More

    ಇಎಂಐ ಪಾವತಿಸಿದ್ದೀರಾ?: ಮಾರಟೋರಿಯಂ ಅವಧಿಯ ರಿವಾರ್ಡ್ ನಿಮ್ಮದಾಗಬಹುದು!

    ನವದೆಹಲಿ: ಕರೊನಾ ಲಾಕ್​ಡೌನ್ ಸಮಯದಲ್ಲಿ ಘೋಷಿಸಲ್ಪಟ್ಟ ಮಾರಟೋರಿಯ ಅವಧಿಯಲ್ಲೂ ಚಾಚೂ ತಪ್ಪದೆ ಇಎಂಐ ಪಾವತಿಸಿದ್ದೀರಾ? ಹಾಗಾದ್ರೆ ಮೊರಟೋರಿಯಂ ಅವಧಿಯ ರಿವಾರ್ಡ್ ಅನ್ನು ನೀವು ನಿರೀಕ್ಷಿಸಬಹುದು!. ಈ ಸಂಬಂಧ ಯೋಜನೆಯೊಂದು ರೂಪುಗೊಳ್ಳುತ್ತಿದ್ದು, ಕೇಂದ್ರ ಸರ್ಕಾರ ಶೀಘ್ರವೇ ಇದನ್ನು ಪ್ರಕಟಿಸಲಿದೆ ಎಂದು ಈ ವಿದ್ಯಮಾನದ ಅರಿವುಳ್ಳ ಅಧಿಕಾರಿಗಳು ತಿಳಿಸಿದ್ದಾರೆ.

    ಮಾರಟೋರಿಯಂ ಅವಧಿಯ ಬಡ್ಡಿ ಮೇಲಿನ ಬಡ್ಡಿ ಮನ್ನಾ ವಿಚಾರ ಚರ್ಚೆಯಲ್ಲಿರುವಾಗಲೇ ಇಂಥದ್ದೊಂದು ಯೋಜನೆಯ ವಿಚಾರ ಪ್ರಸ್ತಾಪವಾಗಿರುವುದು ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುತ್ತಿರುವವರಲ್ಲಿ ನಮ್ಮನ್ನೂ ಸರ್ಕಾರ ಗಮನಿಸುತ್ತಿದೆ ಎಂಬ ವಿಶ್ವಾಸ ಮೂಡಿದೆ. ಮಾರ್ಚ್ 1ರಿಂದ ಆಗಸ್ಟ್ 31ರ ತನಕದ ಮಾರಟೋರಿಯಂ ಅವಧಿಯ ಬಡ್ಡಿ ಮೇಲಿನ ಬಡ್ಡಿ ಮನ್ನಾ ಮಾಡುವ ಪ್ರಸ್ತಾವನೆ ಪರಿಶೀಲನೆಯಲ್ಲಿದ್ದು, ದೀಪಾವಳಿ ಹೊತ್ತಿಗೆ ಯೋಜನೆ ರೂಪುಗೊಳ್ಳುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳನ್ನು ಮಾತನ್ನು ಉಲ್ಲೇಖಿಸಿ ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.

    ಇದನ್ನೂ ಓದಿ: ಸೂಪರ್‌ಕಿಂಗ್ಸ್-ರಾಯಲ್ಸ್ ನಡುವೆ ಗೆದ್ದವರಿಗಷ್ಟೇ ಉಳಿಗಾಲ

    ನಿಶ್ಚಿತ ಸೆಕ್ಟರ್ ಎಂಬ ತಾರತಮ್ಯವೇನೂ ಇದರಲ್ಲಿ ಇರಲ್ಲ. 2 ಕೋಟಿ ರೂಪಾಯಿ ತನಕದ ಸಾಲಕ್ಕೆ ಇದು ಅನ್ವಯವಾಗಲಿದೆ. ವೈಯಕ್ತಿಕ ಸಾಲಕ್ಕೆ ಮಾತ್ರವೋ ಅಥವಾ ಮನೆ ಸಾಲಕ್ಕೂ ಅನ್ವಯವಾಗುವುದೋ ಎಂಬುದಿನ್ನೂ ಸ್ಪಷ್ಟವಾಗಿಲ್ಲ. ಬಡ್ಡಿ ಮೇಲಿನ ಬಡ್ಡಿ ವಿನಾಯಿತಿ ಎಲ್ಲ ಸಾಲಗಾರರಿಗೂ ಸಿಗಲಿದೆ. ಅಂದರೆ ಆರು ತಿಂಗಳ ಮೊರಟೋರಿಯಂ ಅವಧಿಯ ಲಾಭ ಪಡೆದುಕೊಂಡು, ಸಾಲ ಮರುಪಾವತಿ ಮಾಡಿದವರಿಗೂ ಮತ್ತು ಆರು ತಿಂಗಳ ಅವಧಿಯಲ್ಲೂ ಇಎಂಐ ತುಂಬಿದವರಿಗೂ ಇದರ ಲಾಭ ಸಿಗಲಿದೆ ಎಂಬುದು ಅಧಿಕಾರಿಗಳ ಮಾತಿನ ಸಾರ. (ಏಜೆನ್ಸೀಸ್)

    ಇಮ್ರಾನ್ ಖಾನ್​ ಅವರನ್ನು ಜೈಲಿಗೆ ಕಳುಹಿಸಿಯೇ ಸಿದ್ಧ- ಮರಿಯಂ ನವಾಜ್ ಪ್ರತಿಜ್ಞೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts