More

    ರಾಜ್ಯದಲ್ಲಿ 2 ಭೀಕರ ಅಪಘಾತ: ಮೂವರ ಸಾವು, ಐವರ ಕಾಲು ಮುರಿತ, 9 ಮಂದಿಗೆ ಗಂಭೀರ ಗಾಯ..

    ದಾವಣಗೆರೆ/ತುಮಕೂರು: ರಾಜ್ಯದಲ್ಲಿ ಸಂಭವಿಸಿದ ಎರಡು ಭೀಕರ ಅಪಘಾತಗಳಲ್ಲಿ ಒಟ್ಟು ಮೂವರು ಸಾವಿಗೀಡಾದ್ದಲ್ಲದೆ, ಐವರು ಕಾಲು ಮುರಿತಕ್ಕೊಳಗಾಗಿದ್ದು, 9 ಮಂದಿಗ ಗಂಭೀರವಾಗಿ ಗಾಯಗೊಂಡಿದ್ದಾರೆ. ದಾವಣಗೆರೆ ಹಾಗೂ ತುಮಕೂರಿನಲ್ಲಿ ಈ ಅಪಘಾತಗಳು ಸಂಭವಿಸಿವೆ.

    ದಾವಣಗೆರೆಯ ಆನಗೋಡು ಬಳಿಯ ಈಗಿನ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭೀಕರವಾದ ಸರಣಿ ಅಪಘಾತ ಸಂಭವಿಸಿದ್ದು, ಕಾರು, ಮಿನಿ ಬಸ್ ಹಾಗೂ ಟಾಟಾ ಏಸ್​ ಅಪಘಾತಕ್ಕೆ ಒಳಗಾಗಿವೆ. ಈ ಅಪಘಾತದಲ್ಲಿ ಗುತ್ತಲ ಮೂಲದ ಹನುಮಂತಪ್ಪ (58) ಸಾವಿಗೀಡಾಗಿದ್ದು, 9 ಮಂದಿಗೆ ಗಂಭೀರ ಗಾಯಗಳಾಗಿವೆ. ಅದರಲ್ಲಿ ಐವರ ಕಾಲು ಮುರಿತಕ್ಕೊಳಗಾಗಿವೆ. ಗಾಯಾಳುಗಳಿಗೆ ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ದಾವಣಗೆರೆ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಹಾವೇರಿ ತಾಲೂಕಿನ ಗುತ್ತಲದಿಂದ ರಾಮನಗರಕ್ಕೆ ರೇಷ್ಮೆ ಬೆಳೆ ಮಾರಲು ತೆರಳುತ್ತಿದ್ದ ಟಾಟಾ ಏಸ್​ನಲ್ಲಿ ಹತ್ತು ಮಂದಿ ಪ್ರಯಾಣಿಸುತ್ತಿದ್ದು, ಅಪಘಾತದ ತೀವ್ರತೆಗೆ ಒಬ್ಬ ಸಾವಿಗೀಡಾಗಿದ್ದು, ಹಲವರಿಗೆ ಗಂಭೀರ ಗಾಯಗಳಾಗಿವೆ. ಕಾರು ಮತ್ತು ಮಿನಿ ಬಸ್ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

    ತುಮಕೂರಿನಲ್ಲಿ ಸಂಭವಿಸಿದ ಮತ್ತೊಂದು ಭೀಕರ ಅಪಘಾತದಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ. ಲಾರಿ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹುಲಿಯೂರು ದುರ್ಗ ನಿವಾಸಿ ಅರುಣ್ ಹಾಗೂ ಚೇತನ್ ಮೃತಪಟ್ಟವರು.

    ತುಮಕೂರಿನಿಂದ ಕುಣಿಗಲ್ ಕಡೆಗೆ ಚಲಿಸುತ್ತಿದ್ದ ಕಾರು ಮತ್ತು ಕುಣಿಗಲ್ ಕಡೆಯಿಂದ ಬರುತ್ತಿದ್ದ ಲಾರಿ ತುಮಕೂರು ನಗರದ ಮರಳೂರು ಕೆರೆ ಬಳಿ ಡಿಕ್ಕಿಯಾಗಿ ಈ ಅಪಘಾತ ಉಂಟಾಗಿದೆ. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಶವಗಳನ್ನು ತುಮಕೂರು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ನಾಡಿದ್ದೇ ಚಲಾವಣೆಗೆ ಬರಲಿದೆ ಡಿಜಿಟಲ್ ಕರೆನ್ಸಿ; ಪ್ರಾಯೋಗಿಕವಾಗಿ ಎಲ್ಲೆಲ್ಲಿ ಜಾರಿ?

    ಕುತ್ತಿಗೆಗೆ ಚುಚ್ಚಿಕೊಂಡಿದ್ದ ತ್ರಿಶೂಲಸಹಿತ ಶಸ್ತ್ರಚಿಕಿತ್ಸೆಗಾಗಿ 65 ಕಿಲೋಮೀಟರ್​ ಪ್ರಯಾಣಿಸಿದ ಭೂಪ!

    ಸಂಭ್ರಮದ ಸಾವು: ಮದುವೆ ಸಮಾರಂಭದಲ್ಲಿ ಕುಣಿಯುತ್ತ ಕುಣಿಯುತ್ತ ಕುಸಿದು ಬಿದ್ದು ಪ್ರಾಣ ಕಳ್ಕೊಂಡ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts