More

    ನೀಟ್​, ಜೆಇಇ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಮೂವರು ವಿದ್ಯಾರ್ಥಿಗಳು ಒಂದೇ ದಿನ ದುರಂತ ಅಂತ್ಯ! ಕೆಟ್ಟ ನಿರ್ಧಾರಕ್ಕೆ ನೂರಾರು ಕನಸುಗಳು ಭಗ್ನ

    ಜೈಪುರ: ಕೋಚಿಂಗ್ ಸಂಸ್ಥೆಗಳಲ್ಲಿ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಜಸ್ಥಾನದ ಕೋಟಾದಲ್ಲಿ ಸಂಭವಿಸಿದೆ. ಮೃತರ ಪೈಕಿ ಇಬ್ಬರು ಒಂದೇ ಸಂಸ್ಥೆಯವರು!

    ಬಿಹಾರ ಮೂಲದ ಅಂಕುಶ್ ಯಾದವ್, ಉಜ್ವಲ್ ಮತ್ತು ಮಧ್ಯಪ್ರದೇಶದ ಶಿವಪುರಿ ಮೂಲದ ಪ್ರಣವ್ ವರ್ಮಾ ಮೃತ ದುರ್ದೈವಿಗಳು. ಕಳೆದ 7 ತಿಂಗಳಿಂದ ಒಂದೇ ಹಾಸ್ಟೆಲ್‌ನಲ್ಲಿ ಅಂಕುಶ್​ ಮತ್ತು ಉಜ್ವಲ್​ ಇದ್ದರು. NEET ಎಕ್ಸಾಂ ಬರೆಯಲು ಅಂಕುಶ್ ಓದುತ್ತಿದ್ದ. ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಉಜ್ವಲ್ ತಯಾರಿ ನಡೆಸುತ್ತಿದ್ದ. ಉಜ್ವಲ್​ನ ಸಹೋದರಿ ಕೂಡ ಇದೇ ಹಾಸ್ಟೆಲ್​ನಲ್ಲಿ ಇದ್ದಳು.

    ಭಾನುವಾರ ರಾತ್ರಿ ತಮ್ಮ ತಮ್ಮ ಕೊಠಡಿಗಳಿಗೆ ಹೋದ ಇವರಿಬ್ಬರೂ ಸೋಮವಾರ ಮಧ್ಯಾಹ್ನ 12 ಗಂಟೆಯಾದರೂ ಹೊರ ಬಂದಿರಲಿಲ್ಲ. ಅನುಮಾನಗೊಂಡ ಇತರ ವಿದ್ಯಾರ್ಥಿಗಳು ಹಾಸ್ಟೆಲ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಪೊಲೀಸರು ಅಂಕುಶ್​ ಇದ್ದ ಕೊಠಡಿಯ ಬಾಗಿಲು ಹೊಡೆದು ನೋಡಿದಾಗ ಪ್ಯಾನಿಗೆ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕೂಡಲೇ ಆಸ್ಪತ್ರೆಗೆ ಹೊತ್ತೊಯ್ಯಲಾಗಿದೆ. ಈ ಸುದ್ದಿ ಕೇಳಿ ಆತಂಕಗೊಂಡ ಉಜ್ವಲ್​ನ ಸಹೋದರಿ, ಉಜ್ವಲ್​ನ ಕೋಣೆಯ ಬಾಗಿಲು ಬಡಿದರೂ ಆತ ಬಾಗಿಲು ತೆಗೆಯಲಿಲ್ಲ. ಪೊಲೀಸರು ಬೀಗ ಹೊಡೆದು ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಉಜ್ವಲ್​ ಕೂಡ ಪತ್ತೆಯಾಗಿದ್ದಾನೆ. ಇವರಿಬ್ಬರೂ ಇತ್ತೀಚಿಗೆ ತರಗತಿಗೆ ಪದೇಪದೆ ಗೈರಾಗುತ್ತಿದ್ದು, ಒತ್ತಡದಿಂದ ಬಳಲುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

    ಕೋಟಾದ ಮತ್ತೊಂದು ಹಾಸ್ಟೆಲ್​ನಲ್ಲಿ ನೀಟ್​ ಎಕ್ಸಾಂಗೆ ತಯಾರಿ ನಡೆಸುತ್ತಿದ್ದ ಮಧ್ಯಪ್ರದೇಶ ಮೂಲದ ಪ್ರಣವ್ ವರ್ಮಾ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ. ಭಾನುವಾರ ತಡರಾತ್ರಿ ವಿಷ ಕುಡಿದು, ಹಾಸ್ಟೆಲ್​ನ ಮೇಲ್ಛಾವಣಿ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಪ್ರಣವ್​ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಬದುಕಲಿಲ್ಲ. ಮೂವರ ಸಾವಿನ ಸ್ಥಳದಲ್ಲಿ ಯಾವುದೇ ಡೆತ್​ನೋಟ್​ ಪತ್ತೆಯಾಗಿಲ್ಲ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    ರಾಯಚೂರಿನ 5 ವರ್ಷದ ಬಾಲಕಿಗೆ ಜಿಕಾ ವೈರಸ್​​ ದೃಢ: ಸೋಂಕಿನ ಲಕ್ಷಣ ಕಂಡುಬಂದರೆ ಏನು ಮಾಡಬೇಕು?

    ಬಿಸಿಯೂಟ ವಿತರಣೆಗೆ ಸಮಯ ಬದಲಾವಣೆ ಮಾಡಿ ಶಿಕ್ಷಣ ಇಲಾಖೆ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts