More

    ಬಂಡೀಪುರದಲ್ಲಿ ಜೂನ್​ 8ರಿಂದ ಸಫಾರಿ ಆರಂಭ; ಪ್ರವಾಸಿಗರು ಷರತ್ತುಗಳನ್ನು ಪಾಲಿಸುವುದು ಕಡ್ಡಾಯ

    ಚಾಮರಾಜನಗರ: ಲಾಕ್​ಡೌನ್​ ನಿರ್ಬಂಧ ಸಡಿಲಿಕೆಯಾಗಿದ್ದು ರಾಜ್ಯದಲ್ಲಿ ಒಂದೊಂದೇ ಚಟುವಟಿಕೆಗಳು ನಿಧಾನವಾಗಿ ಶುರುವಾಗುತ್ತಿವೆ. ಜೂ.8ರಿಂದ ಹಲವು ಆರ್ಥಿಕ ಚಟುವಟಿಕೆಗಳು ಶುರುವಾಗಲಿದ್ದು, ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಕೂಡ ಆರಂಭವಾಗಲಿದೆ.

    ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಬಂಡೀಪುರದಲ್ಲಿ ಕೊವಿಡ್​-19 ಹಿನ್ನೆಲೆಯಲ್ಲಿ ಕಳೆದ 85ದಿನಗಳಿಂದಲೂ ಸಫಾರಿ ಬಂದ್​ ಆಗಿತ್ತು. ಜೂ.8ರಿಂದ ಮತ್ತೆ ಪ್ರಾರಂಭವಾಗಲಿದ್ದು, ಈ ಬಗ್ಗೆ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹಾಗೂ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದನ್ನೂ ಓದಿ: ಡಬಲ್ ಗೇಮ್​ ಮುಂದುವರಿಸಿದೆ ಪಾಕ್​; ಭಾರತದ ಭದ್ರತಾ ಸಂಸ್ಥೆಗಳ ಕಾರ್ಯಾಚರಣೆಯಲ್ಲಿ ಬಯಲಾಯ್ತು ಸತ್ಯ

    ಸಫಾರಿಗೆ ಬರುವ ಪ್ರವಾಸಿಗರು ಕಡ್ಡಾಯವಾಗಿ ಮಾಸ್ಕ್​ ಧರಿಸಬೇಕು. ಸಫಾರಿ ವಾಹನ ಹತ್ತುವ ಮೊದಲು ಅವರಿಗೆಲ್ಲ ಸ್ಯಾನಿಟೈಸರ್​ ನೀಡಲಾಗುತತದೆ. ಇನ್ನು ವಾಹನದ ಚಾಲಕರು, ಸಿಬ್ಬಂದಿಗೂ ಮಾಸ್ಕ್ ಕಡ್ಡಾಯ. ಸಫಾರಿ ವಾಹನದ ಶೇ.50ರಷ್ಟು ಸೀಟ್​ಗಳು ಮಾತ್ರ ತುಂಬಿರಬೇಕು. ಪ್ರತಿ ಟ್ರಿಪ್​ ನಂತರವೂ ವೆಹಿಕಲ್​​ನ್ನು ಸ್ಯಾನಿಟೈಸ್​ ಮಾಡಲಾಗುತ್ತದೆ. ಒಟ್ಟಾರೆ ಎಲ್ಲರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಸಫಾರಿ ಆರಂಭ ಮಾಡಲಾಗುತ್ತದೆ ಎಂದು ಗುಂಡ್ಲುಪೇಟೆ ಶಾಸಕ ನಿರಂಜನ್​ ಕುಮಾರ್ ಮಾಹಿತಿ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ರಾಜ್ಯಸಭಾ ಅಖಾಡ ನಾಲ್ಕನೇ ಕುತೂಹಲ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts