More

    ಈ ಮೂವರಿಗೆ ರೈಲು ಬರುವುದು ತಡವಾದ್ದೇ ತಪ್ಪಾಯ್ತು; ಮೋಜಿಗಿಳಿದು ಜೀವ ಕಳ್ಕೊಂಡ್ರು..

    ಕೋಲಾರ: ಅಂದುಕೊಂಡಂತೆಯೇ ಎಲ್ಲವೂ ಆಗಿದ್ದಿದ್ದರೆ ಈ ಮೂವರೂ ಜೀವಂತ ಇರುತ್ತಿದ್ದರು. ಆದರೆ ರೈಲು ಬರುವುದು ತಡವಾಗಿದ್ದೇ ತಪ್ಪಾಯಿತು. ಗ್ಯಾಪಲ್ಲಿ ಸ್ವಲ್ಪ ವಿಹರಿಸುವ ಎಂದು ವಾಪಸಾದ ಇವರು ಮೋಜಿಗೆಂದು ನೀರಿಗಿಳಿದು ವಾಪಸ್ ಬರಲಾಗದ ಲೋಕಕ್ಕೆ ಹೋಗಿದ್ದಾರೆ.

    ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ನೇರಳೆಕೆರೆ ಬಳಿ ಈ ದುರಂತ ಸಂಭವಿಸಿದೆ. ಚಿಕ್ಕವಲಗಮಾದಿ ನವೀನ್ (32), ನೇರಳೆಕೆರೆ ರಾಜೇಂದ್ರ (32), ಮೋಹನ್ (28) ಸಾವಿಗೀಡಾದವರು. ಇವರೊಂದಿಗಿದ್ದ ಶಿವರಾಜ್ ಎಂಬ ಊಟ ತರಲು ಹೋಗಿದ್ದರಿಂದ ಬಚಾವಾಗಿದ್ದಾನೆ.

    ಇಂದು ಮುಂಜಾನೆ ರೈಲು ತಡವಾದ ಕಾರಣ ಇವರು ವಾಪಸ್​ ಆಗಿ ಕೆರೆಲ ಬಳಿ ಪಾರ್ಟಿ ಮಾಡಿದ್ದಲ್ಲದೆ, ತೆಪ್ಪದಲ್ಲಿ ಮೋಜು ಮಾಡಲು ರೌಂಡ್ಸ್​ ಹೋಗಿದ್ದರು. ಆದರೆ ತೆಪ್ಪ ಮಗುಚಿ ಮೂವರು ನೀರಲ್ಲಿ ಮುಳುಗಿದ್ದಾರೆ. ಸ್ಥಳೀಯರು ತಕ್ಷಣ ಧಾವಿಸಿದರೂ ಕೆರೆ ಮಧ್ಯದಲ್ಲಿ ಅವಘಡವಾದ್ದರಿಂದ ರಕ್ಷಣೆ ಸಾಧ್ಯವಾಗಲಿಲ್ಲ.

    ನೀರಲ್ಲಿ ಮುಳುಗಿ ಕಣ್ಮರೆ ಆಗಿರುವವರ ಪತ್ತೆಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಹುಡುಕುತ್ತಿದ್ದಾರೆ. ಸ್ಥಳಕ್ಕೆ ಕೆಜಿಎಫ್ ಎಸ್​​ಪಿ ಡಿ.ಕೆ. ಧರಣಿದೇವಿ ಭೇಟಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅವಘಡ ಸಂಭವಿಸಿದೆ.

    15 ಸಾವಿರ ಶಿಕ್ಷಕರ ನೇಮಕಾತಿಗೆ ಮೇನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts