More

    ಬಾಗಿಲು ತೆರೆದು ಮನೆಗೆ ಎಂಟ್ರಿ ಕೊಟ್ಟ ವ್ಯಾಘ್ರನಿಂದ ಕೇರಳ ನಿವಾಸಿ ಬಚಾವ್​ ಆಗಿದ್ದೇ ರೋಚಕ..!

    ತಿರುನೆಲ್ಲಿ (ಕೇರಳ): ಮಧ್ಯರಾತ್ರಿಯಲ್ಲಿ ಹುಲಿಯೊಂದು ಮನೆಗೆ ನುಗ್ಗಲು ಯತ್ನಿಸಿದಾಗ ಜನರು ಏನು ಮಾಡುಬಹುದು? ಸಾಮಾನ್ಯಾವಾಗಿ ಭಯದಿಂದ ಕಿರುಚಾಡುತ್ತಾರೆ. ಆದರೆ, ವಯನಾಡಿನ ತಿರುನೆಲ್ಲಿ ನಿವಾಸಿ ಸಲಿತಾ ಮತ್ತು ಆಕೆಯ ಸೋದರಳಿಯ ಮೃದನ್​ ಎದೆಗುಂದದೆ ಧೈರ್ಯವಾಗಿದ್ದುಕೊಂಡೆ ಭಾರಿ ಅಪಾಯದಿಂದ ಬಚಾವ್​ ಆಗಿದ್ದಾರೆ.

    ಈ ಆತಂಕಕಾರಿ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಸಲಿತಾ (42) ಮತ್ತು ತಂಗಿ ಮಗ ಮೃದನ್​ (22) ತಿರುನೆಲ್ಲಿಯ ಪೊಲೀಸ್​ ಠಾಣೆ ಸಮೀಪದ ಮನೆಯಲ್ಲಿ ವಾಸವಿದ್ದಾರೆ. ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಮನೆಯ ಹೊರಗಡೆ ವಿಚಿತ್ರ ಶಬ್ಧವೊಂದನ್ನು ಕೇಳಿದ್ದಾರೆ. ತಕ್ಷಣ ಹೊರಗಡೆ ನೋಡಿದ್ದಾರೆ. ಆದರೆ, ಏನೂ ಕಾಣದಿದ್ದಾಗ, ಮತ್ತೆ ಮರಳಿ ಬಂದು ಮಲಗಿದ್ದಾರೆ.

    ಇದನ್ನೂ ಓದಿರಿ: ಮುದ್ದು ಕಂದನ ಜೀವ ಉಳಿಸಲು ₹6 ಕೋಟಿ ಜಿಎಸ್​ಟಿ ಮನ್ನಾ ಮಾಡಿದ ಪ್ರಧಾನಿ ಮೋದಿ

    ಇದಾದ ಅರ್ಧ ಗಂಟೆಯ ಬಳಿಕ ಮತ್ತೊಮ್ಮೆ ಶಬ್ದದಿಂದ ಎಚ್ಚರಗೊಂಡಿದ್ದಾರೆ. ಅಲ್ಲದೆ ಮನೆಯ ಮುಂದಿನ ಬಾಗಿಲು ತೆರೆದಿರುವುದನ್ನು ನೋಡಿದ್ದಾನೆ. ತಕ್ಷಣ ಎದ್ದು ನೋಡಿದ ಮೃದನ್​ಗೆ ಮನೆಯನ್ನು ಪ್ರವೇಶಿಸಲು ಹುಲಿಯೊಂದು ಯತ್ನಿಸುತ್ತಿರುವುದನ್ನು ನೋಡಿದ್ದಾನೆ. ತಕ್ಷಣ ಮೃದನ್​ ತನ್ನ ಮೊಬೈಲ್​ ಅನ್ನು ಹುಲಿಯತ್ತ ಎಸೆದು ಮನೆಯ ಬಾಗಿಲನ್ನು ಮುಚ್ಚಿದ್ದಾನೆ. ಈ ವೇಳೆ ಮಲಗಿದ್ದ ಸಲಿತಾ ಶಬ್ದ ಕೇಳಿ ಓಡಿಬರುತ್ತಾರೆ. ಇಬ್ಬರು ಸೇರಿಕೊಂಡು ಬಾಗಿಲನ್ನು ಮುಚ್ಚುತ್ತಾರೆ.

    ಇತ್ತ ಹುಲಿ ತುಂಬಾ ಘರ್ಜಿಸುತ್ತಾ ಬಾಗಿಲನ್ನು ತಳ್ಳಲು ಪ್ರಯತ್ನಿಸುತ್ತದೆ. ಅನೇಕ ಸಮಯದವರೆಗೆ ತನ್ನ ಪ್ರಯತ್ನ ಮುಂದುವರಿಸಿ, ಕೊನೆಗೆ ಸಾಧ್ಯವಾಗಿದ್ದಿದ್ದಾಗ ಹುಲಿರಾಯ ಸ್ಥಳದಿಂದ ಕಾಲ್ಕಿಳುತ್ತದೆ. ತಮ್ಮ ಸಮಯಪ್ರಜ್ಞೆಯಿಂದ ಸಲಿತಾ ಮತ್ತು ಮೃದನ್​ ಕಠಿಣ ಪರಿಸ್ಥಿತಿಯನ್ನು ಉಪಾಯವಾಗಿ ಎದುರಿಸುತ್ತಾರೆ. ಈ ಮೂಲಕ ಸಂಭವನೀಯ ಹುಲಿ ದಾಳಿಯಿಂದ ಇಬ್ಬರು ಬಚಾವ್​ ಆಗುತ್ತಾರೆ.

    ಇನ್ನು ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಇಬ್ಬರು ಈ ಕ್ಷಣವನ್ನು ನಾವೆಂದಿಗೂ ಮರೆಯುವುದಿಲ್ಲ ಎನ್ನತ್ತಾರೆ. ಮನೆಯ ಮುಂದಿನ ದ್ವಾರ ಪ್ಲೇವುಡ್​ನಿಂದ ಮಾಡಿದ್ದು. ಲಾಕ್​ ಕೂಡ ಸಡಿಲವಾಗಿತ್ತು. ಯಾವುದೇ ಪ್ರಾಣಿಗಳು ತೆರೆಯುವಷ್ಟು ಸಡಿಲಗೊಂಡಿತ್ತು. ಮುಂದಿನ ದ್ವಾರ ಸಂಪೂರ್ಣ ಹಾನಿಯಾಗಿದೆ. ಹೊರಗೆ ನಾಯಿ ಕೂಡ ಕಟ್ಟಿ ಹಾಕಿದ್ದೆವು. ಹುಲಿ ಮನೆಯ ಆವರಣವನ್ನು ಪ್ರವೇಶಿಸಿದಾಗ ನಾಯಿಯು ಸಹ ಬೊಗಳಿದೆ ಎಂದು ಸಲಿತಾ ತಿಳಿಸಿದ್ದಾರೆ.

    ಇದನ್ನೂ ಓದಿರಿ: ಕಾಲೇಜು ವಿದ್ಯಾರ್ಥಿನಿ ಮೇಲೆರಗಿದ ಕಾಮುಕರು: ಅತ್ಯಾಚಾರ ಎಸಗಿ ಬೆತ್ತಲೆ ಬಿಟ್ಟು ಪರಾರಿ..!

    ಹುಲಿ ಸ್ಥಳದಿಂದ ಕದಲಿದ ಸ್ವಲ್ಪ ಹೊತ್ತಿನ ಬಳಿಕ ನಾವು ವಾರ್ಡ್​ ಸದಸ್ಯ ಪಿ.ಎಸ್​. ಹರೀಂದ್ರನ್​ ಮತ್ತು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದೆವು. ರಾತ್ರಿಯೇ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದರು ಎಂದು ಸಲಿತಾ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ರಾತ್ರಿಯೆಲ್ಲಾ ಗಸ್ತು ತಿರುಗಲಾಗುವುದು ಎಂದು ತಿರುನೆಲ್ಲಿ ಡೆಪ್ಯೂಟಿ ರೇಂಜ್​ ಆಫೀಸರ್​ ಎಂ.ವಿ. ಜಯಪ್ರಸಾದ್​ ಹೇಳಿದ್ದಾರೆ. (ಏಜೆನ್ಸೀಸ್​)

    ಅಭಿಷೇಕ್ ಅಂಬರೀಶ್​ಗೆ ರಚಿತಾ ರಾಮ್​ ನಾಯಕಿ

    ಪ್ರೇಮಿಗಳ ದಿನ ಹುಡುಗಿಯರ ಕಾಟ ತಾಳಲಾರೆ ಪ್ಲೀಸ್​ 5 ದಿನ ರಜೆ ಕೊಡಿ ಸರ್..!​

    ಜೀವಕ್ಕೆ ಅಪಾಯವಿದ್ರೆ ಸಾಕ್ಷಿ ಗುರುತೇ ಬದಲು!; ಪೊಲೀಸ್, ಪ್ರಾಧಿಕಾರಗಳಿಗೆ ಅನುಮತಿ ನೀಡಿದ ಕೇಂದ್ರ ಗೃಹ ಇಲಾಖೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts