More

    ಇನ್ನೂ ಮೂರು ದಿನ ಉತ್ತಮ ಮಳೆ

    ಕಾರವಾರ: ಜಿಲ್ಲೆಯಲ್ಲಿ ಮಳೆ ನಿರಂತರವಾಗಿ ಮುಂದುವರಿದಿದೆ. ಇನ್ನೂ ಮೂರು ದಿನ ಉತ್ತಮ ಮಳೆ ಸುರಿಯುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.
    ಭಾನುವಾರ ಬೆಳಗಿನ ವರದಿಯಂತೆ ಅಂಕೋಲಾ 52.4, ಭಟ್ಕಳ-84.8, ಹಳಿಯಾಳ-14, ಹೊನ್ನಾವರ-86.8, ಕಾರವಾರ-33, ಕುಮಟಾ-74.5, ಮುಂಡಗೋಡ-23.3, ಸಿದ್ದಾಪುರ-97.8, ಶಿರಸಿ-64.9, ಜೊಯಿಡಾ-38.7, ಯಲ್ಲಾಪುರ-43.1, ದಾಂಡೇಲಿ-19.5 ಮಿಮೀ ಮಳೆಯಾಗಿದೆ. ಜಿಲ್ಲೆಯ 4 ಮನೆಗಳಿಗೆ ಭಾನುವಾರ ಹಾನಿಯಾಗಿದೆ.
    ಶಾಲೆ ಮೇಲ್ಛಾವಣಿ ಕುಸಿತ: ಭಟ್ಕಳ ತಾಲೂಕಿನ ಮುಂಡಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಶನಿವಾರ ರಾತ್ರಿ ಕುಸಿದಿದೆ. ಅದು ಮಣ್ಣಿನ ಗೋಡೆಯ ಶಾಲೆಯಾಗಿತ್ತು. ನಿರಂತರ ಮಳೆಯಿಂದ ನೆನೆದಿತ್ತು. ವಿದ್ಯಾರ್ಥಿಗಳು ಇಲ್ಲದ್ದರಿಂದ ಅನಾಹುತ ತಪ್ಪಿದೆ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts