಳಿಗೆ ಕರೊನಾ ಲಸಿಕೆ : ‘ಮುಗಿಯುವ ಹಂತದಲ್ಲಿ ಕ್ಲಿನಿಕಲ್ ಟ್ರಯಲ್ಸ್​’

    ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ವಿದ್ಯಾರ್ಥಿ ಜೀವನದಲ್ಲಿ ಮೈಲಿಗಲ್ಲು. ಅದನ್ನು ಹುಮ್ಮಸ್ಸಿನಿಂದ ಎದುರಿಸಬೇಕು. ಕಳೆದ ಬಾರಿಯೂ ಕರೊನಾ ನಡುವೆಯೇ ಪರೀಕ್ಷೆ ನಡೆಸುವಲ್ಲಿ ಸಫಲವಾಗಿದ್ದ ರಾಜ್ಯ ಶಿಕ್ಷಣ ಇಲಾಖೆಯು ಅತ್ಯಂತ ಸುರಕ್ಷಾ ಕ್ರಮಗಳೊಂದಿಗೆ ಪರೀಕ್ಷೆ ನಡೆಸುವ ತಯಾರಿ ನಡೆಸಿದೆ. ಒಂದು ಪರೀಕ್ಷಾ ಕೊಠಡಿಯಲ್ಲಿ 12 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಿ, ಆರೋಗ್ಯಪೂರ್ಣ ವ್ಯವಸ್ಥೆ ಮಾಡಿದೆ. ಆದ್ದರಿಂದ ವಿದ್ಯಾರ್ಥಿಗಳು, ಪಾಲಕರು ಯಾವುದೇ ಆತಂಕ ಪಡುವುದು ಬೇಡ ಎಂದು ಉಪಾಧ್ಯೆ ಹೇಳಿದ್ದಾರೆ.

    ಜೆಇಇ 4ನೇ ಹಂತದ ಪರೀಕ್ಷೆ ಮುಂದೂಡಿಕೆ; ಜುಲೈ 20 ರವರೆಗೆ ನೋಂದಣಿ ಅವಕಾಶ

    ಚಿತ್ರ ನಿರ್ಮಾಪಕನ​ ವಿರುದ್ಧ ರೇಪ್ ಕೇಸ್; ಕೆಲಸ ನೀಡುವುದಾಗಿ ಹೇಳಿ ವಂಚಿಸಿದ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts