More

    ಕತ್ತರಿಸಿದ ಗಾಯಕ್ಕೂ ಇನ್ನು ಹೊಲಿಗೆ ಬೇಕಾಗಿಲ್ಲ; ಸಜ್ಜಾಗಿದೆ ಗಾಯ ಮಾಯವಾಗಿಸೋ ಅಂಟು!

    ನವದೆಹಲಿ: ಕತ್ತರಿಸಿದ ಗಾಯ, ಅಂದರೆ ಹರಿತವಾದ ಆಯುಧದಿಂದ ದೇಹದ ಯಾವುದಾದರೂ ಭಾಗದ ಚರ್ಮ ಕತ್ತರಿಸಿಹೋಗಿದ್ದರೆ ಅದನ್ನು ಹೊಲಿಗೆ ಹಾಕುವುದು ಹಿಂದಿನಿಂದಲೂ ಹಾಗೂ ಈಗಲೂ ಇರುವಂಥ ಚಿಕಿತ್ಸೆ. ಆದರೆ ಇನ್ನುಮುಂದೆ ಅಂಥ ಅಗತ್ಯ ಇರಲಾರದು. ಏಕೆಂದರೆ ಗಾಯದ ಮೇಲೆ ಸುಮ್ಮನೆ ಒಂದು ಅಂಟನ್ನು ಸುರುವಿದರೆ ಸಾಕು ಚರ್ಮ ತಂತಾನೇ ಕೂಡಿಕೊಂಡು ಗಾಯ ಮಾಯವಾಗುತ್ತದೆ. ಅಂಥದ್ದೊಂದು ಸರ್ಜಿಕಲ್​ ಗ್ಲೂ ಒಂದನ್ನು ಈಗಾಗಲೇ ಸಂಶೋಧನೆ ಮಾಡಲಾಗಿದೆ.

    ಬ್ಲೇಡ್​, ಚಾಕು ಇತ್ಯಾದಿ ಚೂಪಾದ ಆಯುಧ ದೇಹಕ್ಕೆ ತಾಗಿದರೆ ಚರ್ಮದ ಮೇಲೆ ಗಾಯವಾಗುತ್ತದೆ. ಕೊಯ್ದು ಹೋದ ಚರ್ಮವನ್ನು ಹೊಲಿಗೆ ಹಾಕಿ ಕೂಡಿಸಬೇಕಾದ್ದು ಅನಿವಾರ್ಯ. ಆದರೆ ಈ ಸರ್ಜಿಕಲ್ ಗ್ಲೂ ಹಾಗಲ್ಲ.. ಇದನ್ನು ಸುಮ್ಮನೆ ಗಾಯದ ಮೇಲೆ ಸುರುವಿದರೆ ಒಂದೇ ನಿಮಿಷದಲ್ಲಿ ಗಾಯವಾದ ಭಾಗ ಕೂಡಿಕೊಂಡು, ಕಲೆಯೇ ಇಲ್ಲದಂತೆ ಗಾಯ ಮಾಯವಾಗುತ್ತದೆ.

    ಇದನ್ನೂ ಓದಿ: ಕೆಟ್ಟಿದ್ದ ಫ್ರಿಡ್ಜ್​ ರಿಪೇರಿಗೆಂದು ಬಂದವ ಮನೆಯೊಡತಿಯನ್ನೇ ಕೆಡಿಸಲು ಯತ್ನಿಸಿದ; ಆಕೆಯ ಪುತ್ರಿಯೊಂದಿಗೂ ಅಸಭ್ಯವಾಗಿ ವರ್ತಿಸಿದ…

    ಅಮೆರಿಕದ ಬಯೋಮೆಡಿಕಲ್ ಇಂಜಿನಿಯರ್ಸ್​, ಯುನಿವರ್ಸಿಟಿ ಆಫ್​ ಸಿಡ್ನಿ ಸಹಯೋಗದಲ್ಲಿ ಇಂಥದ್ದೊಂದು ಸರ್ಜಿಕಲ್ ಗ್ಲೂ ಅಭಿವೃದ್ಧಿಪಡಿಸಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಇದೊಂದು ಮಹತ್ವದ ಅನ್ವೇಷಣೆ ಎಂದೇ ಹೇಳಲಾಗುತ್ತಿದೆ. ಈ ಗ್ಲೂ ಮೂಲಕ ಸ್ಟಿಚ್ ಅಥವಾ ಸ್ಟ್ಯಾಪಲ್ ಮಾಡದೇ ಗಾಯವನ್ನು ಗುಣಪಡಿಸಬಹುದಾಗಿದೆ. ಮೆಟ್ರೋ ಎಂದು ಕರೆಯಲಾಗಿರುವ ಈ ಗ್ಲೂ ಬರೀ 60 ಸೆಕೆಂಡ್​ಗಳಲ್ಲಿ ಈ ಕೆಲಸವನ್ನು ಮಾಡಿಮುಗಿಸುತ್ತದೆ. ಈಗಾಗಲೇ ಇಲಿ ಹಾಗೂ ಹಂದಿಗಳ ಮೇಲೆ ಪ್ರಯೋಗಿಸಲಾಗಿರುವ ಈ ಅಂಟನ್ನು ಸದ್ಯದಲ್ಲೇ ಮನುಷ್ಯರ ಮೇಲೂ ಪ್ರಯೋಗಿಸಲಾಗುವುದು. ಇಂಥದ್ದೊಂದು ಗ್ಲೂ ಕುರಿತ ವಿಡಿಯೋವೊಂದನ್ನು ಬಯೋಕಾನ್ ಸಂಸ್ಥೆಯ ಅಧ್ಯಕ್ಷೆ ಕಿರಣ್​ ಮಜುಮ್ದಾರ್ ಷಾ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts