More

    ಕೈಗಾರಿಕೆಗೆ ನೀರು ಸ್ಥಗಿತ ಭಯ, ಮತ್ತೆ ಕುಸಿದ ತುಂಬೆ- ಎಎಂಆರ್ ನೀರಿನ ಮಟ್ಟ, ಕುಡಿಯುವ ನೀರಿಗಾಗಿ ಕಂಟ್ರೋಲ್ ರೂಂ

    ಮಂಗಳೂರು: ದಿನದಿಂದ ದಿನಕ್ಕೆ ತುಂಬೆ ಹಾಗೂ ಎಎಂಆರ್ ಡ್ಯಾಂನ ನೀರಿನ ಮಟ್ಟ ಕುಸಿಯುತ್ತಿರುವ ಪರಿಣಾಮ ಈ ನೀರನ್ನೇ ನಂಬಿರುವ ಮಂಗಳೂರಿನ ಕೈಗಾರಿಕಾ ವಲಯದ ಕೈಗಾರಿಕೆಗಳಿಗೆ ನೀರು ಸ್ಥಗಿತ ಭಯ ಆವರಿಸಿದೆ.

    ತುಂಬೆ ಡ್ಯಾಂನಿಂದ ಕುಡಿಯುವ ಉದ್ದೇಶಕ್ಕೆ ಪ್ರತೀ ದಿನ 155-160 ಎಂ.ಎಲ್.ಡಿ. ನೀರು ನಗರಕ್ಕೆ ಪಂಪಿಂಗ್ ಮಾಡಲಾಗಿದೆ. ಎಎಂಆರ್ ಹಾಗೂ ತುಂಬೆಯಿಂದ ಮಂಗಳೂರಿಗೆ ಪೂರೈಕೆಯಾಗುವ ನೀರಿನಲ್ಲಿ ಪ್ರಸ್ತುತ ಒಟ್ಟು 18 ಎಂಜಿಡಿ ನೀರು ಕೈಗಾರಿಕೆಗಳಿಗೆ ರವಾನೆಯಾಗುತ್ತಿದೆ. ಆದರೆ ಕಳೆದ ಒಂದು ವಾರದಿಂದ ಈ ಎರಡೂ ಡ್ಯಾಂ ನೀರಿನ ಮಟ್ಟ ಕುಸಿಯುತ್ತಿದೆ. ಕಳೆದ ಶುಕ್ರವಾರ ತುಂಬೆ ಡ್ಯಾಂ ನೀರಿನ ಮಟ್ಟದಲ್ಲಿ 0.04ಮೀ. ಕುಸಿತವಾಗಿ 5.69ಮಿ.ಗೆ ತಲುಪಿತ್ತು. ಸೋಮವಾರದ ವೇಳೆ ತುಂಬೆಯಲ್ಲಿ 0.13 ಮೀ. ಕುಸಿತ ಕಂಡು ಡ್ಯಾಂ ಮಟ್ಟ 5.56ಮೀ.ಗೆ ತಲುಪಿದೆ. ಎಎಂಆರ್‌ನಲ್ಲಿ 0.16ಮೀ ಇಳಿಕೆಯಾಗಿ 17.74ಮೀ ನೀರಿನ ಮಟ್ಟ ದಾಖಲಾಗಿದೆ. ಈ ಗಣನೀಯ ಪ್ರಮಾಣದ ಇಳಿಕೆ ಕೈಗಾರಿಕಾ ವಲಯದ ಉತ್ಪಾದನೆಯ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇದೆ.

    *ನೀರು ಸ್ಥಗಿತಗೊಳಿಸುವುದು ಅನಿವಾರ್ಯ

    ಮಂಗಳೂರಿಗೆ ಪೂರೈಕೆಯಾಗುವ ನೀರಿನಲ್ಲಿ ಪ್ರಸ್ತುತ ಒಟ್ಟು 18 ಎಂಜಿಡಿ ನೀರು ಕೈಗಾರಿಕೆಗಳಿಗೆ ರವಾನೆಯಾಗುತ್ತಿದೆ. ತುಂಬೆ ಡ್ಯಾಂನಿಂದ ಎಂಸಿಎಫ್‌ಗೆ 2 ಎಂಜಿಡಿ, ಎನ್ ಎಂಪಿಟಿಎ 0.5 ಎಂಜಿಡಿ, ಇತರ ಕೈಗಾರಿಕೆಗಳಿಗೆ 1 ಎಂಜಿಡಿ ನೀರು ಪೂರೈಕೆಯಾಗುತ್ತಿದೆ. ಎಎಂಆರ್‌ನಿಂದ ಎಂಆರ್‌ಪಿಎಲ್‌ಗೆ 6 ಎಂಜಿಡಿ ಹಾಗೂ ಎಸ್‌ಇಝಡ್‌ಗೆ 8 ಎಂಜಿಡಿ ನೀರು ಪೂರೈಕೆ ಮಾಡಲಾಗುತ್ತಿದೆ. ಕುಡಿಯುವ ನೀರಿಗೆ ಕೊರತೆಯಾದರೆ ಅನಿವಾರ್ಯವಾಗಿ ಎಎಂಆರ್ ನೀರನ್ನು ಕುಡಿಯುವ ನೀರಿನ ಬಳಕೆಗೆ ಬಳಸಿಕೊಳ್ಳಬೇಕಾಗುತ್ತದೆ. ಈಸಂದರ್ಭ ಕೈಗಾರಿಕೆಗಳು, ಕಾಮಗಾರಿಗಳಿಗೆ ನೀರು ಸ್ಥಗಿತಗೊಳಿಸುವುದು ಅನಿವಾರ್ಯ. ತುಂಬೆ, ಎಎಂಆರ್ ಡ್ಯಾಂಗಳಲ್ಲಿ ನೀರಿನ ಕುಸಿತವಾಗುತ್ತಿರುವುದರಿಂದ ಕೈಗಾರಿಕೆಗೆ ನೀರು ಸ್ಥಗಿತಗೊಳ್ಳುವ ಭಯ ಆವರಿಸಿದೆ.

    —————-

    ಕುಡಿಯುವ ನೀರಿಗಾಗಿ ಕಂಟ್ರೋಲ್ ರೂಂ

    ಮಂಗಳೂರು ಪಾಲಿಕೆ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಮುಂದಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಇದ್ದಲ್ಲಿ ಕಂಟ್ರೋಲ್ ರೂಂ (0824- 2220306 ಅಥವಾ 0824- 2220303) ಗೆ ಕರೆ ಮಾಡಿದರೆ ವ್ಯವಸ್ಥೆ ಮಾಡಲಾಗುತ್ತದೆ. ಈಗಾಗಲೇ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸುರತ್ಕಲ್, ಪಾಂಡೇಶ್ವರ ಸಹಿತ ಪೈಪ್‌ಲೈನ್ ನಿಂದ ನೀರು ತಲುಪದ ಕೆಲವು ಪ್ರದೇಶಗಳಿಗೆ ಪ್ರತಿನಿತ್ಯ ಸುಮಾರು 70 ಟ್ಯಾಂಕರ್ (7 ಟ್ಯಾಂಕರ್‌ಗಳಲ್ಲಿ ಟ್ರಿಪ್‌ಗಳಲ್ಲಿ ) ನೀರು ಪಾಲಿಕೆಯಿಂದ ಪೂರೈಕೆಯಾಗುತ್ತಿದೆ. ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ತೊಂದರೆಯಾಗದಂತೆ ಪ್ರತೀ ದಿನ ನಿಗಾ ಇರಿಸಲಾಗುತ್ತದೆ ಎಂದು ಪಾಲಿಕೆ ತಿಳಿಸಿದೆ.

    ——————-

    ತುಂಬೆ ಹಾಗೂ ಎಎಂಆರ್ ಡ್ಯಾಂನಲ್ಲಿ ನೀರಿನ ಮಟ್ಟ ಕುಸಿತವಾಗುತ್ತಿದ್ದರೂ ಮಂಗಳೂರು ನಗರದ ನೀರಿನ ಪೂರೈಕೆಯಲ್ಲಿ ತೊಂದರೆಯಾಗದಂತೆ ನಿಗಾ ವಹಿಸಲಾಗಿದೆ. ತುಂಬೆ ಡ್ಯಾಂ ನೀರಿನ ಮಟ್ಟ ಯಥಾ ಸ್ಥಿತಿ ಕಾಯ್ದುಕೊಳ್ಳಲು ಶೇ.30ರಷ್ಟು ನೀರನ್ನು ತುಂಬೆ ಡ್ಯಾಂನ ಕೆಳಭಾಗದಿಂದ ನಿರಂತರ ಪಂಪಿಂಗ್ ಮಾಡಲಾಗುತ್ತಿದೆ. ಇದೇ ಧೈಯದಲ್ಲಿ ನೀರಿನ ಪೂರೈಕೆ ನಿರತರವಾಗಿ ನಡೆಯುತ್ತಿದೆ.

    ಸುಧೀರ್ ಶೆಟ್ಟಿ ಕಣ್ಣೂರು, ಮಂಗಳೂರು ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts