More

    ಶಾಸಕ ನೇತೃತ್ವದಲ್ಲಿ ಹುಲಿ ಬೇಟೆ..! ವ್ಯಾಗ್ರನ ಹೊಡೆದುರುಳಿಸಿದವರಿಗೆ ಸಿಕ್ಕಿದ್ದಾದರೂ ಏನು? ವಿವರ ಇಲ್ಲಿದೆ..

    ಡೆಹ್ರಡೂನ್(ಉತ್ತರಾಖಂಡ): ರಾಜ್ಯದ ತೆಹ್ರಿ ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದ್ದ ನರರಕ್ತ ದಾಹಿ ಹುಲಿಯನ್ನು ಅರಣ್ಯಾಧಿಕಾರಿಗಳು ಗುಂಡಿಕ್ಕಿ ಕೊಂದಿದ್ದಾರೆ. ಇದರ ವೀಡಿಯೀ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್​ ಆಗಿದೆ.

    ಇದನ್ನೂ ಓದಿ: ರೀಲ್ಸ್​ ಮಾಡ್ತೀರಾ.. ಎಚ್ಚರ: ‘ಜಮಾಲ್ ಕುಡು’ಗೆ ಮದ್ಯ ಬಾಟಲಿ ಹೊತ್ತು ನೃತ್ಯ ಮಾಡಿದವನಿಗೆ ಬಿತ್ತು ಬೇಡಿ..!

    ತೆಹ್ರಿ ಜಿಲ್ಲೆಯ ಮಲೆತಾ ಗ್ರಾಮದಲ್ಲಿ ಹುಲಿ ಪದೇ ಪದೆ ಜನರ ಮೇಲೆ ದಾಳಿ ನಡೆಸುತ್ತಿರುವ ಬಗ್ಗೆ ಆ ಪ್ರದೇಶದ ಜನರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ದೇವಪ್ರಯಾಗದ ಶಾಸಕ ವಿನೋದ್ ಕಂದಾರಿ ಸಹ ಹುಲಿಯನ್ನು ಸೆರೆ ಹಿಡಿಯುವುದು ಅಥವಾ ಕೊಲ್ಲುವ ಮೂಲಕ ಜನರನ್ನು ಹುಲಿಭೀತಿಯಿಂದ ಮುಕ್ತಗೊಳಿಸಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದರು.

    ಜನರು ಮತ್ತು ಶಾಸಕರ ದೂರಿನ ಬಳಿಕ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಇದಕ್ಕೆಂದು ತಂಡವನ್ನು ರಚಿಸಿ ಅರಣ್ಯದಲ್ಲಿ ಹುಲಿ ಇರುವ ಸ್ಥಳ ಪತ್ತೆಹಚ್ಚಲು ಮುಂದಾದರು. ಇದು ಫಲ ನೀಡದಿದ್ದಾಗ ಡ್ರೋನ್ ಮೂಲಕ ಹುಲಿ ಇರುವ ಜಾಗವನ್ನು ಗುರುತಿಸಿದರು.

    ಬಳಿಕ ಹುಲಿ ಬೇಟೆಗೆ ಕಾರ್ಯಾಚರಣೆ ನಡೆಸಲಾಯಿತು. ಸುಮಾರು 10-15 ಸಿಬ್ಬಂದಿ ಕಾಡಿನಲ್ಲಿ ಹುಲಿ ಕೊಲ್ಲುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಹುಲಿ ಕಾಣಿಸಿದ ಕೂಡಲೇ ಬಂದೂಕುಗಳನ್ನು ಹೊತ್ತು ಅದರತ್ತ ನುಗ್ಗಿದರು. ಅರಣ್ಯ ಸಿಬ್ಬಂದಿ ಹುಲಿಯತ್ತ ಓಡುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಅರಣ್ಯಾಧಿಕಾರಿಗಳು ಗುಂಡು ಹಾರಿಸಿದ ನಂತರ ಹುಲಿ ಕುಸಿದು ಬಿದ್ದಿರುವುದು ಸಹ ವೀಡಿಯೊದಲ್ಲಿ ಕಾಣಬಹುದಾಗಿದೆ.

    ಹುಲಿಯನ್ನು ಕೊಂದಿದ್ದರಿಂದ ಈ ಭಾಗದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ದೇವಪ್ರಯಾಗ ಶಾಸಕ ವಿನೋದ್ ಕಂದಾರಿ ಹುಲಿ ಕೊಲ್ಲುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ. ಇನ್ನು ಹುಲಿಯನ್ನು ಕೊಲ್ಲುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಅರಣ್ಯ ಸಿಬ್ಬಂದಿಗೆ ಅವರು ತಲಾ 11,000 ರೂ. ಬಹುಮಾನ ಘೋಷಿಸಿದ್ದಾರೆ.

    ಕಿಕ್ಕೇರಿಸಿಕೊಂಡಿದ್ದ ಪಾಕ್​ ಪ್ರಯಾಣಿಕ ವಿಮಾನದಲ್ಲಿ ಕಿರಿಕ್​..ಕೈಕೋಳ ಹಾಕಿ ನಿಯಂತ್ರಿಸಿದ ಎಮಿರೇಟ್ಸ್ ಸಿಬ್ಬಂದಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts