More

    ಕನಕದಾಸ ತತ್ವಾದರ್ಶ ಮೈಗೂಡಿಸಿಕೊಳ್ಳಿ

    ಕುಕನೂರು: ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸುಸಂಸ್ಕೃತ ವ್ಯಕ್ತಿಗಳನ್ನಾಗಿ ರೂಪಿಸಬೇಕು ಎಂದು ತಿಂಥಣಿ ಶ್ರೀ ಸಿದ್ದರಾಮಾನಂದ ಸ್ವಾಮೀಜಿ ಹೇಳಿದರು.

    ತಾಲೂಕಿನ ಕುದರಿಮೋತಿಯಲ್ಲಿ ಆಯೋಜಿಸಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಬುಧವಾರ ಆಶೀರ್ವಚನ ನೀಡಿದರು. ಸಮಾಜದಲ್ಲಿ ಬಡವ, ಶ್ರೀಮಂತ, ಮೇಲು-ಕೀಳು ಎಂಬ ಭೇದವಿಲ್ಲದೆ ನೆಮ್ಮದಿ ಜೀವನ ನಡೆಸಬೇಕು. ಪ್ರತಿಯೊಬ್ಬರು ಕನಕದಾಸ ತತ್ವಾದರ್ಶ ಮೈಗೂಡಿಸಿಕೊಳ್ಳಬೇಕು ಎಂದರು.
    ಶ್ರೀ ವಿಜಯ ಮಹಾಂತ ಸ್ವಾಮೀಜಿ ಮಾತನಾಡಿ, ಇಂದಿನ ವಿಜ್ಞಾನ, ತಂತ್ರಜ್ಞಾನ ಯುಗದಲ್ಲೂ ಸಾಮಾಜಿಕ ಸಮಾನತೆ ಸಾಧ್ಯವಾಗದಿರುವುದು ನೋವಿನ ವಿಚಾರ. ಕನಕದಾಸ ಮಾರ್ಗದಲ್ಲಿ ಮುನ್ನಡೆಯಲು ಸಂಕಲ್ಪ ಮಾಡಬೇಕಿದೆ ಎಂದರು.

    ಬಾದಿಮನಾಳದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಕನಕದಾಸ ಕೃತಿಗಳಲ್ಲಿ ಭಕ್ತಿಯ ಜತೆಗೆ ಜೀವನಕ್ಕೆ ಅಗತ್ಯ ಮೌಲ್ಯಗಳಿವೆ. ಮೋಹನ ತರಂಗಿಣಿ, ನಳ ಚರಿತ್ರೆ ಅಮೂಲ್ಯ ಕೃತಿಗಳಾಗಿವೆ ಎಂದರು.

    ಗ್ರಾಪಂ ಉಪಾಧ್ಯಕ್ಷೆ ಲಕ್ಷ್ಮೀ ವಿಜಯಕುಮಾರ ದಾಸರ, ಸದಸ್ಯ ಶರಣಯ್ಯ ಜಂಗಮೂರು, ಕುಕನೂರು ಘಟಕದ ಅಧ್ಯಕ್ಷ ಮಂಜುನಾಥ ಕಡೇಮನಿ, ಸಕ್ರಪ್ಪ ಚೌಡಕಿ, ಹನುಮಗೌಡ ಪಾಟೀಲ್, ಪ್ರಮುಖರಾದ ರವಿ ಕಟ್ಟಗಿ, ಮಂಜುನಾಥ ಗಟ್ಟೆಪ್ಪನವರ, ಶಿವಕುಮಾರ ರಾಜೂರು, ಅಮರೇಶ ತಲ್ಲೂರು, ಸುಭಾಷ್ ಈಡಿಗೇರ, ಪಾಮಪ್ಪ, ಅಶೋಕ ಗಟ್ಟೆಪ್ಪನವರ, ಪಂಪಾಪತಿ ವಣಗೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts