More

    ಕೆರೆಬೇಟೆಗೆ ರೆಡಿಯಾದ ಗೌರಿಶಂಕರ್ ; ತೆರೆಯ ಮೇಲೆ ಬರಲಿದೆ ಮತ್ತೊಂದು ಮಲೆನಾಡಿನ ಕಥೆ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು

    ಮಲೆನಾಡಿನಲ್ಲಿ ಬೇಸಗೆ ಸಮಯದಲ್ಲಿ ಕೆರೆಯ ನೀರು ಕಡಿಮೆಯಾದಾಗ, ಸಾವಿರಾರು ಜನ ಕೂಣಿ ಮತ್ತು ಜರಡಿ ಬಲೆಗಳನ್ನು ಹಿಡಿದು ಮೀನುಗಳ ಬೇಟೆಯಾಡಲು ಕೆರೆಗೆ ಇಳಿಯುತ್ತಾರೆ. ಈ ಸಂಪ್ರದಾಯವನ್ನು ‘ಕೆರೆಬೇಟೆ’ ಎನ್ನುತ್ತಾರೆ. ಇದೀಗ ಇದೇ ಶೀರ್ಷಿಕೆಯೊಂದಿಗೆ ‘ಜೋಕಾಲಿ’, ‘ರಾಜಹಂಸ’ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದ ಗೌರಿಶಂಕರ್, ಸಿನಿಮಾ ಮಾಡಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸುವಂತಿದೆ.

    ಇದನ್ನೂ ಓದಿ : BBKS10: ಕಡೆಗೂ ಬಿಗ್‌ಬಾಸ್ ಮನೆಗೆ ಹಿಂತಿರುಗಿದ ವರ್ತೂರ್ ಸಂತೋಷ್‌!

    ಕೆರೆಬೇಟೆಗೆ ರೆಡಿಯಾದ ಗೌರಿಶಂಕರ್ ; ತೆರೆಯ ಮೇಲೆ ಬರಲಿದೆ ಮತ್ತೊಂದು ಮಲೆನಾಡಿನ ಕಥೆ

    ಪವನ್ ಒಡೆಯರ್, ಎ.ಆರ್. ಬಾಬು ಗರಡಿಯಲ್ಲಿ ಪಳಗಿರುವ ರಾಜಗುರು ಬಿ., ‘ಕೆರೆಬೇಟೆ’ಯ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ವಿಶೇಷ ಅಂದರೆ ಈ ಚಿತ್ರದಕ್ಕೆ ನಾಯಕ ಗೌರಿಶಂಕರ್ ಅವರೇ ಸಂಭಾಷಣೆ ಬರೆದಿದ್ದಾರೆ. ಕೆಲವು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿರುವ ಬಿಂದು ಶಿವರಾಮ್ ಈ ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್‌ವುಡ್ ಡೆಬ್ಯೂ ಮಾಡುತ್ತಿದ್ದಾರೆ. ಜತೆಗೆ ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್, ವರ್ಧನ್ ತೀರ್ಥಹಳ್ಳಿ, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು ಪ್ರಮುಖ ತಾರಾಗಣದಲ್ಲಿದ್ದಾರೆ.

    ಇದನ್ನೂ ಓದಿ : ಇನ್ನುಮುಂದೆ ಯಾವ ವಿಷಯವಾಗಿಯೂ ಮಾತನಾಡದಂತೆ ದಿಗ್ಬಂಧ: ನಟ ಜಗ್ಗೇಶ್ ಹೀಗಂದಿದ್ಯಾಕೆ?

    ಕೆರೆಬೇಟೆಗೆ ರೆಡಿಯಾದ ಗೌರಿಶಂಕರ್ ; ತೆರೆಯ ಮೇಲೆ ಬರಲಿದೆ ಮತ್ತೊಂದು ಮಲೆನಾಡಿನ ಕಥೆ

    ಶಿವಮೊಗ್ಗ ಜಿಲ್ಲೆಯ ಸಿಗಂದೂರು, ಸೊರಬ ಸುತ್ತಮುತ್ತ 65 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದ್ದು, ನವೆಂಬರ್‌ನಲ್ಲಿ ಕೊನೆಯ ಹಂತದ ಶೂಟಿಂಗ್‌ಗೆ ಚಿತ್ರತಂಡ ಯೋಜನೆ ರೂಪಿಸಿದೆ. ‘ಕೆರೆಬೇಟೆ’ಗೆ ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣವಿರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts