More

    ಬೊಜ್ಜು ಕರಗಿಸಲು ಉಪಯುಕ್ತ ಯೋಗಾಸನವಿದು! ಪಾರಿವಾಳದಂತೆ ಕಾಣುವ ಭಂಗಿ!

    ಬೆನ್ನು, ಸೊಂಟ, ಕಿಬ್ಬೊಟ್ಟೆ ಮತ್ತು ಕುತ್ತಿಗೆಗೆ ವ್ಯಾಯಾಮ ದೊರಕುವ ಯೋಗಾಸನ, ರಾಜಕಪೋತಾಸನ. ರಾಜಕಪೋತ ಎಂದರೆ ಪಾರಿವಾಳಗಳ ರಾಜ ಎಂದರ್ಥ. ಪಾರಿವಾಳ ಕೂತಿರುವಂತೆ ಕಾಣಿಸುವ ಸುಂದರ ಭಂಗಿ ಇದಾಗಿದೆ. ಹೊಟ್ಟೆಯ ಬೊಜ್ಜು ಕರಗಿಸಲು, ಥೈರಾಯ್ಡ್​ ಗ್ರಂಥಿಯ ಆರೋಗ್ಯ ಹೆಚ್ಚಿಸಲು ಈ ಆಸನ ಸಹಕಾರಿ.

    ಪ್ರಯೋಜನಗಳು: ಬೆನ್ನು, ಸೊಂಟ, ಕಿಬ್ಬೊಟ್ಟೆಗೆ ಮತ್ತು ಕುತ್ತಿಗೆಗೆ ಸಾಕಷ್ಟು ವ್ಯಾಯಾಮ ದೊರಕಿ, ರಕ್ತ ಪರಿಚಲನೆ ಹೆಚ್ಚುತ್ತದೆ. ಹೊಟ್ಟೆಯ ಬೊಜ್ಜು ಕರಗಿಸುತ್ತದೆ. ಥೈರಾಯ್ಡ್​ ಗ್ರಂಥಿಯ ಆರೋಗ್ಯ ವರ್ಧನೆಯಾಗುತ್ತದೆ. ಉದರದ ಭಾಗದ ಅಂಗಗಳನ್ನು ಜೀರ್ಣಕ್ರಿಯೆ ಚೆನ್ನಾಗಿ ಮಾಡುವಂತೆ ಉತ್ತೇಜಿಸುತ್ತದೆ. ಮೂತ್ರದೋಷ ನಿವಾರಣೆಯಾಗುತ್ತದೆ.

    ಇದನ್ನೂ ಓದಿ: ದುಬೈನಿಂದ ಬಂದವರ ಒಳ ಉಡುಪಿನಲ್ಲಿತ್ತು ಕೆಜಿಗಟ್ಟಲೇ ಚಿನ್ನದ ಪೇಸ್ಟ್….

    ಮಾಡುವ ವಿಧಾನ: ಜಮಖಾನದ ಮೇಲೆ ಮಕರಾಸನದಲ್ಲಿ ಮಲಗಿಕೊಂಡು ಕಾಲುಗಳನ್ನು ಜೋಡಿಸುವುದು. ಕೈಗಳನ್ನು ಆಯಾ ಕಡೆ ಪಕ್ಕಕ್ಕೆ ತರುವುದು. ಉಸಿರನ್ನು ತೆಗೆದುಕೊಳ್ಳತ್ತಾ, ಅಂಗೈಗಳನ್ನು ನೆಲದ ಮೇಲೆ ಬಲವಾಗಿ ಒತ್ತಿ, ತಲೆಯನ್ನು ಮೇಲಕ್ಕೆತ್ತುವುದು. ಎದೆಯ ಮೇಲ್ಭಾಗದಿಂದ ಹಿಂದಕ್ಕೆ ಬಾಗುವುದು. ಕಾಲುಗಳನ್ನು ಹಿಂದಕ್ಕೆ ಮೇಲ್ಮುಖವಾಗಿ ಮಡಿಸಿ, ತಲೆಯನ್ನು ಅಂಗಾಲುಗಳ ಮೇಲಕ್ಕೆ ಒರಗಿಸಿಡುವುದು. ಕಾಲುಗಳನ್ನು ಮತ್ತು ಮಂಡಿಗಳನ್ನು ಆದಷ್ಟು ಹತ್ತಿರಕ್ಕೆ ತರುವ ಪ್ರಯತ್ನ ಮಾಡಬೇಕು. ಈ ಸ್ಥಿತಿಯಲ್ಲಿ ಸ್ವಲ್ಪ ಸಮಯ ಸಹಜ ಉಸಿರಾಟ ನಡೆಸಬೇಕು. ಆಮೇಲೆ ಉಸಿರನ್ನು ಬಿಡುತ್ತಾ, ತಲೆ ಮತ್ತು ಕಾಲುಗಳನ್ನು ನೆಲಕ್ಕೆ ತಂದು ವಿಶ್ರಾಂತಿ ಪಡೆಯಬೇಕು.

    ಒಮ್ಮೆ ಅಭ್ಯಾಸವಾದರೆ ಎರಡು-ಮೂರು ಬಾರಿ ಮಾಡಿ ನಂತರ ಮಕರಾಸನದಲ್ಲಿ ವಿಶ್ರಮಿಸಬೇಕು. ಇದು ಸ್ವಲ್ಪ ಕ್ಲಿಷ್ಟಕರವಾದ ಆಸನವಾಗಿದ್ದು, ಗುರುಗಳ ಸಲಹೆ-ಮಾರ್ಗದರ್ಶನದೊಂದಿಗೆ ಕಲಿತರೆ ಒಳ್ಳೆಯದು. ತೀರಾ ಸೊಂಟ ನೋವು ಅಥವಾ ಮಂಡಿ ನೋವು ಇರುವವರು ಈ ಆಸನವನ್ನು ಮಾಡಬಾರದು.

    ಗುಜರಾತ್​: ರೂಪಾನಿ ರಾಜೀನಾಮೆ; ಮುಂದಿನ ಸಿಎಂ ಯಾರು?

    ಬೆಂಗಳೂರಿಗರೇ, ಎಚ್ಚರ! 3 ತಿಂಗಳಲ್ಲಿ 6 ಪಟ್ಟು ಹೆಚ್ಚಿದೆ ಡೆಂಘೆ ಜ್ವರ

    ಮೆನೋಪಾಸ್​ ಸಮಸ್ಯೆಗಳ ನಿಯಂತ್ರಣಕ್ಕೆ ಉಪಯುಕ್ತ, ಈ ಯೋಗಾಸನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts