More

    ಬೀರೇಶ್ವರ ಸೊಸೈಟಿಯಿಂದ ಸಾವಿರಾರು ಜನರಿಗೆ ಉದ್ಯೋಗ

    ನರಗುಂದ: ಗ್ರಾಮೀಣ ಜನರ ದುಃಖ-ದುಮ್ಮಾನಗಳನ್ನು ನಿವಾರಿಸಲು ಜೊಲ್ಲೆ ಕುಟುಂಬಸ್ಥರು 1991ರಲ್ಲಿ ಪ್ರಾರಂಭಿಸಿರುವ ಶ್ರೀಬೀರೇಶ್ವರ ಕೋ-ಆಪ್ ಕ್ರೆಡಿಟ್ ಸೊಸೈಟಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಕೋಟ್ಯಂತರ ರೂ. ವಹಿವಾಟು ನಡೆಸುವ ಮೂಲಕ ಸಾವಿರಾರು ಜನರಿಗೆ ನೆರವಾಗಿದೆ ಪುಣ್ಯಾರಣ್ಯ ಪತ್ರೀವನಮಠದ ಡಾ.ಗುರುಸಿದ್ಧವೀರ ಶಿವಯೋಗಿ ಶಿವಾಚಾರ್ಯರು ಹೇಳಿದರು.

    ಪಟ್ಟಣದ ಹಳೆಯ ತಹಸೀಲ್ದಾರ್ ಕಚೇರಿ ಬಳಿ ಪ್ರಾರಂಭಿಸಿರುವ ಶ್ರೀಬೀರೇಶ್ವರ ಕೋ.ಆಪ್ ಕ್ರೆಡಿಟ್ ಸೊಸೈಟಿ ಯಕ್ಸಂಬಾ (ಮಲ್ಟಿ-ಸ್ಟೇಟ್) ಸಂಸ್ಥೆಯ 175ನೇ ಶಾಖೆ ಉದ್ಘಾಟನೆ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

    ಬ್ಯಾಂಕ್, ಸಹಕಾರಿ ಸಂಘಗಳನ್ನು ಸ್ಥಾಪಿಸುವುದರ ಮೂಲಕ 3ಸಾವಿರಕ್ಕೂ ಅಧಿಕ ಸಿಬ್ಬಂದಿಗೆ ಉದ್ಯೋಗವನ್ನು ಕಲ್ಪಿಸಿಕೊಟ್ಟಿರುವ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕಿ, ಮಾಜಿ ಸಚಿವೆ ಶಶಿಕಲಾ ಜೊಲ್ಲೆಯವರ ನಿಲುವು ಅತ್ಯದ್ಭುತ ಎಂದರು.

    ವಿರಕ್ತಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ, ನರಗುಂದದಲ್ಲಿ ಪ್ರಾರಂಭಿಸಿರುವ ಶಾಖೆ ಈ ಭಾಗದ ರೈತರು, ಸಾರ್ವಜನಿಕರ ಪ್ರೀತಿ, ವಿಶ್ವಾಸ ಮತ್ತು ನಂಬಿಕೆ ಗಳಿಸುವ ಮೂಲಕ ಗ್ರಾಹಕರ ಜನಸ್ನೇಹಿ ಕಾರ್ಯಕ್ಕೆ ಅಣಿಗೊಳ್ಳಬೇಕಿದೆ ಎಂದರು.

    ಮಹೇಶಗೌಡ ಪಾಟೀಲ ಮಾತನಾಡಿ, ಶ್ರೀಬೀರೇಶ್ವರ ಎಂಬ ದೇವರ ಹೆಸರಿನಲ್ಲಿ ಪ್ರಾರಂಭಿಸಿದ ಒಂದು ಸಣ್ಣ ಶಾಖೆ ಇಂದು 175 ಶಾಖೆಗಳನ್ನು ಹೊಂದಿರುವುದು ದೊಡ್ಡ ಸಾಧನೆ ಎಂದರು.

    ಭೈರನಹಟ್ಟಿ ಶಾಂತಲಿಂಗ ಶ್ರೀಗಳು ಮಾತನಾಡಿ, ಸಮಾಜದಲ್ಲಿ ಏನಾದರೂ ಬದಲಾವಣೆ ಆಗಬೇಕೆಂಬ ನಿಟ್ಟಿನಲ್ಲಿ ಜೊಲ್ಲೆ ಪರಿವಾರದವರು ಸಾವಿರಾರು ಕುಟುಂಬಗಳಿಗೆ ಉದ್ಯೋಗ ಕಲ್ಪಿಸಿದ್ದಾರೆ. ಜೊಲ್ಲೆ ಕುಟುಂಬದವರು ಶೈಕ್ಷಣಿಕ, ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೆ ಮುಂದಾಗಿರುವುದು ಶ್ಲಾಘನೀಯ ಎಂದರು.

    ಶಾಖಾ ವ್ಯವಸ್ಥಾಪಕ ಸಚಿನ ಡಬ್ಬನ್ನವರ ಮಾತನಾಡಿ, 33 ವರ್ಷಗಳ ಹಿಂದೆ ಜನಿಸಿದ ಬೀರೇಶ್ವರ ಸಹಕಾರಿ ಸಂಸ್ಥೆ ಪಾರದರ್ಶಕ ಹಾಗೂ ಪ್ರಾಮಾಣಿಕ ಸೇವೆಯಿಂದ ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ ಶಾಖೆಗಳನ್ನು ಹೊಂದಿದೆ. 26 ಕೋಟಿ ರೂ.ಗಿಂತ ಅಧಿಕ ಮೊತ್ತದ ಸಾಲ ನೀಡಿ 35 ಕೋಟಿ ರೂ. ನಿವ್ವಳ ಲಾಭ ಹೊಂದಿದೆ. 3.50 ಲಕ್ಷ ಸದಸ್ಯರಿದ್ದಾರೆ. ಕೋರ್ ಬ್ಯಾಂಕಿಂಗ್, ಆನ್​ಲೈನ್ ಬ್ಯಾಂಕಿಂಗ್, ಬಸ್, ರೈಲ್ವೆ ಟಿಕೆಟ್ ಬುಕಿಂಗ್ ಸೇವೆ ನೀಡುವುದರ ಜತೆಗೆ ಕೃಷಿಕರು, ಯುವಕರು, ಮಹಿಳೆಯರ ಸಬಲೀಕರಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.

    ಗ್ರಾಹಕರಿಗೆ ಠೇವಣಿ ಪ್ರಮಾಣ ಪತ್ರ ವಿತರಿಸಲಾಯಿತು. ಪ್ರವೀಣ ಜಕಾತಿ, ತೀರ್ಥಗೌಡ ಪಾಟೀಲ, ಮಹಾದೇವಪ್ಪ ನಡುವಿನಮನಿ, ಶೇಖರಗೌಡ ಮದ್ನೂರ, ಚನ್ನಬಸಪ್ಪ ಯಳಕಲ್, ಈರಪ್ಪ ನಂದಿ, ಶೈಲಾ ಹೆಬ್ಬಾಳ, ಶಾಂತಾ ಸಿದ್ಧರಾಮ, ಗಂಗನಗೌಡ ಪಾಟೀಲ, ಆನಂದ ಲಿಂಗೋಜಿ, ಬಾಳಾಸಾಹೇಬ ಬೊಜೆ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts