More

    ಕರುಳು ಹಿಂಡುವ ದುರಂತ: ಸಿಲಿಂಡರ್​ ಬೆಂಕಿಗೆ ಬಲಿಯಾದ ಹೆಣ್ಣುಮಕ್ಕಳು

    ಅಜಂಗಡ : ತಾಯಿ ನೀರು ತರಲು ಆಚೆ ಹೋದಾಗ ಮನೆಯಲ್ಲಿದ್ದ ಮೂವರು ಹೆಣ್ಣುಮಕ್ಕಳು ಗ್ಯಾಸ್​ ಸಿಲಿಂಡರ್​ಗೆ ಬೆಂಕಿ ಹತ್ತಿಕೊಂಡ ಕಾರಣ ದುರಂತ ಸಾವಿಗೀಡಾಗಿರುವ ಘಟನೆ ಉತ್ತರಪ್ರದೇಶದಿಂದ ವರದಿಯಾಗಿದೆ. ಬೆಂಕಿಯ ಜ್ವಾಲೆಗಳಿಗೆ ಸಿಲುಕಿದ್ದ ಈ ಸೋದರಿಯರನ್ನು ಉಳಿಸಲು ಅಕ್ಕಪಕ್ಕದವರು ಮಾಡಿದ ಪ್ರಯತ್ನ ವಿಫಲವಾಗಿದೆ.

    ಅಜಂಗಡದ ಆಹ್ರೌಲಾ ಪ್ರದೇಶದ ಇಮಾಮ್​ಗಡ ಗ್ರಾಮದಲ್ಲಿ ಭಾನುವಾರ ಸಂಜೆ 11 ವರ್ಷದ ದೀಪಾಂಜಲಿ, 6 ವರ್ಷದ ಶಿವಾಂಶಿ ಮತ್ತು 4 ವರ್ಷದ ಶ್ರೇಜಲ್​ ಅಡುಗೆಮನೆಯಲ್ಲಿದ್ದಾಗ ಈ ದುರಂತ ಸಂಭವಿಸಿದೆ. ಅವರ ತಾಯಿ ನೀರು ತರುವುದಕ್ಕೆ ಹೊರಗೆ ಹೋಗಿದ್ದರು ಎನ್ನಲಾಗಿದೆ.

    ಇದನ್ನೂ ಓದಿ: ಪೆಗಾಸಸ್ ಬಿಕ್ಕಟ್ಟು, ಪ್ರಧಾನಿ ಮಧ್ಯಪ್ರವೇಶಕ್ಕೆ ವಿಪಕ್ಷ ಪಟ್ಟು

    ಅಡುಗೆಕೋಣೆಯ ಬೆಂಕಿಯಲ್ಲಿ ಸಿಕ್ಕಿಹಾಕಿಕೊಂಡು ಕೂಗೆಬ್ಬಿಸಿದ ಬಾಲಕಿಯರ ಸಹಾಯಕ್ಕೆ ಬಂದ ನೆರೆಹೊರೆಯ ಜನ, ಬೆಂಕಿಯನ್ನು ನಂದಿಸಿ, ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ದೀಪಾಂಜಲಿ ಮತ್ತು ಶಿವಾಂಶಿ ಆಸ್ಪತ್ರೆ ತಲುಪುವಷ್ಟರಲ್ಲೇ ಮೃತಪಟ್ಟಿದ್ದರೆ, ಶ್ರೇಜಲ್​ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ಸಾವಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. (ಏಜೆನ್ಸೀಸ್)

    ಹಾಕಿ ಆಟಗಾರ್ತಿಗೆ ಗೌರವಗಳ ಬುತ್ತಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ರಾಯಭಾರಿ!

    ವಿಶ್ವದ ಅತಿ ಎತ್ತರದ ಶ್ರೀ ಚಾಮುಂಡೇಶ್ವರಿ ದೇವಿ ವಿಗ್ರಹ ಲೋಕಾರ್ಪಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts