More

    ಹುಟ್ಟುತ್ತಲೇ ವೈದ್ಯನ ಮಾಸ್ಕ್​ ಎಳೆದು ತೆಗೆದ ಶಿಶು; ಕೊವಿಡ್​-19 ನಿರ್ಮೂಲನದ ಸಂಕೇತವಂತೆ !

    ನವದೆಹಲಿ: ಕರೊನಾ ಬರುವುದಕ್ಕೂ ಮೊದಲು ಮಾಸ್ಕ್ ಬಗ್ಗೆ ಅಷ್ಟೊಂದು ಅರಿವು ಇರಲಿಲ್ಲ. ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡುವಾಗ, ಸರ್ಜರಿ ಮಾಡುವಾಗ ಬಳಸುವ ಒಂದು ಸಾಧನ ಎಂಬುದಷ್ಟೇ ಅನೇಕರ ಪರಿಕಲ್ಪನೆಯಾಗಿತ್ತು. ಆದರೆ ಕರೊನಾ ಸೋಂಕು ದಾಂಗುಡಿ ಇಟ್ಟ ಬಳಿಕ ಮಾಸ್ಕ್ ಜೀವನದ ಒಂದು ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಇದೇ ಮಾಸ್ಕ್​ ಬಗ್ಗೆಯೇ ಅನೇಕ ವಿಧದ ಸುದ್ದಿಗಳೂ ಆಗಿವೆ.

    ಆಗತಾನೆ ಹುಟ್ಟಿದ ಮಗುವೊಂದು, ತನ್ನನ್ನು ಎತ್ತಿಕೊಂಡಿರುವ ವೈದ್ಯನ ಸರ್ಜಿಕಲ್​ ಮಾಸ್ಕ್​ನ್ನು ಎಳೆದು ತೆಗೆದ ಫೋಟೋ ಸಿಕ್ಕಾಪಟೆ ವೈರಲ್​ ಆಗುತ್ತಿದ್ದು, ಇದು ಈ ವರ್ಷದ ಅತ್ಯುತ್ತಮ ಚಿತ್ರ ಎಂಬ ಅಭಿಪ್ರಾಯ ನೆಟ್ಟಿಗರಿಂದ ವ್ಯಕ್ತವಾಗಿದೆ.

    ಆಗತಾನೆ ಜನಿಸಿದ ಮಗುವನ್ನು ವೈದ್ಯ ಎತ್ತಿಕೊಂಡಿದ್ದಾರೆ. ಆ ಪುಟ್ಟ ಮಗು ಅಳುತ್ತಿದ್ದು ಅದರ ಎಡಗೈನಿಂದ ವೈದ್ಯ ಧರಿಸಿದ್ದ ಮಾಸ್ಕ್​ನ್ನು ಎಳೆದಿದೆ. ಈ ಫೋಟೋವನ್ನು ಯುಎಇ ಮೂಲದ ಸ್ತ್ರೀರೋಗತಜ್ಞ ಡಾ. ಸಮೀರ್​ ಡಾ ಸಮರ್ ಚೀಬ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಪುಟ್ಟ ಹೆಣ್ಣು ಮಗು ವೈದ್ಯನ ಮುಖದ ಮೇಲಿದ್ದ ಮಾಸ್ಕ್​ನ್ನು ಹಿಡಿದು ಎಳೆದಿದ್ದರೆ, ಅವರು ನಗುತ್ತಿರುವುದನ್ನು ಫೋಟೋದಲ್ಲಿ ನೋಡಬಹುದು. ಇದನ್ನೂ ಓದಿ: ಹಾಥರಸ್​ ಘಟನೆ: ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿ ಡಿಲೀಟ್​​- ವೈದ್ಯರ ಮೇಲೆ ಸಿಬಿಐ ಅನುಮಾನ!

    ಇದು ಶುಭಸೂಚಕ. ಆಗ ತಾನೇ ಹುಟ್ಟಿದ ಮಗು ಮಾಸ್ಕ್​ನ್ನು ಕಿತ್ತೆಸೆಯುತ್ತಿದೆ ಎಂದರೆ ಜಗತ್ತಿನಿಂದ ಕರೊನಾ ತೊಲಗುವ ಲಕ್ಷಣ. ಶೀಘ್ರವೇ ಕೊವಿಡ್​-19 ಹೋಗಲಿದೆ ಎಂಬಂತ ಕಾಮೆಂಟ್​​ಗಳನ್ನು ನೆಟ್ಟಿಗರು ಬರೆದಿದ್ದಾರೆ. ಫೋಟೋ ಶೇರ್​ ಮಾಡಿಕೊಂಡ ವೈದ್ಯರೂ ಕೂಡ ಅದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
    ಇದು 2020ರ ಅದ್ಭುತ ಫೋಟೋ ಎಂದು ಅನೇಕರು ಹೇಳಿದ್ದರೆ, ಇನ್ನೊಂದಷ್ಟು ಮಂದಿ ತುಂಬ ಕ್ಯೂಟ್​ ಫೋಟೋ ಎಂದಿದ್ದಾರೆ. (ಏಜೆನ್ಸೀಸ್​)

    ಕರ್ನಾಟಕ-ಆಂಧ್ರಪ್ರದೇಶ ಗಡಿ; ಮರು ಗುರುತಿಗೆ ನಾಳೆ ಸರ್ವೇ ಶುರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts