More

    ಡಬಲ್ ಗೇಮ್​ ಮುಂದುವರಿಸಿದೆ ಪಾಕ್​; ಭಾರತದ ಭದ್ರತಾ ಸಂಸ್ಥೆಗಳ ಕಾರ್ಯಾಚರಣೆಯಲ್ಲಿ ಬಯಲಾಯ್ತು ಸತ್ಯ

    ನವದೆಹಲಿ: 2014ರಲ್ಲಿ ಪಾಕಿಸ್ತಾನದ ಪೇಷಾವರದ ಸೇನಾ ಶಾಲೆಯ ಮೇಲೆ ನಡೆದ ಉಗ್ರದಾಳಿಯ ಪ್ರಮುಖ ಆರೋಪಿ, ತೆಹ್ರಿಕ್‌ ಎ ತಾಲಿಬಾನ್‌ ಸಂಘಟನೆ​ ನಾಯಕ ಪಾಕಿಸ್ತಾನದಲ್ಲೇ ಅಡಗಿದ್ದಾನೆ ಎಂಬ ಮಾಹಿತಿ ನಂಬಲರ್ಹ ಮೂಲಗಳಿಂದ ಸಿಕ್ಕಿದೆ.

    ಪಾಕಿಸ್ತಾನದ ತಾಲಿಬಾನ್​ ಉಗ್ರಸಂಘಟನೆಯ ನಾಯಕ ಎಹ್ಸನುಲ್ಲಾ ಎಹ್ಸಾನ್ ಅಂದಿನ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದವನು. ಇದೀಗ ಇಸ್ಲಮಾಬಾದ್​ನಲ್ಲಿಯೇ ಪತ್ತೆಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

    ಭಾರತದ ಭದ್ರತಾ ಸಂಸ್ಥೆಗಳು ಆತನ ಟ್ವಿಟರ್​ ಖಾತೆಯ ಮೇಲೆ ವಿಧಿವಿಜ್ಞಾನ ತನಿಖೆ ನಡೆಸಿದ್ದು, ಆ ವಿಶ್ಲೇಷಣೆಯಲ್ಲಿ ಎಹ್ಸನುಲ್ಲಾ ಎಹ್ಸಾನ್ ಇಸ್ಲಾಮಾಬಾದ್​ನಲ್ಲೇ ಇದ್ದಾನೆ ಎಂಬುದು ಗೊತ್ತಾಗಿದೆ. ಆದರೆ ಪಾಕಿಸ್ತಾನ ಆತ ಟರ್ಕಿಯಲ್ಲಿ ಅಡಗಿದ್ದಾನೆ ಎಂದು ಹೇಳಿತ್ತು.

    ಇದನ್ನೂ ಓದಿ: ಅರ್ಜುನ ಪ್ರಶಸ್ತಿ ರೇಸ್‌ನಲ್ಲಿ ರಾಜ್ಯದ ಮೂವರು ಮಹಿಳೆಯರು

    ತೆಹ್ರಿಕ್‌ ಎ ತಾಲಿಬಾನ್‌ ಉಗ್ರ ಸಂಘಟನೆಯ ಮಾಜಿ ವಕ್ತಾರನಾಗಿರುವ ಎಹ್ಸನುಲ್ಲಾ ಎಹ್ಸಾನ್​, ಪೇಷಾವರ ದಾಳಿಯ ನಂತರ ನಿಗೂಢವಾಗಿ ಟರ್ಕಿಗೆ ಪರಾರಿಯಾಗಿದ್ದಾನೆ ಎಂದು ಹೇಳಲಾಗಿತ್ತು. ಆದರೆ ಇದೀಗ ಆತ ಪಾಕಿಸ್ತಾನದಲ್ಲೇ ಇದ್ದಾನೆ ಎಂಬುದಕ್ಕೆ ಹಲವು ಸಾಕ್ಷಿಗಳು ಸಿಕ್ಕಿವೆ. ತಾವು ಉಗ್ರರ ವಿರುದ್ಧ ಹೋರಾಡುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಪಾಕಿಸ್ತಾನದ ವಿಚಾರದಲ್ಲಿ ಮತ್ತೊಮ್ಮೆ ಅನುಮಾನ ಹುಟ್ಟಿಸುವಂತಿದೆ ಈ ಎಹ್ಸನುಲ್ಲಾ ಎಹ್ಸಾನ್​ ಪ್ರಕರಣ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿವೆ.

    ಪಾಕ್​ ಐಎಸ್​ಐ ಎಹ್ಸನುಲ್ಲಾಗೆ ಎಲ್ಲ ರೀತಿಯ ವ್ಯವಸ್ಥೆಯನ್ನೂ ಮಾಡಿಕೊಟ್ಟಿದೆ. ಆಫ್ಘಾನ್​ ನಾಯಕರ ವಿರುದ್ಧ ದಾಳಿಯ ಕಾರ್ಯಾಚರಣೆ ಸಂಚು ರೂಪಿಸಲಾಗುತ್ತಿದೆ ಎಂದು ತನಿಖೆ ನಡೆಸಿದ ಭಾರತೀಯ ಭದ್ರತಾ ಸಂಸ್ಥೆಗಳು ಮಾಹಿತಿ ನೀಡಿವೆ.

    ಇದನ್ನೂ ಓದಿ: ಆನೆ ತಿಂದಿದ್ದು ಪೈನಾಪಲ್​ನಲ್ಲಿ ತುಂಬಿದ್ದ ಸ್ಪೋಟಕವಲ್ಲ: ಓರ್ವ ಆರೋಪಿಯ ಬಂಧನ ಬಳಿಕ ಪ್ರಕರಣಕ್ಕೆ ತಿರುವು!​

    2014ರ ಡಿಸೆಂಬರ್​ 16ರಂದು ಪಾಕಿಸ್ತಾನದ ತೆಹ್ರಿಕ್‌ ಎ ತಾಲಿಬಾನ್‌ನ 6 ಉಗ್ರರು ಪೇಷಾವರದ ಸೇನಾ ಶಾಲೆಯ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಒಟ್ಟು 149 ಮಂದಿ ಇದರಲ್ಲಿ ಮೃತಪಟ್ಟಿದ್ದರು. ಅದರಲ್ಲೂ 132 ಮಕ್ಕಳೇ ಆಗಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟಂತೆ 2015ರಲ್ಲಿ ನಾಲ್ವರು ಉಗ್ರರನ್ನು ಗಲ್ಲಿಗೇರಿಸಲಾಗಿತ್ತು. ​
    ಈ ಪ್ರಮುಖ ಆರೋಪಿ ಎಹ್ಸನುಲ್ಲಾ ಎಹ್ಸಾನ್ ಪಾಕಿಸ್ತಾನದ ರಕ್ಷಣಾ ಅಧಿಕಾರಿಗಳ ಕಸ್ಟಡಿಯಲ್ಲಿ ಇದ್ದ. ಆದರೆ 2020ರ ಜನವರಿ 11ರಂದು ಆತ ಟರ್ಕಿಗೆ ಪರಾರಿಯಾಗಿದ್ದಾನೆ ಎಂಬುದಾಗಿ ಪಾಕ್​ ತಿಳಿಸಿತ್ತು. ಅಷ್ಟೇ ಅಲ್ಲ, ಆತ ತನ್ನ ಪತ್ನನಿ, ಮಗ ಮತ್ತು ಮಗಳೊಂದಿಗೆ ಟರ್ಕಿಯಲ್ಲಿ ಇದ್ದಾನೆ ಎಂದೂ ಹೇಳಿತ್ತು. ಅಷ್ಟು ಬಿಗಿ ಭದ್ರತೆಯ ನಡುವೆ ಇದ್ದ ಓರ್ವ ಆರೋಪಿ ಹೇಗೆ ತಪ್ಪಿಸಿಕೊಂಡು ಹೋಗಲು ಸಾಧ್ಯ ಎಂದು ಶುಹಾದಾ ಎಪಿಎಸ್​ ಫೋರಮ್​ ಅಧ್ಯಕ್ಷ ಫಜಲ್​ ಖಾನ್​ ಅನುಮಾನ ವ್ಯಕ್ತಪಡಿಸಿದ್ದರು. (ಏಜೆನ್ಸೀಸ್​) ಇದನ್ನೂ ಓದಿ: VIDEO| ತರಕಾರಿಗಳ ಮೇಲೆ ಜೀಪ್​ ಹರಿಸಿ ಪೊಲೀಸರ ದರ್ಪ: ಜೀಪಿನ ವೇಗಕ್ಕೆ ಹೆದರಿ ಓಡಿದ ಬೀದಿಬದಿ ವ್ಯಾಪಾರಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts