More

    ರೀಲ್ಸ್​ ಮಾಡ್ತೀರಾ.. ಎಚ್ಚರ: ‘ಜಮಾಲ್ ಕುಡು’ಗೆ ಮದ್ಯ ಬಾಟಲಿ ಹೊತ್ತು ನೃತ್ಯ ಮಾಡಿದವನಿಗೆ ಬಿತ್ತು ಬೇಡಿ..!

    ಗಾಂಧಿನಗರ(ಗುಜರಾತ್): ‘ಜಮಾಲ್ ಕುಡು’ ಹಾಡಿಗೆ ಮದ್ಯದ ಬಾಟಲಿಯನ್ನು ತಲೆ ಮೇಲೆಹೊತ್ತು ಡ್ಯಾನ್ಸ್ ಮಾಡಿದ ವಿಡಿಯೋ ವೈರಲ್ ಆದ ನಂತರ ವಡೋದರಾದಲ್ಲಿ ಕುಖ್ಯಾತ ಕಾಳಧನಕೋರನನ್ನು ಪೊಲೀಸರು ಬಂಧಿಸಿದ್ದಾರೆ.

    ಇದನ್ನೂ ಓದಿ: India Vs England: 4ನೇ ಟೆಸ್ಟ್​ನಲ್ಲಿ ಭಾರತ ಗೆಲುವು.. ಸೀರೀಸ್​ ಕೈವಶ

    ವಿಶಾಲ್ ಕಹಾರ್ ಬಂಧಿತನಾಗಿದ್ದು, ಈತ ಮದ್ಯದ ಬಾಟಲ್​ ಮತ್ತು ಗ್ಲಾಸನ್ನಿಡಿದು ನೃತ್ಯ ಮಾಡಿದ್ದ. ಇದರ ವಿಡೀಯೋ(ರೀಲ್ಸ್​) ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಅರಿತ ಪೊಲೀಸರು ನಂತರ ಬಂಧಿಸಿದ್ದಾರೆ.

    ಮದುವೆ ಸಮಾರಂಭದಲ್ಲಿ ಹಾಡು: ವಡೋದರದ ಕಿಶನ್ವಾಡಿ ಪ್ರದೇಶದಲ್ಲಿ ಭಾನುವಾರ ರಾತ್ರಿ ಚಿತ್ರೀಕರಿಸಲಾದ ವೀಡಿಯೊವು ಕಹರ್ ಮತ್ತು ಅವನ ಸ್ನೇಹಿತರು ಜನಪ್ರಿಯ ಹಾಡಿಗೆ “ಜಮಾಲ್ ಕುಡು” ಗೆ ನೃತ್ಯ ಮಾಡಿರುವುದನ್ನು ತೋರಿಸುತ್ತದೆ. ಕಾನೂನನ್ನು ನಿರ್ಲಕ್ಷಿಸುವ ಲಜ್ಜೆಗೆಟ್ಟ ಪ್ರದರ್ಶನ ಇದಾಗಿದ್ದು, ಕಹಾರ್ ಮದ್ಯದ ಬಾಟಲಿಯನ್ನು ಹಿಡಿದು ನೃತ್ಯವನ್ನು ಮುಂದುವರಿಸುತ್ತಾನೆ. ತಲೆಯ ಮೇಲಿನ ಬಾಟಲಿಯನ್ನು ತೆಗೆದುಕೊಂಡು ಹೋಗಲು ಅಲ್ಲಿದ್ದವರು ಪ್ರಯತ್ನಿಸಿದರೂ, ಅವನು ಅದಕ್ಕೆ ಗ್ಲಾಸ್​ಗೆ ಮದ್ಯ ಸುರಿದು ವಿಕೃತಿ ಮೆರೆಯುತ್ತಾನೆ. ಜತೆಗೆ ಹಾಡಿನ ಸಂಗೀತಕ್ಕೆ ತಕ್ಕಂತೆ ನೃತ್ಯ ಮಾಡಲು ಪ್ರಯತ್ನಿಸುತ್ತಾನೆ. ವಿಡಿಯೋ ವೈರಲ್ ಆದ ನಂತರ ಪೊಲೀಸರು ಕಹರ್ ನನ್ನು ಬಂಧಿಸಿದ್ದಾರೆ

    ವಾರಸಿಯಾ ಪೊಲೀಸ್ ಇನ್ಸ್‌ಪೆಕ್ಟರ್ ಎಸ್‌.ಎಂ.ವಾಸವ ಅವರು ಕಹಾರ್‌ನ ಬಂಧನವನ್ನು ದೃಢಪಡಿಸಿದ್ದಾರೆ. ಈತ ವಡೋದರಾದಲ್ಲಿ ಅಕ್ರಮ ಮದ್ಯ ಪೂರೈಕೆ ಮಾಡಿರವ ಕುಖ್ಯಾತಿಗೆ ಒಳಗಾಗಿರುವ ಅಪರಾಧಿ ಎಂದು ಹೇಳಿದ್ದಾರೆ.
    ಪ್ರತಿಭಟನೆ: ಕಹಾರ್ ನ ಬಂಧನ ವಿರೋಧಿಸಿ ವಡೋದರಾ ಪೊಲೀಸ್ ಠಾಣೆಯ ಹೊರಗೆ ಅವನ ಬೆಂಬಲಿಗರು ಪ್ರತಿಭಟನೆ ನಡೆಸಿದ್ದು, ಅವರ ಮೇಲೆ ಸಾರ್ವಜಿಕರು ಕಲ್ಲು ತೂರಾಟ ನಡೆಸಿದ್ದಾರೆ.

    ಇದು ಮೊದಲಲ್ಲ:  ಕಹಾರ್ ಅಧಿಕಾರಿಗಳಿಗೆ ಸವಾಲು ಹಾಕಿರುವುದು ಇದೇ ಮೊದಲಲ್ಲ. ವರದಿಗಳ ಪ್ರಕಾರ, ಅವರು ಪೊಲೀಸರನ್ನು ನಿಂದಿಸುವ ವೀಡಿಯೊಗಳು ಈ ಹಿಂದೆ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ. ಈ ಬಾರಿ ಅವರ ವಿರುದ್ಧ ಪೊಲೀಸರು ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಈ ಘಟನೆಯು ವಡೋದರದ ನಾಗರಿಕರಲ್ಲಿ ಆಕ್ರೋಶ ಮತ್ತು ಕಳವಳವನ್ನು ಹುಟ್ಟುಹಾಕಿದೆ.

    ಚಂದ್ರಬಾಬು ಜಾಮೀನು ರದ್ದು ಅರ್ಜಿ.. ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts