More

    ಹಾಸನಾಂಬ ಭಕ್ತರಿಗೆ ಈ ಸಲ ನಿರಾಸೆ..

    ಹಾಸನ: ಹಾಸನಾಂಬ ಭಕ್ತರಿಗೆ ವರ್ಷಕ್ಕೊಮ್ಮೆ ದೊಡ್ಡ ಸಂಭ್ರಮ. ವರ್ಷದಲ್ಲಿ ಒಮ್ಮೆ ಸಿಗುವ ಅದೊಂದು ಅಪರೂಪದ ಅವಕಾಶಕ್ಕೆ ಕಾತರದಿಂದ ಕಾಯುವ ಭಕ್ತರಿಗೆ ಈ ಸಲ ನಿರಾಸೆ ಉಂಟಾಗಿದೆ.

    ಹಾಸನಾಂಬ ದರ್ಶನಕ್ಕೆ ದಿನ ನಿಗದಿ ಮಾಡಲಾಗಿದ್ದರೂ ಈ ಸಲ ಸಾರ್ವಜನಿಕರಿಗೆ ದೇವಿ ದರ್ಶನಕ್ಕೆ ಅವಕಾಶವಿಲ್ಲ. “ನವೆಂಬರ್​ 5ರಿಂದ 16ರ ವರೆಗೆ ದೇವಿಯ ದರ್ಶನಕ್ಕೆ ದಿನ ನಿಗದಿ ಮಾಡಲಾಗಿದೆ. ಆದರೆ ಜಿಲ್ಲೆಯಲ್ಲಿ ಕರೊನಾ ಸೋಂಕು ಹೆಚ್ಚಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ನೇರವಾಗಿ ದೇವಿಯನ್ನು ನೋಡಲು ಅವಕಾಶವಿಲ್ಲ” ಎಂದು ಇಂದು ಹಾಸನ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ.

    ಅದಾಗ್ಯೂ ನಗರದಲ್ಲಿ 12 ಕಡೆ ಎಲ್​ಇಡಿ ಪರದೆ ವ್ಯವಸ್ಥೆ ಮಾಡುವ ಮೂಲಕ ದೇವರ ದರ್ಶನ ಲಭಿಸುವಂತೆ ಮಾಡಲಾಗುವುದು. ಮೊದಲ ದಿನ ಬಾಗಿಲು ತೆಗೆಯುವ ವೇಳೆ ಉದ್ಘಾಟನೆಗೆ ಬರುವಂತೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರನ್ನು ಕರೆಯುತ್ತೇವೆ. ಮೊದಲ ಹಾಗೂ ಕೊನೆಯ ದಿನ ಆಹ್ವಾನಿತರಿಗೆ ಮಾತ್ರ ನೇರ ದರ್ಶನಕ್ಕೆ ಅವಕಾಶ ಇರುತ್ತದೆ. ಇವೆರಡು ದಿನಗಳ ಹೊರತಾಗಿ ಬೇರೆ ದಿನಗಳಲ್ಲಿ ಯಾವ ವಿಐಪಿಗೂ ದರುಶನ ಇಲ್ಲವೇ ಇಲ್ಲ ಎಂಬುದಾಗಿ ಸಚಿವರು ಸ್ಪಷ್ಟವಾಗಿ ತಿಳಿಸಿದ್ದಾರೆ. ‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts