More

    ಬೇಸಿಗೆಯ ಬಿರು ಬಿಸಿಲಿನಿಂದ ಚರ್ಮ ರಕ್ಷಣೆಗೆ ಇಲ್ಲಿಗೆ ಕೆಲವು ಸಲಹೆ…

    ಬೆಂಗಳೂರು: ಮಹಿಳೆಯರು ಸೌಂದರ್ಯಪ್ರಿಯರು. ತಮ್ಮ ಸೌಂದರ್ಯ ಮತ್ತು ಆರೋಗ್ಯದ ಕುರಿತಾಗಿ ಹೆಚ್ಚಿನ ಕಾಳಜಿಯನ್ನು ವಹಿಸುತ್ತಾರೆ. ಈ ಬಿಸಿಲಿಗೆ ಹೊರಗೆ ಹೋಗಿ ಬಂದರೆ ಸಾಕು ಚರ್ಮವೆಲ್ಲ ಬೆಂದು ಹೋಗುತ್ತದೆ, ತ್ವಚೆ ಒಣಗಿದಂತೆ ಕಾಣುತ್ತದೆ, ಬಿಸಿಲಿಗೆ ಚರ್ಮವೆಲ್ಲ ಕಪ್ಪಾಗಿ ಹೋಗಿದೆ. ಬಿಸಿಲಿನ ಝಳ ಹೆಚ್ಚಾದಾಗ ಏನು ಮಾಡಬೇಕು ಎನ್ನವ ಪ್ರಶ್ನೆ ಎಲ್ಲರಲ್ಲಿಯೂ ಇರುತ್ತದೆ ಇದಕ್ಕೆ ನಾವು ಇಂದು ಕೆಲವು ಸಲಹೆ ನೀಡುತ್ತೇವೆ.

    ಬೇಸಿಗೆಯಲ್ಲಿ ಚರ್ಮ ಕಪ್ಪಾಗಲು ಕಾರಣ:

    ಸೂರ್ಯನಿಂದ ಹೊರಸೂಸುವ ಬೆಳಕಿನಲ್ಲಿರುವ ಯುವಿ ಕಿರಣಗಳು ನಮ್ಮ ಚರ್ಮದ ಕೋಶಗಳಿಗೆ ಹಾನಿ ಮಾಡುತ್ತೆ ಹೀಗಾಗಿ ಟ್ಯಾನ್ ಉಂಟಾಗುತ್ತೆ. ಇದ್ರಿಂದ ನಮ್ಮ ಚರ್ಮ ಕಪ್ಪಾಗುತ್ತದೆ. ಇದ್ರಿಂದ ತ್ವಚೆಯ ಬಣ್ಣ ಬದಲಾಗುತ್ತದೆ.

    ಇದನ್ನೂ ಓದಿ:  ನಾಲಿಗೆ, ಜನನಾಂಗ, ಗುದದ್ವಾರ ಕತ್ತರಿಸಿದ ಸ್ಥಿತಿಯಲ್ಲಿ ಆರು ಹಸುಗಳ ಶವ ಪತ್ತೆ!

    ಚರ್ಮದ ರಕ್ಷಣೆ ಮಾಡುವುದು ಹೇಗೆ?:

    • ಬೇಸಿಗೆಯಲ್ಲಿ ಮನೆಯಿಂದ ಹೊರಗೆ ಹೋದಾಗ ಧೂಳು ಮುಖ, ಶರೀರದ ಮೇಲೆ ಕೂರುತ್ತದೆ. ಅದಕ್ಕೆ ಕನಿಷ್ಠ ದಿನಕ್ಕೆರಡು ಬಾರಿ ತಣ್ಣೀರಿನಿಂದ ಮುಖ ತೊಳೆಯುತ್ತಿರಬೇಕು.
    • ಎಲೆಕೋಸು ಎಲೆಗಳನ್ನು ಕಪ್ಪಾದ ಚರ್ಮದ ಮೇಲೆ ಕವರ್ ಮಾಡಿ ಬಳಿಕ ಕಾಲು ಗಂಟೆ ಬಿಟ್ಟು ನಂತರ ತೊಳೆಯಿರಿ.
    • ಟೊಮೆಟೊ ರಸವನ್ನು ಮುಖಕ್ಕೆ ಹಚ್ಚಿದ್ರೆ ಉತ್ತಮ ಫಲಿತಾಂಶ ಸಿಗುತ್ತದೆ.
    • ಟೊಮೆಟೊ ರಸವನ್ನು ಸೂರ್ಯನ ಬಿಸಿಲಿಗೆ ಕಪ್ಪಾದ ಜಾಗಕ್ಕೆ ಹಚ್ಚಿ ಉಜ್ಜಿಕೊಳ್ಳಿ.
    • ಮೊಸರಿನ ಜೊತೆ ಕಡ್ಲೆಹಿಟ್ಟು ಅಥವಾ ಹಳದಿ ಬೆರೆಸಿ ಮುಖಕ್ಕೆ ಹಚ್ಚಿ ಚೆನ್ನಾಗಿ ಮಸಾಜ್​ ಮಾಡಿಕೊಳ್ಳಬೇಕು.
    • ನೀರಿನಲ್ಲಿ ನಿಮ್ಮ ಕೈಕಾಲುಗಳನ್ನು ಮಸಾಜ್ ಮಾಡುತ್ತಿರಿ. ಧೂಳು ಮತ್ತು ಬಿಸಿಲಿನಿಂದ ರಕ್ಷಿಸಿಕೊಳ್ಳು ಸ್ವಚ್ಛತೆ ಅಗತ್ಯವಾಗಿದೆ.
    • ಹದ ಬಿಸಿಯ ನೀರಿಗೆ ಅರ್ಧ ಚಮಚ ಎಣ್ಣೆ ಹಾಕಿ ಕೈಕಾಲುಗಳಿಗೆ ಮಸಾಜ್ ಮಾಡಿ.
    • ಮುಖಕ್ಕೆ ಸೌತೆಕಾಯಿ, ಮೊಸರು ಲೇಪನವನ್ನು ಬೆರೆಸಿದರೆ ತಂಪಾಗುತ್ತದೆ

    ಸೀಮಂತಕ್ಕೆ 90 ಸಾವಿರ ರೂ. ಬೆಲೆಯ ಬಟ್ಟೆ ಧರಿಸಿದ ರಾಮ್ ಚರಣ್ ಪತ್ನಿ ಉಪಾಸನಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts