More

    ಮತ ನೀಡದಿದ್ದರೆ ಗ್ಯಾರಂಟಿ ನಿಲ್ಲಿಸುವ ಬೆದರಿಕೆ

    ಕೋಲಾರ: ಕಾಂಗ್ರೆಸ್​ ಸರ್ಕಾರವು ಜಾರಿಗೆ ತಂದಿರುವ ಗ್ಯಾರಂಟಿಗಳಿಂದ ರಾಜ್ಯದ ಖಜಾನೆ ಖಾಲಿಯಾಗಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಹುಮತ ಪಡೆದುಕೊಳ್ಳಲು ಕಾಂಗ್ರೆಸ್​ಗೆ ಮತ ನೀಡದಿದ್ದರೆ ಗ್ಯಾರಂಟಿ ನಿಲ್ಲುಸುವುದಾಗಿ ಬೆದರಿಕೆಯೊಡ್ಡುತ್ತಿದ್ದಾರೆ ಎಂದ ಸಂಸದ ಎಸ್​.ಮುನಿಸ್ವಾಮಿ ಹೇಳಿದರು.

    ತಾಲೂಕಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿ, ಚುನಾವಣೆ ನಂತರ ತನಾಗಿಯೇ ಗ್ಯಾರಂಟಿಗಳು ನಿಲ್ಲುವುದು ಖಚಿತ. ಈಗಲೂ ಸಾಕಷ್ಟು ಮಂದಿಗೆ ಯೋಜನೆಗಳ ಪ್ರಯೋಜನ ದೊರೆಯುತ್ತಿಲ್ಲ ಎಂದು ದೂರಿದರು.
    ರಾಮ ಮಂದಿರ ಉದ್ಘಾಟನೆ ಸಂದರ್ಭದಲ್ಲಿ ಬ್ಯಾನರ್​, ್ಲೆಕ್ಸ್​ ಅಳವಡಿಸಲು ಅಧಿಕಾರಿಗಳು ಅನುಮತಿ ನೀಡದೆ ಸರ್ಕಾರದ ಕೈಗೊಂಬೆಯಾಗಿ ಕೆಲಸ ಮಾಡಿದ್ದಾರೆ. ಇಲ್ಲಿನ ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಬಹುತೇಕ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ಅವರ ಕೈಗೊಂಬೆಗಳಾಗಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿರುವ ಅಧಿಕಾರಿಗಳು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಇದರ ವಿರುದ್ಧ ಜನತೆ ಧ್ವನಿ ಎತ್ತುವಂತೆ ಮಾಡಬೇಕು ಎಂದು ಎಚ್ಚರಿಸಿದರು.
    ಬಿಜೆಪಿ ಕಾರ್ಯಕರ್ತರು ಬೂತ್​ ಕಮಿಟಿಯಲ್ಲಿ 24 ಗಂಟೆ ಕೆಲಸ ಮಾಡಬೇಕು. ಸಿದ್ದರಾಮಯ್ಯ ಡಿಕೆಶಿ ಅನ್ನೋವರನ್ನೆಲ್ಲ ಮಾತನಾಡಿಸಿ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸಿ. ಪ್ರತಿಯೊಬ್ಬರು ಕೇಂದ್ರ ಸರ್ಕಾರದ ಫಲಾನುಭವಿಗಳಾಗಿದ್ದಾರೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜೀವಂತವಾಗಿರಲು ಕಾರಣ ಕರೋನಾಸಂದರ್ಭದಲ್ಲಿ ನೀಡಿದ ವ್ಯಾಕ್ಸಿನ್​. ಅವರು ನರೇಂದ್ರ ಮೋದಿಯವರನ್ನು ಸ್ಮರಿಸುತ್ತಲೇ ಇರಬೇಕು ಎಂದರು.
    ನಾಲ್ಕು ಪಥದ ರಸ್ತೆಯನ್ನು 6 ಪಥದ ರಸ್ತೆಯನ್ನಾಗಿ ಮಾಡಲು ಮೇಲ್ದರ್ಜೇಗೇರಿಸಲಾಗಿದ್ದು, ಇದಕ್ಕೆ 1500 ಸಾವಿರ ಕೋಟಿ ರೂ.ಅನುದಾನ ತರಲಾಗಿದೆ. 2012ರಲ್ಲಿ 1500 ರೂ. ಇದ್ದ ಸಿಲೆಂಡರ್​ ಬೆಲೆ ಇತ್ತು ಈಗ 1060 ರೂ.ಗೆ ಸಿಗುತ್ತಿದೆ. ಜಲಜೀವನ್​ ಯೋಜನೆಯಡಿ 18,070 ಕೋಟಿ ರೂ.ಅನುದಾನ, 9 ವರ್ಷದಲ್ಲಿ 13 ಸಾವಿರ ಕೋಟಿ ರಾಜ್ಯಕ್ಕೆ ಅನುದಾನ ಸಿಕ್ಕಿದೆ ಎಂದು ತಿಳಿಸಿದರು.
    ಕೆ.ಎಚ್​.ಮುನಿಯಪ್ಪ ರೈಲ್ವೆ ಸಚಿವರಾಗಿದ್ದಾಗ ಅನುದಾನ ತರಲಿಲ್ಲ. ಅದಕ್ಕಿಂತ ಹೆಚ್ಚಿ ಅನುದಾನ ಜಿಲ್ಲೆಗೆ ಸಿಕ್ಕಿದೆ. ಯಡಿಯೂರಪ್ಪ ಅವರ ಕಾಲದಲ್ಲಿ ಯರಗೋಳ್​ ಡ್ಯಾಂ ನಿಮಾರ್ಣ ಆಗಿದ್ದು, ಆದರೆ ಅದರ ಪ್ರಚಾರ ಪಡೆದುಕೊಂಡಿದ್ದ ಕಾಂಗ್ರೆಸ್​ನವರು. ಕಾಂಗ್ರೆಸ್​ ಸಚಿವರು ಕಾರಿನಲ್ಲೇ ಸಲಾಕೆ, ಗಡಾರಿ, ಕತ್ತರಿ ಇಟ್ಟುಕೊಂಡು ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿರುವ ಕಾರ್ಯಕ್ರಮಗಳನ್ನು ಉದ್ಘಾಟಿಸುತ್ತಿದ್ದಾರೆ ಎಂದು ಮುನಿಸ್ವಾಮಿ ಆರೋಪಿಸಿದರು.
    ಕೋಲಾರಮ್ಮ, ಮುದುವಾಡಿ ಹಾಗೂ ಕೋಡಿಕಣ್ಣೂರು ಕೆರೆ ಅಭಿವೃದ್ಧಿಗೆ 1.5 ಕೋಟಿ ರೂ ಅನುದಾನ ನೀಡಿದ್ದಾರೆ. ಸ್ಥಳಿಯ ಶಾಸಕರು ನಯಾ ಪೈಸೆ ನೀಡಿಲ್ಲ. ನಗರದ ಕ್ಲಾಕ್​ ಟವರ್​ನಲ್ಲಿ ಒಂದು ಧರ್ಮದ ಧ್ವಜದ ಹಾರಾಟ ನಿಲ್ಲಿಸಿ, ರಾಷ್ಟ್ರಧ್ವಜ ಹಾರಿಸಿದ್ದು ನಾವು. ಜಿಲ್ಲಾಧಿಕಾರಿ ಒಂದು ಸಮುದಾಯಕ್ಕೆ 190 ಎಕರೆ ಜಮೀನು ಮಂಜೂರು ಮಾಡಲು ಮುಂದಾಗಿದ್ದು, ಪಾಕಿಸ್ತಾನದ ಏಜೆಂಟ್​ರಂತೆ ವರ್ತಿಸುತ್ತಿದ್ದಾರೆ ಎಂದು ಸಂಸದ ಮುನಿಸ್ವಾಮಿ ಗಂಭೀರ ಆರೋಪ ಮಾಡಿದರು. ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ನಡೆಯುತ್ತಿದೆ. ಸಾವಿರಾರು ಎಕರೆ ಜಮೀನನ್ನು ರೈತರಿಂದ ಕಸಿದುಕೊಂಡಿದ್ದಾರೆ. ರೈತರಿಗೆ ಧೈರ್ಯ ತುಂಬುವ ಕೆಲಸ ಜಿಲ್ಲಾಡಳಿತ ಮಾಡಿಲ್ಲ ಎಂದರು.
    ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್​ ರೆಡ್ಡಿ ಮಾತನಾಡಿ, ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಜನತೆಗೆ ಅರಿವು ಮೂಡಿಸಬೇಕು. ಕಾಂಗ್ರೆಸ್​ ಸರ್ಕಾರದ ವೈಫಲ್ಯಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಆ ಮೂಲಕ ಮುಂದಿನ ಲೋಕಸಭೆ ಚುನಾವಣೆಗೆ ಸಿದ್ಧರಾಗಬೇಕು ಎಂದು ಸಲಹೆ ನೀಡಿದರು. ಅಭ್ಯರ್ಥಿ ವಿಚಾರದಲ್ಲಿ ಯಾರಿಗೂ ಗೊಂದಲ ಬೇಡ. ಜೆಡಿಎಸ್​&-ಬಿಜೆಪಿ ಮೈತ್ರಿ ಇರುವುದರಿಂದ ಯಾರಿಗೆ ಟಿಕೆಟ್​ ಸಿಕ್ಕಿದರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಇದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಹೇಳಿದರು.
    ಬಿಜೆಪಿ ಹೈಕಮಾಂಡ್​ ತೀಮಾರ್ನಕ್ಕೆ ಬದ್ಧರಾಗಿ ಕೆಲಸ ಮಾಡುತ್ತೇವೆ. ರಾಜ್ಯದಲ್ಲಿ ಬಿಜೆಪಿ-&ಜೆಡಿಎಸ್​ ಮೈತ್ರಿಯಾಗಿದ್ದು, ಬಿಜೆಪಿಗೆ ಟಿಕೆಟ್​ ಸಿಕ್ಕಿದರೆ ಅವರು ಕೆಲಸ ಮಾಡಬೇಕು. ಅವರಿಗೆ ಟಿಕೆಟ್​ ಸಿಕ್ಕಿದರೆ ನಾವು ಕೆಲಸ ಮಾಡಬೇಕು. 1989ರಿಂದ ಕ್ಷೇತ್ರದಲ್ಲಿ ಯಾವ ರೀತಿ ಚುನಾವಣೆ ನಡೆದಿದೆ ಎಂಬುದು ಹೈಕಮಾಂಡ್​ಗೆ ಮಾಹಿತಿಯಿದೆ ಎಂದು ಮುನಿಸ್ವಾಮಿ ಹೇಳಿದರು. ಕೇಂದ್ರ ಬಜೆಟ್​ನಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​ ಮನೆಗಳಿಗೆ ತೆಗೆದುಕೊಂಡು ಹೋಗುವಂತಹದ್ದು ಏನು ನೀಡಿಲ್ಲ. ಜನತೆಗೆ ಬೇಕಾಗಿರುವ ಬಜೆಟ್​ ಮಂಡನೆಯಾಗಿದೆ ಎಂದು ಪ್ರತಿಕ್ರಿಯಿಸಿದರು.
    ಎಂಎಲ್ಸಿ ಕೇಶವ ಪ್ರಸಾದ್​, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ಕೆ.ಎನ್​.ವೇಣುಗೋಪಾಲ್​, ಮಾಜಿ ಶಾಸಕರಾದ ಕೆ.ಎಸ್​.ಮಂಜುನಾಥ್​ಗೌಡ, ವೈ.ಸಂಪಂಗಿ, ವಕ್ತಾರ ಎಸ್​.ಬಿ.ಮುನಿವೆಂಕಟಪ್ಪ, ಮುಖಂಡ ಸಿಕಲ್​ ರಾಮಚಂದ್ರೇಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts