ಮೆನೋಪಾಸ್​ ಸಮಸ್ಯೆಗಳ ನಿಯಂತ್ರಣಕ್ಕೆ ಉಪಯುಕ್ತ, ಈ ಯೋಗಾಸನ

ಸ್ತ್ರೀಯರಿಗೆ ಸಂಬಂಧಿಸಿದ ಮುಟ್ಟಿನ ದೋಷ ಮತ್ತು ಮೆನೋಪಾಸ್​ ಸಮಸ್ಯೆಗಳ ನಿಯಂತ್ರಣಕ್ಕೆ ಉಪಯುಕ್ತವಾದ ಯೋಗಾಸನವೆಂದರೆ ಪರಿವೃತ್ತ ಜಾನುಶೀರ್ಷಾಸನ. ಲಿವರ್​ ಮತ್ತು ಕಿಡ್ನಿಯ ಆರೋಗ್ಯಕ್ಕೆ ಉತ್ತಮವಾದ ಈ ಆಸನವು ಕುಳಿತುಕೊಂಡು ಪಾರ್ಶ್ವಕ್ಕೆ ಬಾಗುವ ಭಂಗಿಯಾಗಿದೆ. ಪ್ರಯೋಜನಗಳು: ಲಿವರ್​ ಮತ್ತು ಕಿಡ್ನಿಯ ಆರೋಗ್ಯ ಉತ್ತಮಗೊಳ್ಳುತ್ತದೆ. ಮೂತ್ರಕೋಶ ಸುಸ್ಥಿತಿಯಲ್ಲಿರುತ್ತದೆ. ವಿಶೇಷವಾಗಿ, ಕಶೇರುಕಗಳ ಭಾಗ, ಭುಜಗಳ, ಮಂಡಿಗಚ್ಚು ಮತ್ತು ತೊಡೆಗಳ ಭಾಗಗಳು ಎಳೆತಕ್ಕೊಳಗಾಗಿ ಸ್ನಾಯುಗಳು ಬಲಗೊಳ್ಳುತ್ತವೆ. ತೊಡೆಯ ಕೀಲುಗಳು ಬಲಗೊಳ್ಳುತ್ತವೆ. ಮಹಿಳೆಯರ ಮೆನೋಪಾಸ್​ ಸಮಯದ ಸಮಸ್ಯೆಗಳ ನಿಯಂತ್ರಣಕ್ಕೆ ಈ ಯೋಗಾಸನದ ಅಭ್ಯಾಸ ಸಹಕಾರಿಯಾಗಿದೆ. ಇದನ್ನೂ … Continue reading ಮೆನೋಪಾಸ್​ ಸಮಸ್ಯೆಗಳ ನಿಯಂತ್ರಣಕ್ಕೆ ಉಪಯುಕ್ತ, ಈ ಯೋಗಾಸನ