More

    ಅನುಮತಿ ಕೊಡಿ ನಾವೇ ಹುಲಿಯನ್ನು ಕೊಂದು ಹಾಕ್ತೀವಿ ಎಂದ ಶಾಸಕರು

    ಬೆಂಗಳೂರು: ಕೊಡಗಿನಲ್ಲಿ ಹುಲಿ ಹಾವಳಿ ಹೆಚ್ಚಾಗಿದೆ. ನಾವೇ ಕೋವಿ ಹಿಡಿದು ಕಾಡಿಗೆ ಹೋಗ್ತೀವಿ. ಹುಲಿ ಕೊಲ್ಲಲು ಅವಕಾಶ ಕೊಡಿ ಎಂದ ಶಾಸಕರಾದ ಕೆ.ಜಿ ಬೋಪಯ್ಯ ಮತ್ತು ಅಪ್ಪಚ್ಚು ರಂಜನ್ ವಿಧಾನಸಭೆಯಲ್ಲಿ ಸರ್ಕಾರಕ್ಕೆ ಮನವಿ ಮಾಡಿದರು.

    ಶೂನ್ಯವೇಳೆ ಚರ್ಚೆ ಸಂದರ್ಭದಲ್ಲಿ ವಿಚಾರ ಪ್ರಸ್ತಾಪ ಮಾಡಿದ ಕೆ.ಜಿ ಬೋಪಯ್ಯ, ವಿರಾಜಪೇಟೆಯಲ್ಲಿ ಹುಲಿ ದಾಳಿಗೆ ನಾಲ್ವರು ಕಾರ್ಮಿಕರು ಬಲಿಯಾಗಿದ್ದಾರೆ. ಅದರ ಜತೆಗೆ ಹಸುಗಳು ಸತ್ತಿವೆ. ಹುಲಿ ಹಾವಳಿ ತಡೆಗೆ ಕ್ರಮ ಕೈಗೊಳ್ಳಿ. ಹುಲಿ ಹತ್ಯೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು, ಹುಲಿ ಕಾಟದಿಂದ ಕಾರ್ಮಿಕರು ತೋಟಕ್ಕೆ ಹೋಗಲು ಭಯ ಪಡ್ತಿದ್ದಾರೆ. ಅರಣ್ಯ ಇಲಾಖೆ ಕೈಯಲ್ಲಿ ಆಗದಿದ್ದರೆ ಹೇಳಲಿ ನಾವೇ ಪರಿಹಾರ ಕಂಡುಕೊಳ್ಳುತ್ತೇವೆ ಎಂದರು. ಇದನ್ನೂ ಓದಿರಿ ಭೂಮಿ- ಕಾವೇರಿ ತಂತ್ರಾಂಶ ಸರ್ವರ್​ ಡೌನ್​: ಜನರ ಪರದಾಟ, ಸರ್ಕಾರಕ್ಕೆ ಹಿಡಿಶಾಪ

    ಇದಕ್ಕೆ ಧ್ವನಿಗೂಡಿಸಿದ ಶಾಸಕ ಅಪ್ಪಚ್ಚು ರಂಜನ್, ಹುಲಿ ಹತ್ಯೆಗೆ ಕ್ರಮ ಕೈಗೊಳ್ಳಿ ಅಥವಾ ನಮಗೆ ಅವಕಾಶ ಕೊಡಿ. ನಾನೇ ಕೋವಿ ಹಿಡಿದು ಕಾಡಿಗೆ ಹೋಗ್ತೀನಿ ಎಂದು ಮನವಿ ಮಾಡಿದರು.

    ಇದಕ್ಕೆ ಉತ್ತರಿಸಿದ ಅರಣ್ಯ ಸಚಿವ ಅರವಿಂದ ಲಿಂಬಾವಳಿ, ಹುಲಿ ಸೆರೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಹುಲಿ ಕೊಲ್ಲಲು ಬೇರೆಯವರಿಗೆ ಅನುಮತಿ ಕೊಡಲು ಸಾಧ್ಯವಿಲ್ಲ ಎಂದರು.

    ತಾಯಿಯ ಅಕ್ರಮ ಸಂಬಂಧಕ್ಕೆ ಬೇಸತ್ತ ಬಾಲಕಿ ಆತ್ಮಹತ್ಯೆ?

    ಅಕ್ಕನ ಕಣ್ಣೆದುರಲ್ಲೇ ಭಾವನ ಕಿವಿ ಕಚ್ಚಿ ತುಂಡರಿಸಿದ ಬಾಮೈದುನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts