More

    ಭತ್ತ ಬೇರ್ಪಡಿಸಲು ತ್ರಾೃಷರ್

    ವಿಟ್ಲ: ಸಣ್ಣ ರೈತರಿಗೆ ಕೈಗೆಟಕುವ ಬೆಲೆಯಲ್ಲಿ ಕೃಷಿ ಯಂತ್ರಗಳು ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಈ ಕೊರತೆ ನೀಗಿಸುವ ನಿಟ್ಟಿನಲ್ಲಿ ಸ್ಥಳೀಯವಾಗಿ ಕೃಷಿ ಉಪಕರಣಗಳ ಅಭಿವೃದ್ಧಿ ನಡೆಯುತ್ತಿದ್ದು, ಇದಕ್ಕೆ ಹೊಸ ಸೇರ್ಪಡೆ ರೈಸ್ ತ್ರ್ಯಾಷರ್.

    ವಿಟ್ಲದ ಮೆಕಾನಿಕ್ ಯೋಗೀಶ್ ಶೆಟ್ಟಿ ಕಡಿಮೆ ವೆಚ್ಚದಲ್ಲಿ ಸಾಮಾನ್ಯ ವೀಡ್ ಕಟ್ಟರ್ ಬಳಸಿಕೊಂಡು ರೈಸ್ ತ್ರ್ಯಾಷರ್ ಅಭಿವೃದ್ಧಿಪಡಿಸಿದ್ದಾರೆ.
    ವೀಡ್ ಕಟ್ಟರ್ ಕ್ಲಚ್ ಹೈಸಿಂಗ್‌ಗೆ ರಾಡ್‌ನಿಂದ ತಯಾರಿಸಿರುವ ಈ ಸಲಕರಣೆಯನ್ನು ಜೋಡಿಸಬೇಕು. ಎರಡು ಬೇರಿಂಗ್ ಬಳಕೆ ಮಾಡಿದ್ದು, ಬೇರಿಂಗ್ ಮಧ್ಯದಲ್ಲಿ ರಾಡ್ ಹಾಗೂ ಮೊಳೆಯನ್ನು ಬಳಸಿಕೊಂಡು ಆರು ರಾಡ್‌ಗಳನ್ನು ವಿಶಿಷ್ಟವಾಗಿ ಜೋಡಣೆ ಮಾಡಲಾಗಿದೆ. ಇದನ್ನು ಯಂತ್ರಕ್ಕೆ ಜೋಡಿಸಿದಾಗ ಸಲಕರಣೆ ತಿರುಗುತ್ತದೆ. ಈ ಸಂದರ್ಭ ಭತ್ತದ ತೆನೆಯನ್ನು ಆ ಭಾಗಕ್ಕೆ ಹಿಡಿಯುವುದರಿಂದ ಸುಲಭವಾಗಿ ಬೇರ್ಪಡುತ್ತದೆ.

    ವೀಡ್ ಕಟ್ಟರ್ ಅನ್ನು ಗದ್ದೆಯ ಬಹುಉಪಯೋಗಿ ಕಾರ್ಯಕ್ಕೆ ಬಳಸಬೇಕೆಂಬ ಬೇಡಿಕೆ ಹಿನ್ನೆಲೆಯಲ್ಲಿ ಭತ್ತ ಬೇರ್ಪಡಿಸುವ ಯಂತ್ರ ತಯಾರಿಗೆ ಮುಂದಾದೆವು. 3ರಿಂದ 3.5 ಸಾವಿರ ಮೊತ್ತದಲ್ಲಿ ಇದನ್ನು ತಯಾರಿಸಿದ್ದು, ಇನ್ನಷ್ಟು ಬದಲಾವಣೆಗಳನ್ನು ಮಾಡಿದಲ್ಲಿ ವಾಹನಗಳು ಹೋಗದ ಪ್ರದೇಶದಲ್ಲೂ ಸುಲಭವಾಗಿ ಬಳಸಬಹುದು.
    ಯೋಗೀಶ್ ಕಾಶಿಮಠ, ಮೆಕಾನಿಕ್

    ಈ ಯಂತ್ರದಲ್ಲಿ ಪಡಿಗಿಂತ ಉತ್ತಮವಾಗಿ ಭತ್ತವನ್ನು ಬಿಡಿಸಲಾಗುತ್ತದೆ. ಆದರೆ ಭತ್ತದ ಹುಲ್ಲಿನ ಧೂಳು ಸ್ವಚ್ಛ ಮಾಡಲು ಸ್ವಲ್ಪ ಸಮಯ ಬೇಕಾಗುತ್ತದೆ. ಓರ್ವ ಅಥವಾ ಇಬ್ಬರಿಂದ ಕೆಲಸ ನಿರ್ವಹಣೆ ಮಾಡಲು ಇದು ಸಹಕಾರಿ.
    ಸುಶೀಲಾ, ಕೃಷಿಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts