More

    ವಚನಗಳನ್ನು ಓದಿದರೆ ಜೀವನ ಪಾವನ

    ತಿಕೋಟಾ: ಪ್ರತಿಯೊಬ್ಬರೂ ಶರಣರ ವಚನ, ಶರಣರ ಚರಿತ್ರೆ ಓದುವುದನ್ನು ರೂಢಿಸಿಕೊಂಡು ನಮ್ಮ ಜೀವನ ಪಾವನ ಮಾಡಿಕೊಳ್ಳಬೇಕೆಂದು ಜಿಪಂ ಸದಸ್ಯೆ ಪ್ರತಿಭಾ ಪಾಟೀಲ ಹೇಳಿದರು.
    ಪಟ್ಟಣದ ವಿರಕ್ತಮಠದಲ್ಲಿ ನಡೆದ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕ ಉದ್ಘಾಟನಾ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
    ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಜಂಬುನಾಥ ಕಂಚಾಣಿ, ಹೊನವಾಡ ಕಾಲೇಜಿನ ನಿವೃತ್ತ ಪ್ರಾಚಾರ್ಯ ಆರ್.ಎಸ್. ಪಾಟೀಲ, ಬಸಯ್ಯ ವಿಭೂತಿ, ಬಾಬುರಾವ ಮಹಾರಾಜರು ಮಾತನಾಡಿದರು.
    ತಿಕೋಟಾ ಶ.ಸಾ.ಪ ಗೌರವ ಅಧ್ಯಕ್ಷ ಡಾ. ಜಿ. ಎಸ್. ಭೂಸಗೊಂಡ ಅಧ್ಯಕ್ಷತೆ ವಹಿಸಿದ್ದರು. ತಿಕೋಟಾ ಶರಣ ಸಾಹಿತ್ಯ ಪರಿಷತ್ ನೂತನ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ ಅಧಿಕಾರ ಸ್ವೀಕರಿಸಿ ಮಾತನಾಡಿದರು.
    ಹಿರೇಮಠದ ಶಿವಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಜಗದೀಶಗೌಡ ಪಾಟೀಲ, ಬಾಬುಗೌಡ ಪಾಟೀಲ, ಭಿಮರಾಯ ಚೌಧರಿ, ರಾವತ್ತ ಕಂಬಾರ, ಲೇಪು ಕೊಣ್ಣುರ, ಶ್ರೀಶೈಲ ಮಂಟೂರ, ಸುನೀಲ ನಾಲಾ, ಎಂ.ಎಸ್. ಭೂಸಗೊಂಡ, ಎಂ.ಐ. ಕಣಬೂರ, ಸತೀಶ ಬಂಡಿ, ಶ್ರೀಶೈಲ ಶಟಗಾರ, ನಿಂಗಪ್ಪ ಕಲಘಟಗಿ, ನಾಗು ಶಾಂಪೂರ, ವಿರಭದ್ರಯ್ಯ ವಿಭೂತಿ, ಸದಾಶಿವ ಮಂಗಸೂಳಿ, ಭಾಗಿರಥಿ ತೇಲಿ, ವಿಜಯಲಕ್ಷ್ಮೀ ಪರನಾಕರ, ಡಾ. ಜಯಶ್ರೀ ನಾಗಠಾಣ, ವಿಜಯಲಕ್ಷ್ಮೀ ಕೋಳಲಮಠ ಮತ್ತಿತರರಿದ್ದರು. ಮಂಜುನಾಥ ತಾಳಿಕೋಟಿ ಪ್ರಾರ್ಥಿಸಿದರು. ಬಸವರಾಜ ದೇವನಾಯಕ ಸ್ವಾಗತಿಸಿದರು. ಬಂದೇನವಾಜ್ ಬೇವನೂರ ನಿರೂಪಿಸಿದರು. ದರೇಪ್ಪ ಸಿದ್ದನಾಥ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts