More

    ನಾಯಿಯನ್ನು ತಾಯಿ ಎಂದುಕೊಂಡ ಹುಲಿಗಳು..!

    ಚೀನಾ: ಗೋಲ್ಡನ್ ರಿಟ್ರೈವರ್‌ ನಾಯಿಯ ಧೈರ್ಯದ ವಿಡಿಯೋ ಒಂದು ಅಂತರ್ಜಾಲದಲ್ಲಿ ವೈರಲ್​ ಆಗುತ್ತಿದೆ. ವೀಡಿಯೋದಲ್ಲಿ ನಾಯಿ, ಹುಲಿಗಳ ನಡುವೆ ನಿರ್ಭಯವಾಗಿ ತಿರುಗಾಡುತ್ತಿರುವುದನ್ನು ಕಾಣಬಹುದು. ವಿಚಿತ್ರ ಎಂದರೆ ಈ ಹುಲಿಗಳೂ ನಾಯಿ ಜೊತೆ ಆರಾಮವಾಗಿ ಇವೆ. ನಾಯಿಗೆ ಯಾವ ರೀತಿಯಲ್ಲೂ ಹಾನಿ ಮಾಡುತ್ತಿಲ್ಲ.

    ಈ ವೀಡಿಯೊವನ್ನು ಟೈಗರ್ ಬಿಗ್‌ಫಾನ್ ಎನ್ನುವ ಇನ್ಸ್ಟಾಗ್ರಾಂ ಖಾತೆಯಲ್ಲಿ ಮೇ 26 ರಂದು ಪೋಸ್ಟ್​ ಮಾಡಲಾಗಿದೆ. ಇದಕ್ಕೆ 1.2 ಮಿಲಿಯನ್ ವೀವ್ಸ್​ ಬಂದಿದ್ದು 52,000 ಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದುಕೊಂಡಿದೆ.

    ಪೋಸ್ಟ್ ಪ್ರಕಾರ, ಈ ನಾಯಿಯು ಹುಲಿಗಳು ಮರಿಗಳಾಗಿದ್ದಾಗ ತನ್ನ ಹಾಲನ್ನು ಕುಡಿಸುತ್ತಿತ್ತು. ಹೀಗಾಗಿ ಅವು ಗೋಲ್ಡನ್​ ರಿಟ್ರೀವರ್​ ನಾಯಿಯನ್ನು ತಮ್ಮ ತಾಯಿ ಎಂದು ಭಾವಿಸುತ್ತಿವೆ.

    ಅಂತರ್ಜಾಲದಲ್ಲಿ ಈ ವಿಡಿಯೋ ನೋಡಿದ ವೀಕ್ಷಕರು ಒಮ್ಮೆಗೆ ಬೆಚ್ಚಿಬಿದ್ದರು. ಆದರೆ ಹುಲಿಗಳು ಏಕೆ ಈ ರೀತಿ ವರ್ತಿಸಿವೆ ಎನ್ನುವುದು ಕೆಲವರಿಗೆ ಮಾತ್ರ ಅರ್ಥವಾಗಿದೆ. ಕಾಮೆಂಟ್​ ವಿಭಾಗದಲ್ಲಿ ಜನರು ಬೇರೆ ಬೇರೆ ರೀತಿ ಪ್ರತಿಕ್ರಿಯಿಸಿದ್ದು ‘ಆ ನಾಯಿಯು ಹುಲಿಗಳನ್ನು ಸಾಕಲು ಸಹಾಯ ಮಾಡಿದ್ದರಿಂದ ಅವು ನಾಯಿಯನ್ನು ನೋಯಿಸುವುದಿಲ್ಲ’ ಎಂದು ಒಬ್ಬರು ಬರೆದಿದ್ದಾರೆ.

     
     
     
     
     
    View this post on Instagram
     
     
     
     
     
     
     
     
     
     
     

    A post shared by Tiger (@tiger__bigfan)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts