More

    ಆತ್ಮನಿರ್ಭರ ಯೋಜನೆ ಆರ್ಥಿಕ ಪುನಃಶ್ಚೇತನಕ್ಕೆ ಸಹಕಾರಿ

    ತಿಕೋಟಾ: ಆತ್ಮ ನಿರ್ಭರ ಭಾರತ ಯೋಜನೆ ಸಕಾಲಿಕ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ ವಿಭಾಗದ ಪ್ರಾಧ್ಯಾಪಕ ಡಾ.ಆರ್.ಆರ್. ಬಿರಾದಾರ ಹೇಳಿದರು.
    ಪಟ್ಟಣದ ನೂತನ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಒಂದು ದಿನದ ರಾಷ್ಟ್ರೀಯ ಆನ್‌ಲೈನ್ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

    ಭಾರತದ ಆರ್ಥಿಕ ಹಿಂಜರಿತ ಹಾಗೂ ಮುಂದಿನ ಮಾರ್ಗ ಎಂಬ ವಿಷಯ ಕುರಿತು ಮಾತನಾಡಿದ ಅವರು, ದೀರ್ಘ ಕಾಲದ ಲಾಕ್‌ಡೌನ್‌ದಿಂದ ತೊಂದರೆಗೊಳಗಾದ ಜನರಿಗೆ ಪರಿಹಾರ ನೀಡಲು ಮತ್ತು ಕುಸಿಯುತ್ತಿರುವ ಆರ್ಥಿಕ ಚಟುವಟಿಕೆ ಪುನಃಶ್ಚೇತನಗೊಳಿಸಲು ಪ್ರಧಾನಿ ಮೋದಿಯವರು 20.97 ಲಕ್ಷ ಕೋಟಿ ರೂ. ಆತ್ಮ ನಿರ್ಭರ ಭಾರತ ಅಭಿಯಾನ’ ಎಂಬ ವಿನೂತನ ಯೋಜನೆ ಘೋಷಿಸಿದ್ದಾರೆ. ಇದು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಗಳಿಗೆ, ವಲಸೆ ಕಾರ್ಮಿಕರಿಗೆ, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ, ದಿನಗೂಲಿ ಕೆಲಸಗಾರರಿಗೆ, ಕೃಷಿ ಕ್ಷೇತ್ರ, ಮೀನುಗಾರಿಕೆ, ಜೇನು ಸಾಕಾಣಿಕೆ, ಹೈನುಗಾರಿಕೆ ಮುಂತಾದ ವಲಯಗಳಿಗೆ ಹೆಚ್ಚಿನ ಬಂಡವಾಳ ಮತ್ತು ಹಣಕಾಸಿನ ನೆರವು ನೀಡಲು ಘೋಷಣೆ ಮಾಡಲ್ಪಟ್ಟ ಯೋಜನೆಯಾಗಿದೆ ಎಂದರು.

    ಸಹಾಯಕ ಅರ್ಥಶಾಸ ಪ್ರಾಧ್ಯಾಪಕ ಬಿಎಲ್‌ಡಿಇ ಸಂಸ್ಥೆಯ ಎ.ಎಸ್. ಪಾಟೀಲ ಆಫ್ ಕಾಮರ್ಸ್ ಕಾಲೇಜಿನ ಸಹಾಯಕ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ.ಬಿ.ಎಸ್. ಬೆಳಗಲಿ ಮಾತನಾಡಿ, ಪ್ರಸ್ತುತ ಆರ್ಥಿಕ ಹಿಂಜರಿಕೆಗೆ ನೋಟು ಅಮಾನೀಕರಣ, ಜಿಎಸ್‌ಟಿ ಅಳವಡಿಕೆಯಂಥ ಸಂಗತಿಗಳು ಹಾಗೂ ಜಾಗತಿಕ, ಆರ್ಥಿಕ ಕುಸಿತದಂಥ ಅಂಶಗಳು ಪ್ರಮುಖ ಕಾರಣಗಳಾಗಿವೆ. ಅವುಗಳ ಪರಿಹಾರೋಪಾಯಕ್ಕಾಗಿ ಮಾರುಕಟ್ಟೆಯಲ್ಲಿ ಸರಕುಗಳಿಗೆ ಬೇಡಿಕೆ ಹೆಚ್ಚಿಸುವಂತಹ ಹಣಕಾಸು ಹಾಗೂ ಖಜಾನೆ ನೀತಿಗಳನ್ನು ರೂಪಿಸಬೇಕೆಂದು ಸಲಹೆ ನೀಡಿದರು.
    ಅರ್ಥಶಾಸ್ತ್ರಜ್ಞ ಡಾ.ಅಭಿಜಿತ ಬ್ಯಾನರ್ಜಿ, ರಿಜರ್ವ್ ಬ್ಯಾಂಕ್ ಮಾಜಿ ಗವರ್ನರ್ ಡಾ. ರಘುರಾಮ್ ರಾಜನ್ ಮತ್ತು ಡಾ. ಕೌಶಿಕ್ ಬಸು ಅವರ ಸಲಹೆಗಳನ್ನು ಉಲ್ಲೇಖಿಸುತ್ತ ಪ್ರಸ್ತುತ ಬಹುಸಂಖ್ಯಾತನಾದ ರಾಜಕೀಯ ವ್ಯವಸ್ಥೆಯ ಅಭಿವೃದ್ಧಿಗೆ ಮಾರಕವಾಗಿದೆ ಎಂದು ತಿಳಿಸಿದರು.
    ಪ್ರಾಚಾರ್ಯ ಡಾ.ಎಸ್.ಪಿ. ಮದ್ರೇಕರ ಅಧ್ಯಕ್ಷತೆ ವಹಿಸಿದ್ದರು.

    ಡಾ.ಎ.ಟಿ. ಶ್ರೀನಿವಾಸ, ಡಾ.ಮೀನಾಕ್ಷಿ ಖೇಡ, ಪ್ರೊ.ಆರ್.ಬಿ. ಸಿರಸಂಗಿ ಸೇರಿ ದೇಶದ ಅನೇಕ ರಾಜ್ಯಗಳಿಂದ ಪ್ರಾಧ್ಯಾಪಕರು, ಸಂಶೋಧಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಡಾ. ತಮ್ಮಣ್ಣ ಸ್ವಾಗತಿಸಿದರು. ಪ್ರೊ. ಶೋಭಾ ತುಳಜಾನವರ ನಿರೂಪಿಸಿದರು. ಅರ್ಥಶಾಸ ವಿಭಾಗದ ಮುಖ್ಯಸ್ಥ ಡಾ.ಎಚ್.ಎಂ. ಸಜ್ಜಾದೆ ವಂದಿಸಿದರು.

    ಆತ್ಮನಿರ್ಭರ ಯೋಜನೆ ಆರ್ಥಿಕ ಪುನಃಶ್ಚೇತನಕ್ಕೆ ಸಹಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts