More

    ಗೂನು ಬೆನ್ನು ನಿವಾರಣೆಗೆ ಈ ಯೋಗಾಸನ ಸಹಕಾರಿ

    ಗೂನು ಬೆನ್ನು ನಿವಾರಣೆಗೆ ಸಹಕಾರಿಯಾದ ಆಸನವೆಂದರೆ ಅರ್ಧ ಉಷ್ಟ್ರಾಸನ. ಮೊಣಕಾಲನ್ನು ಊರಿ ಉಸಿರಿನ ಗತಿಯೊಂದಿಗೆ ಹಿಂದಕ್ಕೆ ಬಾಗುವ ಆಸನವಿದು. ಬೆನ್ನಿಗೆ ಬಲ ನೀಡುವುದರೊಂದಿಗೆ ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಇದು ಸಹಕಾರಿ.

    ಪ್ರಯೋಜನ: ಅರ್ಧ ಉಷ್ಟ್ರಾಸನದ ಅಭ್ಯಾಸದಿಂದ ಬೆನ್ನಿನ ಸ್ನಾಯುಗಳು ಮತ್ತು ಎಲುಬುಗಳು ಬಲಿಷ್ಠಗೊಳ್ಳುತ್ತವೆ. ಗೂನು ಬೆನ್ನು ನಿಯಂತ್ರಣವಾಗುತ್ತದೆ. ಬೆನ್ನಿನ ಬಿಗಿತ ನಿವಾರಣೆಯಾಗುತ್ತದೆ. ರಕ್ತ ಸಂಚಾರ ಸುಗಮವಾಗುತ್ತದೆ. ನರಮಂಡಲ ಸಚೇತನಗೊಳ್ಳುತ್ತದೆ. ಶ್ವಾಸಕೋಶದ ಸಾಮರ್ಥ್ಯ ಹೆಚ್ಚಿ ಅಸ್ತಮಾ ನಿವಾರಣೆಯಾಗುತ್ತದೆ. ಥೈರಾಯ್ಡ್​ ಗ್ರಂಥಿಯ ಆರೋಗ್ಯ ವರ್ಧಿಸುತ್ತದೆ. ಬೆನ್ನಿನ ಹುರಿಯ ನರಗಳು ಚೈತನ್ಯ ಹೊಂದುತ್ತವೆ. ಜೀರ್ಣಾಂಗಗಳು ಚುರುಕುಗೊಳ್ಳುತ್ತವೆ.

    ಇದನ್ನೂ ಓದಿ: ಪ್ಯಾರಾಲಿಂಪಿಕ್ಸ್​: ವಿನೋದ್​ಕುಮಾರ್​ ಕೈತಪ್ಪಿದ ಕಂಚಿನ ಪದಕ

    ಅಭ್ಯಾಸ ಕ್ರಮ: ಕಾರ್ಪೆಟ್​ ಮೇಲೆ ವಜ್ರಾಸನದ ರೀತಿಯಲ್ಲಿ ಕುಳಿತುಕೊಳ್ಳುವುದು. ನಂತರ ಮಂಡಿ ಊರಿ ಮೊಣಕಾಲಿನ ಮೇಲೆ ನಿಂತುಕೊಳ್ಳಬೇಕು. ಕಾಲುಗಳನ್ನು ಸ್ವಲ್ಪ ದೂರಕ್ಕೆ ವಿಸ್ತರಿಸಿ, ಸೊಂಟದ ಹಿಂದಕ್ಕೆ ಎರಡೂ ಕೈಗಳನ್ನು ಹಿಡಿದುಕೊಳ್ಳುವುದು. ಉಸಿರು ತೆಗೆದುಕೊಳ್ಳುತ್ತಾ, ನಿಧಾನವಾಗಿ ಸೊಂಟದ ಮೇಲ್ಭಾಗದಿಂದ ಹಿಂದಕ್ಕೆ ಬಾಗಬೇಕು. ಕುತ್ತಿಗೆ ಮತ್ತು ತಲೆಯನ್ನು ಹಿಂದಕ್ಕೆ ಚಾಚಿ ಸ್ವಲ್ಪ ಹೊತ್ತು ಈ ಸ್ಥಿತಿಯಲ್ಲಿ ಸಹಜ ಉಸಿರಾಟ ನಡೆಸಬೇಕು. ನಂತರ ನಿಧಾನವಾಗಿ ಉಸಿರನ್ನು ಬಿಡುತ್ತಾ ಮೂಲಸ್ಥಿತಿಗೆ ವಾಪಸಾಗಬೇಕು.

    ಆರಂಭದಲ್ಲಿ ಎಷ್ಟು ಸಾಧ್ಯವೋ ಅಷ್ಟು ಮಾತ್ರ ಬಾಗಬೇಕು. ಅಭ್ಯಾಸವಾದ ನಂತರ ಈ ಆಸನವನ್ನು 2-3 ಬಾರಿ ಅಭ್ಯಾಸ ಮಾಡಿ, ನಂತರ ಕಾಲು ಚಾಚಿ ಕುಳಿತು ವಿಶ್ರಮಿಸಬೇಕು. ಹೃದಯ ಸಂಬಂಧಿ ಕಾಯಿಲೆ, ಮಂಡಿ ನೋವು, ಕುತ್ತಿಗೆ ನೋವು ಅಥವಾ ತಲೆ ಸುತ್ತು ಸಮಸ್ಯೆ ಇರುವವರು ಈ ಆಸನ ಮಾಡಬಾರದು.

    ಸೈಬರ್​​ ಕ್ರೈಂ ವಿಭಾಗದ ಹೆಡ್​​ ಕಾನ್ಸ್​​ಟೇಬಲ್ ಆತ್ಮಹತ್ಯೆ

    ಬೆನ್ನುನೋವು ನಿಯಂತ್ರಣಕ್ಕೆ ಮಗುವಿನಂತೆ ಮಲಗುವ ಈ ಸರಳ ಯೋಗಾಸನ ಮಾಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts