More

    ಹುಲಿ ದತ್ತು ಪಡೆದ ಅರಣ್ಯಾಧಿಕಾರಿ

    ಬೆಳಗಾವಿ: ತಾಲೂಕಿನ ಕಾಕತಿ ಹೊರವಲಯದ ಭೂತರಾಮನಹಟ್ಟಿ ಮೃಗಾಲಯಕ್ಕೆ ಬೆಳಗಾವಿ ಜನರ ಆಶಯದಂತೆ ಹುಲಿ-ಸಿಂಹಗಳು ಬಂದಿವೆ. ಪ್ರಾಣಿ-ಪಕ್ಷಿ ಪ್ರಿಯರಿಗೆ ಹರ್ಷವೂ ಉಂಟಾಗಿದೆ. ಈ ಮಧ್ಯೆ ಪ್ರಪ್ರಥಮವಾಗಿ ಅರಣ್ಯಾಧಿಕಾರಿಯೇ ತಮ್ಮ ಮದುವೆ ವಾರ್ಷಿಕೋತ್ಸವ ಅಂಗವಾಗಿ ಹುಲಿ ‘ಶೌರ್ಯ’ನನ್ನು ದತ್ತು ಪಡೆದು ‘ಮೊದಲು ದತ್ತು ಪಡೆದ’ ದಾಖಲೆ ಮಾಡಿದ್ದಾರೆ.

    ಗೋಲಿಹಳ್ಳಿ ವಲಯ ಅರಣ್ಯಾಧಿಕಾರಿ ಶ್ರೀನಾಥ ಮನೋಹರ ಕಡೋಲಕರ ದಂಪತಿ ಎರಡು ಹುಲಿಗಳ ಪೈಕಿ ಶೌರ್ಯನ ಒಂದು ವರ್ಷದ ಆಹಾರವೆಚ್ಚ ಹೊತ್ತು ದತ್ತು ಪಡೆದಿದ್ದಾರೆ. ಕಡೋಲಕರ ದಂಪತಿ ತಮ್ಮ ಮಕ್ಕಳು ಶ್ರೇಯಸ್ ಮತ್ತು ಶೇಖರ್ ಅವರೊಂದಿಗೆ ಭಾನುವಾರ ಭೂತರಾಮನಹಟ್ಟಿ ಮೃಗಾಲಯಕ್ಕೆ ತೆರಳಿ ದತ್ತು ಪಡೆದರು.

    ಮೃಗಾಲಯ ಕಾರ್ಯ ನಿರ್ವಾಹಕ ನಿರ್ದೇಶಕ ಎಂ.ವಿ. ಅಮರನಾಥ ಹುಲಿಯನ್ನು ದತ್ತು ನೀಡಿದ್ದಕ್ಕೆ ಪ್ರಮಾಣಪತ್ರ ವಿತರಿಸಿದರು. ಎಸಿಎಫ್ ಎಂ.ಬಿ. ಕುಸನಾಳ, ಆರ್‌ಎಫ್‌ಒ ಮತ್ತು ಪ್ರಾಣಿ ಸಂಗ್ರಾಲಯದ ಕ್ಯುರೇಟರ್ ರಾಕೇಶ ಅರ್ಜುನವಾಡ ಉಪಸ್ಥಿತರಿದ್ದರು.

    ಪ್ರಾಣಿ ದತ್ತು ಪಡೆಯಲು ಮನವಿ: ಸಾರ್ವಜನಿಕರು, ವನ್ಯಪ್ರೇಮಿಗಳು, ಉದ್ಯಮಿಗಳು, ಆರ್ಥಿಕವಾಗಿ ಸದೃಢವಾಗಿರುವ ಯಾರೇ ಆದರೂ ಭೂತರಾಮನಹಟ್ಟಿ ಮೃಗಾಲಯದಿಂದ ಪ್ರಾಣಿಗಳನ್ನು ದತ್ತು ಪಡೆಯಲು ಮುಂದೆ ಬರಬೇಕು ಎಂದು ಪ್ರಾಣಿ ಸಂಗ್ರಾಲಯದ ನಿರ್ದೇಶಕ ಎಂ.ವಿ. ಅಮರನಾಥ ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts