More

    ಬಾಗಲಕೋಟೆಯಲ್ಲಿ ಟಿಕ್​ಟಾಕ್​ ವಿಡಿಯೋ ತಂದ ಆಪತ್ತು, ಎರಡು ಕೋಮಿನವರ ನಡುವೆ ಹೊಡೆದಾಟ; ಹಲವರಿಗೆ ಗಾಯ

    ಬಾಗಲಕೋಟೆ: ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಹಳದೂರು ಗ್ರಾಮದ ಯುವತಿಯರು ಟಿಕ್​ಟಾಕ್​ನಲ್ಲಿ ಪ್ರಕಟಿಸಿದ್ದ ವಿಡಿಯೋ ತುಣುಕು ಬಳಸಿಕೊಂಡು ಯುವಕರ ಗುಂಪೊಂದು ತಾವು ಅರೆಬೆತ್ತಲೆಯಾಗಿ ಸ್ನಾನ ಮಾಡುತ್ತಾ ಕುಣಿಯುತ್ತಿರುವ ವಿಡಿಯೋ ತುಣುಕನ್ನು ಟ್ಯಾಗ್​ ಮಾಡಿ, ಪ್ರಕಟಿಸಿದ್ದು ಭಾರಿ ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ, ಇದು ಎರಡು ಕೋಮುಗಳ ನಡುವೆ ಹೊಡೆದಾಟಕ್ಕೂ ಕಾರಣವಾಗಿ, ಹಲವರು ಗಾಯಗೊಂಡಿದ್ದಾರೆ.

    ವಿಡಿಯೋವನ್ನು ಗಮನಿಸುತ್ತಲೇ, ಟಿಕ್​ಟಾಕ್​ನಲ್ಲಿನ ವಿಡಿಯೋ ತುಣುಕನ್ನು ಡಿಲೀಟ್​ ಮಾಡುವಂತೆ ಯುವತಿಯರ ಮನೆಯವರು ಯುವಕರಿಗೆ ಬುದ್ಧಿ ಹೇಳಿದ್ದರು. ಆದರೆ ಯುವಕರು ಯುವತಿಯರ ಮನೆಯವರ ಬುದ್ಧಿಮಾತನ್ನು ಕೇಳಿರಲಿಲ್ಲ. ಇದು ಎರಡು ಸಮುದಾಯಗಳ ನಡುವೆ ಹೊಡೆದಾಟಕ್ಕೆ ಕಾರಣವಾಯಿತು ಎನ್ನಲಾಗಿದೆ.

    ದೇವರಾಯಪ್ಪ ಮೂಲಿಮನಿ, ಮುದಿಯಪ್ಪ, ಹುಸೇನ ಸಾಧನಿ, ಕಾಂತಪ್ಪ ಸಾಕಾರಿ ಹಾಗೂ ಮತ್ತಿತರ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಒಳಗೊಂಡಂತೆ ಒಟ್ಟು ಮೂವತ್ತು ಜನರ ಮೇಲೆ ಹಲ್ಲೆ ಮಾಡಲಾಗಿದೆ. ತಾಯವ್ವ ಚಲವಾದಿ, ಮಲ್ಲಿಕಾರ್ಜುನ ಚಲವಾದಿ, ಆನಂದ ಚಲವಾದಿ, ಸುರೇಶ್ ಚಲವಾದಿ ಗಂಭೀರ ಗಾಯಗೊಂಡಿದ್ದಾರೆ.

    ಗಾಯಾಳುಗಳಿಗೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆನೀಡಲಾಗುತ್ತಿದೆ. ಸಣ್ಣಪುಟ್ಟ ಗಾಯಗಳಾಗಿದ್ದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮರಳಿದ್ದಾರೆ ಎನ್ನಲಾಗಿದೆ. ಗುಳೇದಗುಡ್ಡ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.

    ಮಂಡ್ಯದಲ್ಲಿ ಐಸೋಲೇಷನ್ ವಾರ್ಡ್​ನಿಂದ ಪರಾರಿಯಾಗಿದ್ದ ವ್ಯಕ್ತಿಯನ್ನು 2 ತಾಸಿನಲ್ಲಿ ಪತ್ತೆ ಮಾಡಿದ ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts