More

    ಟೈಗರ್ ಜತೆ ದಿಶಾ ; ತೆರೆಯ ಮೇಲೆ ಮತ್ತೆ ಒಂದಾದ ಮಾಜಿ ಪ್ರೇಮಿಗಳು

    ಬಾಲಿವುಡ್ ನಟ ಟೈಗರ್ ಶ್ರಾಫ್​ ಮತ್ತು ದಿಶಾ ಪಟಾನಿ ಮತ್ತೆ ಒಂದಾಗಿದ್ದಾರೆ. ಹಾಗಂತ ಬ್ರೇಕಪ್ ಮಾಡಿಕೊಂಡು ದೂರವಾಗಿದ್ದ ಮಾಜಿ ಪ್ರೇಮಿಗಳು ಮತ್ತೆ ಒಂದಾಗಿದ್ದಾರೆ ಅಂತಲ್ಲ. ಬದಲಾಗಿ ತೆರೆಯ ಮೇಲೆ ಒಂದಾಗಲಿದ್ದಾರೆ. ‘ಬಾಘಿ 2’ ಚಿತ್ರದಲ್ಲಿ ಟೈಗರ್ ಮತ್ತು ದಿಶಾ ಒಟ್ಟಿಗೆ ನಟಿಸಿದ್ದರು. ಆದರೆ, ಈ ಜೋಡಿ ಸಿನಿಮಾಗಿಂತ ಹೆಚ್ಚು ಸದ್ದು ಮಾಡಿದ್ದು, ತಮ್ಮ ಲವ್‌ಸ್ಟೋರಿಯಿಂದ.

    ಇದನ್ನೂ ಓದಿ : ‘ಬಾಹುಬಲಿ 2’ ಕಥೆಯೊಳಗೆ ನಟ ನಿತಿನ್​?; ‘ಎಕ್ಸ್ಟ್ರಾ ಆರ್ಡಿನರಿ ಮ್ಯಾನ್’ ಟೀಸರ್​ನಲ್ಲಿ ಮಿಂಚಿದ ಶ್ರೀಲೀಲಾ

    ಟೈಗರ್ ಜತೆ ದಿಶಾ ; ತೆರೆಯ ಮೇಲೆ ಮತ್ತೆ ಒಂದಾದ ಮಾಜಿ ಪ್ರೇಮಿಗಳು

    ಕೆಲ ವರ್ಷಗಳ ಕಾಲ ಪ್ರೀತಿಯಲ್ಲಿದ್ದ ಟೈಗರ್ ಮತ್ತು ದಿಶಾ, ಕಳೆದ ವರ್ಷ ದೂರವಾಗಿದ್ದರು. ಆದರೆ, ಆ ಬಗ್ಗೆ ಈ ಜೋಡಿ ಎಲ್ಲೂ ತುಟಿ ಪಿಟಕ್ ಅಂದಿರಲಿಲ್ಲ. ಇದೀಗ ‘ಮಿಷನ್ ಮಂಗಳ್’ ಖ್ಯಾತಿಯ ನಿರ್ದೇಶಕ ಜಗನ್ ಶಕ್ತಿ, ಆ್ಯಕ್ಷನ್-ಕಟ್ ಹೇಳುತ್ತಿರುವ ‘ಹೀರೋ ನಂಬರ್ 1’ ಸಿನಿಮಾದಲ್ಲಿ ಮತ್ತೆ ಒಂದಾಗಲಿದ್ದಾರೆ. ಈ ಚಿತ್ರದಲ್ಲಿ ಟೈಗರ್‌ಗೆ ಇಬ್ಬರು ನಾಯಕಿಯರಿದ್ದು, ಸಾರಾ ಅಲಿ ಖಾನ್ ಒಂದು ಪಾತ್ರಕ್ಕೆ ಆಯ್ಕೆಯಾಗಿದ್ದರು. ಆದರೆ, ಡೇಟ್ಸ್ ಹೊಂದಾಣಿಕೆಯಾಗದ ಕಾರಣ ಅವರು ಚಿತ್ರದಿಂದ ಹೊರನಡೆದಿದ್ದು, ಅವರ ಜಾಗಕ್ಕೆ ದಿಶಾ ಬಂದಿದ್ದಾರೆ. ಮತ್ತೊಬ್ಬ ನಾಯಕಿಯಾಗಿ ಪಶ್ಮೀನಾ ರೋಷನ್ ಕಾಣಿಸಿಕೊಳ್ಳಲಿದ್ದಾರೆ.

    ಇದನ್ನೂ ಓದಿ : BBKS10: ಕಡೆಗೂ ಬಿಗ್‌ಬಾಸ್ ಮನೆಗೆ ಹಿಂತಿರುಗಿದ ವರ್ತೂರ್ ಸಂತೋಷ್‌!

    ಟೈಗರ್ ಜತೆ ದಿಶಾ ; ತೆರೆಯ ಮೇಲೆ ಮತ್ತೆ ಒಂದಾದ ಮಾಜಿ ಪ್ರೇಮಿಗಳು

    ಗೋವಿಂದ ನಾಯಕನಾಗಿದ್ದ 1997ರ ಚಿತ್ರ ‘ಹೀರೋ ನಂಬರ್ 1’ಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎನ್ನಲಾಗಿದೆ. 20204ರ ಜನವರಿಯಲ್ಲಿ ಈ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದೆ.
    -ಏಜೆನ್ಸೀಸ್

    ಟೈಗರ್ ಜತೆ ದಿಶಾ ; ತೆರೆಯ ಮೇಲೆ ಮತ್ತೆ ಒಂದಾದ ಮಾಜಿ ಪ್ರೇಮಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts