More

    ಭಾರತೀಯನ ಹೊಟ್ಟೆಯಿಂದ ಹೊರ ತೆಗೆದ್ರು ಫುಟ್​ಬಾಲ್​ ಗಾತ್ರದ ಕ್ಯಾನ್ಸರ್​ ಗಡ್ಡೆ..!

    ನವದೆಹಲಿ: ಕ್ಯಾನ್ಸರ್​ ಗಡ್ಡೆಗಳ ಬಗ್ಗೆ ಎಲ್ಲರೂ ಕೇಳಿರುತ್ತೀರಿ. ಅದು ಶರೀರದಲ್ಲಿ ಅನವಶ್ಯಕವಾಗಿ ಬೆಳೆಯುವ ಜೀವಕೀಶಗಳ ಒಂದು ರಾಶಿ. ಅಬ್ಬಬ್ಬಾ ಎಂದರೆ ಈ ಗಡ್ಡೆಗಳು ಎಷ್ಟು ಬೆಳೆಯಬಹುದಪ್ಪಾ? ಈ ವ್ಯಕ್ತಿಯ ಹೊಟ್ಟೆಯಲ್ಲಿ ಒಂದು ಫುಟ್​ಬಾಲ್​ ಗಾತ್ರದಷ್ಟು ದೊಡ್ಡ ಗಡ್ಡೆಯನ್ನು ವೈದ್ಯರು ಹೊರ ತೆಗೆದಿದ್ದಾರೆ!

    ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಯುಎಇ) ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕರ ತಂಡ, 60 ವರ್ಷದ ಭಾರತೀಯ ವ್ಯಕ್ತಿಯ ಹೊಟ್ಟೆಯಿಂದ ಬರೋಬ್ಬರಿ 4.65 ಕಿಲೋಗ್ರಾಂಗಳಷ್ಟು ತೂಕದ ಫುಟ್‌ಬಾಲ್‌ನ ಗಾತ್ರದ ಗಡ್ಡೆಯನ್ನು ತೆಗೆದುಹಾಕಿದೆ.

    ಈ ವ್ಯಕ್ತಿ ವೃತ್ತಿಯಲ್ಲಿ ಬಡಗಿ. ಅಬುಧಾಬಿಯಲ್ಲಿ ನೆಲೆಸಿರುವ ಭಾರತೀಯ ಪ್ರಜೆ ಯೂಸುಫ್ ಮಿಯಾ ಇಸ್ಮಾಯಿಲ್ ಉಸ್ತಾದ್ ಕಳೆದ ಆರು ತಿಂಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಉಸ್ತಾದ್ ಅವರು ಲಿಪೊಸಾರ್ಕೊಮಾ ಎಂಬ ಅಪರೂಪದ ಮೃದು ಅಂಗಾಂಶದ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಇದು ಕೆಲವೇ ತಿಂಗಳುಗಳಲ್ಲಿ ದೈತ್ಯಾಕಾರದ ಗಾತ್ರಕ್ಕೆ ಬೆಳೆಯುತ್ತದೆ.

    ಉಸ್ತಾದ್ ಮಧುಮೇಹ ಅಥವಾ ಬೊಜ್ಜಿನಂತಹ ಸಮಸ್ಯೆಗಳಿಂದ ಬಳಲುತ್ತಿರಲಿಲ್ಲ. ಆದರೂ ಅವರ ಹೊಟ್ಟೆ ಊದಿಕೊಂಡಿತ್ತು. ಜೊತೆಗೆ ನೋವು ಕೂಡ ಹೆಚ್ಚಾದಾಗ ಪರೀಕ್ಷೆ ಮಾಡಿಸಲು ನಿರ್ಧರಿಸಿದ್ದಾರೆ. ಅಕ್ಟೋಬರ್ 23 ರಂದು ಉಸ್ತಾದ್, ಅಬುಧಾಬಿಯ NMC ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರನ್ನು ಸಂಪರ್ಕಿಸಿದ್ದಾರೆ. ಪ್ರಾಥಮಿಕ ಮೌಲ್ಯಮಾಪನದ ನಂತರ, ಅವರನ್ನು ಸರ್ಜಿಕಲ್ ಆಂಕೊಲಾಜಿಸ್ಟ್ ಡಾ.ಬಾಲಾಜಿ ಬಾಲಸುಬ್ರಮಣಿಯನ್ ಅವರಲ್ಲಿ ಕಳುಹಿಸಲಾಗಿದೆ.

    ಪರೀಕ್ಷೆಯ ನಂತರ ಹೊಟ್ಟೆಯ ಸಂಪೂರ್ಣ ಬಲಭಾಗವನ್ನು ಆಕ್ರಮಿಸಿಕೊಂಡಿರುವ ದೊಡ್ಡ ಗಡ್ಡೆ ಕಂಡುಬಂದಿದೆ. ಸಿ.ಟಿ ಸ್ಕ್ಯಾನ್ ದೊಡ್ಡ ಗೆಡ್ಡೆಯ ಇರುವಿಕೆ ಮತ್ತು ಅದರ ಸ್ಥಳವನ್ನು ದೃಢಪಡಿಸಿತ್ತು. ಇದು ಯಕೃತ್ತಿನ ಮೇಲ್ಮೈ ಕೆಳಗಿನಿಂದ ಅವನ ಸೊಂಟದ ಬಲಭಾಗಕ್ಕೆ ವಿಸ್ತರಿಸಿತು. ಇದು ಬಲ ಮೂತ್ರಪಿಂಡವನ್ನು ಕೂಡ ಆವರಿಸಿತ್ತು. ವೈದ್ಯರು ನ.10ರಂದು ಉಸ್ತಾದ್​ರ ಹೊಟ್ಟೆಯಿಂದ ಆರು ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿ 4.5 ಕೆಜಿ ಗೆಡ್ಡೆಯನ್ನು ತೆಗೆದುಹಾಕಿದರು.

    ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಸಂತೋಷ ಹಂಚಿಕೊಂಡ ಉಸ್ತಾದ್, “ಕ್ಯಾನ್ಸರ್ ಗುಣಪಡಿಸಬಹುದಾದ ಕಾಯಿಲೆ. ನನ್ನ ಕುಟುಂಬ ಮತ್ತು ನಾನು ಆಸ್ಪತ್ರೆಯ ವೈದ್ರು ಹಾಗೂ ಸಿಬ್ಬಂದಿಗೆ ಅತ್ಯಂತ ಕೃತಜ್ಞರಾಗಿರುತ್ತೇವೆ. ತೆಗೆದ ಗಡ್ಡೆಯ ಗಾತ್ರವನ್ನು ತಿಳಿದ ನಂತರ, ನಾನು ಆಶ್ಚರ್ಯಚಕಿತನಾಗಿದ್ದೆ’ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts