More

    ಬಡವರ ಪಾಲಿನ ಕಲ್ಪವೃಕ್ಷ ಬೈನೆ ಮರ

    | ಕಾಂತರಾಜ್​ ಹೊನ್ನೇಕೋಡಿ ಸಕಲೇಶಪುರ

    ತೆಂಗಿನ ಮರಕ್ಕೆ ಮತ್ತೊಂದು ಹೆಸರು ‘ಕಲ್ಪವೃಕ್ಷ’. ಅಂತೆಯೆ, ಮಲೆನಾಡಿನಲ್ಲಿ ಬಡವರ ಪಾಲಿನ ಮತ್ತೊಂದು ಕಲ್ಪವೃಕ್ಷವಿದೆ! ಹೌದು. ಆ ಮರದ ಹೆಸರು ಬೈನೆ(ಬಗನಿ). ಇದು ಪಾಲ್ಮಸಿ ಸಸ್ಯ ಕುಟುಂಬಕ್ಕೆ ಸೇರಿದ್ದು, ಕ್ಯಾರಿಯೋಟ ಉರೆನ್ಸ್ ಎಂಬುದು ಇದರ ಸಸ್ಯಶಾಸ್ತ್ರೀಯ ಹೆಸರು. ಸಮಾಜದ ಎಲ್ಲ ವರ್ಗದ ಜನರ ದೈನಂದಿನ ಬದುಕಿನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಉಪಯೋಗಕ್ಕೆ ಬರುತ್ತಿದ್ದ ಬೈನೆ ಮರವನ್ನು ಇದೀಗ ಆರ್ಥಿಕವಾಗಿ ಹಿಂದುಳಿದವರು ಉಪಯೋಗಿಸುವಂತಾಗಿದೆ. ಜಾತಿ ಮರಗಳನ್ನು ಬಳಸಿ ಮನೆ ಕಟ್ಟಲು ಆಗದವರು ಬೈನೆ ಮರದ ಬಲಿತ ಕಾಂಡಗಳನ್ನು ಬಳಸಿ ಮನೆ ಕಟ್ಟುತ್ತಿದ್ದಾರೆ. ಬಡವರ ಮನೆಗಳ ದಬ್ಬೆಗಳಾಗಿ, ಕಿಟಕಿ, ಬಾಗಿಲುಗಳಾಗಿ ಈ ಮರದ ಕಾಂಡಗಳು ಉಪಯೋಗಕ್ಕೆ ಬರುತ್ತಿವೆ. ಹಲವು ದಶಕಗಳ ಕಾಲ ಬಾಳಿಕೆ ಬರುವ ಬೈನೆ ಮರದ ಪಕಾಸುಗಳಿರುವ ಹಲವು ಮನೆಗಳು ಇಂದಿಗೂ ಪಶ್ಚಿಮಘಟ್ಟದಲ್ಲಿವೆ.

    ಕೃಷಿ: ಇಂದಿಗೂ ಗ್ರಾಮೀಣ ಭಾಗದ ಸಾಕಷ್ಟು ಕೃಷಿಕರು ಎಳೆ ಬೈನೆ ಮರದ ಕಾಂಡಗಳನ್ನು ಸೀಳಿ ಹಗ್ಗ ಮಾಡುವ ಮೂಲಕ ಭತ್ತದ ಹೊರೆ ಕಟ್ಟಲು ಉಪಯೋಗಿಸುತ್ತಾರೆ. ಬಲಿತ ಮರದ ಕಾಂಡಗಳಿಂದ ನೇಗಿಲು, ನೊಗ ಮಾಡಲಾಗುತ್ತದೆ. ಜತೆಗೆ, ರೆಕ್ಕೆಗಳನ್ನು ಮನೆಯ ಮುಂದಿನ ಅಂಗಳ ಗುಡಿಸಲು ಪೊರಕೆಯಾಗಿ, ಜಾತ್ರೆ ಹಾಗೂ ಸುಗ್ಗಿಗಳಲ್ಲಿ ತಳಿರು ತೋರಣವಾಗಿ, ಮದುವೆ ಉತ್ಸವಗಳಲ್ಲಿ ಚಪ್ಪರಕ್ಕೆ ಹಾಕುವ ವಸ್ತುವಾಗಿ ಉಪಯೋಗಿಸಲಾಗುತ್ತದೆ. ಇದರ ಕಾಯಿಗಳನ್ನು ಮೀನು ಹಿಡಿಯಲು ಉಪಯೋಗಿಸಲಾಗುತ್ತದೆ.

    ಪಾನೀಯ: ಈ ಮರದಿಂದ ಸೇಂದಿ ಉತ್ಪತ್ತಿಯಾಗುತ್ತದೆ. ಆಯುರ್ವೆದದ ಬಗ್ಗೆ ಅರಿವಿರುವ ಮಲೆನಾಡಿನ ಜನರು ಬೈನೆ ಮರದ ಸಸಿಗಳನ್ನು ಸೀಳಿ ಅದರ ತಿರುಳು ತಿನ್ನುತ್ತಾರೆ. ಒಣಗಿ ನಿಂತ ಮರದ ಕಾಂಡ ಗೊಬ್ಬರದ ಹುಳುಗಳಿಗೆ ಆಹಾರ ಒದಗಿಸಿದರೆ, ಈ ಹುಳುಗಳು ಕಾಡುಬೆಕ್ಕುಗಳಿಗೆ ಆಹಾರ ಆಗುತ್ತವೆ.

    ಸ್ವರೂಪ: ತಾಳೆ ಮರದ ಸ್ವರೂಪದಲ್ಲಿರುವ ಇದು ಸುಮಾರು ನೂರು ಅಡಿವರೆಗೂ ನೀಳವಾಗಿ ಬೆಳೆಯುವುದರಿಂದ ರಣಹದ್ದುಗಳು ಗೂಡು ಕಟ್ಟಲು ಈ ಮರಗಳನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತವೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಈ ಮರಗಳು ಹೆಚ್ಚಾಗಿ ಕಂಡುಬರುತ್ತವೆ.

    ಲತಾ ಮಂಗೇಶ್ಕರ್​ ಜತೆ ವಾಜಪೇಯಿಯನ್ನೂ ನೆನಪಿಸಿಕೊಳ್ಳುತ್ತಿರುವ ಅಭಿಮಾನಿಗಳು; ಕಾರಣಗಳಿವು…

    Photo-Video | ಕೊನೆಯ ದಿನಗಳಲ್ಲಿ ಹೀಗಿದ್ದರು ಲತಾ ಮಂಗೇಶ್ಕರ್​..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts